Skin Care Tips: ಮುಖದಲ್ಲಿ ಮೊಡವೆ, ಕಲೆಗಳಿದ್ದರೆ ಚಿಂತೆ ಬೇಡ ಈ ಹಣ್ಣು ಸೇವಿಸಿ; ಚರ್ಮಕ್ಕೆ ಹೊಳಪು ನೀಡುತ್ತೆ ಪೇರಳೆ
Skin Care Tips: ಪೇರಳೆ ಹಣ್ಣು ಚರ್ಮಕ್ಕೆ ಪ್ರಯೋಜನಕಾರಿಯಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಟಮಿನ್ ಸಿ ಮತ್ತು ಬಿ ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪೇರಳೆ ಹಣ್ಣು ತಿನ್ನುವುದರಿಂದ, ಚರ್ಮಕ್ಕೆ ಅನೇಕ ಪ್ರಯೋಜನಗಳಿವೆ. ಚರ್ಮಕ್ಕೆ ಪೇರಳೆ ಹಣ್ಣಿನ ಪ್ರಯೋಜನಗಳ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
(1 / 8)
ಹೆಂಗಳೆಯರಿಗೆ ತಮ್ಮ ಚರ್ಮದ ಕಾಳಜಿ ತುಸು ಹೆಚ್ಚೇ ಇರುತ್ತದೆ. ಮುಖದಲ್ಲಿ ಮೊಡವೆ, ಕಲೆಗಳಾಗಿದ್ದರೆ ಚಿಂತಿತರಾಗುತ್ತಾರೆ. ಇದಕ್ಕಾಗಿ ಬ್ಯೂಟಿಪಾರ್ಲರ್‌ಗಳ ಮೊರೆ ಹೋಗುತ್ತಾರೆ. ಇದರ ಬದಲು ನೈಸರ್ಗಿಕವಾಗಿ ಸಿಗುವ ಪೇರಳೆ ಹಣ್ಣಿನಿಂದ ಚರ್ಮದ ಕಾಳಜಿ ಮಾಡಬಹುದು. ವಿಟಮಿನ್ ಸಿ ಮತ್ತು ಬಿ ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪೇರಳೆ ಹಣ್ಣು, ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
(pexels)(2 / 8)
ಈ ಹಣ್ಣು ಲೈಕೋಪೀನ್ ಮತ್ತು ವಿಟಮಿನ್ ಸಿ ನಂತಹ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಚರ್ಮದ ಕೋಶಗಳನ್ನು ಹಾನಿಗೊಳಿಸುವ ಫ್ರೀ ರಾಡಿಕಲ್‍ಗಳ ವಿರುದ್ಧ ಹೋರಾಡುತ್ತದೆ.
(pexels)(3 / 8)
ಈ ಹಣ್ಣಿನಲ್ಲಿರುವ ವಿಟಮಿನ್ ಸಿ ನೈಸರ್ಗಿಕವಾಗಿ ಹೊಳೆಯುವ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಮತ್ತು ತ್ವಚೆಯ ಹೊಳಪಿಗೆ ಸಹಾಯ ಮಾಡುತ್ತದೆ.
(pexels)(4 / 8)
ಪೇರಳೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳು, ಮೊಡವೆಗಳ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡುತ್ತವೆ. ಕೆಂಪು, ಊತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
(pexels)(5 / 8)
ಪೇರಳೆ ಹಣ್ಣಿನಲ್ಲಿ ನೀರಿನ ಅಂಶವು ಅಧಿಕವಾಗಿದೆ. ಇದು ಚರ್ಮವನ್ನು ತೇವಾಂಶಯುಕ್ತವಾಗಿರಿಸಲು ಸಹಕಾರಿಯಾಗಿದೆ. ಇದು ಚರ್ಮವನ್ನು ಮೃದುವಾಗಿಸುತ್ತದೆ. ಒಣ ಚರ್ಮ ಹೊಂದಿರುವವರಿಗೆ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿ.
(pexels)(6 / 8)
ಪೇರಳೆಯಲ್ಲಿರುವ ನೈಸರ್ಗಿಕ ಕಿಣ್ವಗಳು ಸತ್ತ ಚರ್ಮದ ಕೋಶ (ಡೆಡ್ ಸ್ಕಿನ್) ಗಳನ್ನು ತೆಗೆದುಹಾಕುತ್ತವೆ. ಚರ್ಮವನ್ನು ತಾಜಾ ಮತ್ತು ಮೃದುವಾಗಿರಿಸುತ್ತದೆ. ಚರ್ಮದ ಹೊಳಪು ಹೆಚ್ಚಲು ಸಹಕಾರಿ.
(pexels)(7 / 8)
ಮುಖವು ಹಾನಿಕಾರಕ ಯುವಿ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಚರ್ಮ ಸುಕ್ಕಾಗುವಿಕೆ, ಕಪ್ಪು ಕಲೆ ಇತ್ಯಾದಿ ಉಂಟಾಗುತ್ತದೆ. ಸೂರ್ಯನ ಕಿರಣಗಳು ಚರ್ಮದ ಕೋಶಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಲೈಕೋಪೀನ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಪೇರಳೆ ಹಣ್ಣು, ಸೂರ್ಯನ ಬಿಸಿಲಿನಿಂದ ಚರ್ಮಕ್ಕಾಗುವ ಹಾನಿಯನ್ನು ತಪ್ಪಿಸುತ್ತದೆ.
(pexels)ಇತರ ಗ್ಯಾಲರಿಗಳು