PM Modi: ನವಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿ: ಏರೋ ಇಂಡಿಯಾ 2023 ಉದ್ಘಾಟಸಿದ ಪ್ರಧಾನಿ ಮೋದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pm Modi: ನವಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿ: ಏರೋ ಇಂಡಿಯಾ 2023 ಉದ್ಘಾಟಸಿದ ಪ್ರಧಾನಿ ಮೋದಿ

PM Modi: ನವಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿ: ಏರೋ ಇಂಡಿಯಾ 2023 ಉದ್ಘಾಟಸಿದ ಪ್ರಧಾನಿ ಮೋದಿ

  • ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಯಲಹಂಕ ವಾಯು ನಿಲ್ದಾಣದಲ್ಲಿ, ಏರೋ ಇಂಡಿಯಾ ಶೋ 2023ಗೆ ವಿದ್ಯುಕ್ತ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ನವ ಭಾರತದ ಶಕ್ತಿಯ ಪ್ರದರ್ಶನ ಎಂದು ಬಣ್ಣಿಸಿದರು. ಈ ಕುರಿತು ಇಲ್ಲಿದೆ ಮಾಹಿತಿ..

ನವಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿಯಾಗುತ್ತಿದೆ. ಹೊಸ ಎತ್ತರವೇ ನವ ಭಾರತದ ಸತ್ಯ ಎಂಬುದಕ್ಕೆ ಬೆಂಗಳೂರಿನ ಆಕಾಶವೇ ಸಾಕ್ಷಿಯಾಗಿದೆ. ಇಂದು, ರಾಷ್ಟ್ರವು ಹೊಸ ಎತ್ತರವನ್ನು ಮುಟ್ಟುತ್ತಿದೆ ಮತ್ತು ಅದನ್ನು ದಾಟುತ್ತಿದೆ ಎಂದು ಪ್ರಧಾನಿ ತಮ್ಮ ಮೋದಿ ಏರೋ ಇಂಡಿಯಾ 2023ರ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
icon

(1 / 5)

(ANI)

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನವ ಭಾರತದ ಹೊಸ ವಿಧಾನವನ್ನು ಪ್ರತಿಬಿಂಬಿಸುತ್ತದೆ. ಅದನ್ನು ಕೇವಲ ಪ್ರದರ್ಶನ ಎಂದು ಪರಿಗಣಿಸುತ್ತಿದ್ದ ಕಾಲವೊಂದಿತ್ತು. ಕಳೆದ ಕೆಲವು ವರ್ಷಗಳಲ್ಲಿ, ದೇಶವು ಈ ಗ್ರಹಿಕೆಯನ್ನು ಬದಲಾಯಿಸಿದೆ. ಇಂದು, ಇದು ಕೇವಲ ಪ್ರದರ್ಶನವಲ್ಲ, ಬದಲಿಗೆ ಆದರೆ ಭಾರತದ ಶಕ್ತಿಯಾಗಿದೆ. ಇದು ಭಾರತೀಯ ರಕ್ಷಣಾ ಉದ್ಯಮದ ವ್ಯಾಪ್ತಿ ಮತ್ತು ಆತ್ಮ ವಿಶ್ವಾಸದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
icon

(2 / 5)

ಇಂದು ಭಾರತ ವಿಶ್ವದಲ್ಲಿ ರಕ್ಷಣಾ ಕಂಪನಿಗಳಿಗೆ ಕೇವಲ ಮಾರುಕಟ್ಟೆಯಾಗಿಲ್ಲ. ಭಾರತ ಇಂದು ಸಂಭಾವ್ಯ ರಕ್ಷಣಾ ಪಾಲುದಾರ ರಾಷ್ಟ್ರವಾಗಿದೆ. ಈ ಸಹಭಾಗಿತ್ವವು ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚು ಮುಂದಿರುವ ರಾಷ್ಟ್ರಗಳು, ತಮ್ಮ ರಕ್ಷಣಾ ಅವಶ್ಯಕತೆಗಳಿಗಾಗಿ ವಿಶ್ವಾಸಾರ್ಹ ಪಾಲುದಾರರನ್ನು ಹುಡುಕುತ್ತಿರುವ ತಾಣವನ್ನಾಗಿ ಭಾರತವನ್ನು ಪರಿವರ್ತಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
icon

(3 / 5)

21ನೇ ಶತಮಾನದ ನವ ಭಾರತವು ಈಗ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಅಥವಾ ಕಠಿಣ ಪರಿಶ್ರಮದಲ್ಲಿ ಹಿಂದುಳಿಯುವುದಿಲ್ಲ. ಸುಧಾರಣೆಗಳ ಹಾದಿಯಲ್ಲಿ ನಾವು ಸರ್ವ ಸನ್ನದ್ಧರಾಗಿದ್ದೇವೆ. ನಾವು ಪ್ರತಿ ವಲಯದಲ್ಲಿ ಕ್ರಾಂತಿಯನ್ನು ತರುತ್ತಿದ್ದೇವೆ. ದಶಕಗಳಿಂದ ಅತಿದೊಡ್ಡ ರಕ್ಷಣಾ ಆಮದುದಾರರಾಗಿದ್ದ ದೇಶ, ಈಗ 75 ದೇಶಗಳಿಗೆ ರಕ್ಷಣಾ ಉಪಕರಣಗಳುನ್ನು ರಫ್ತು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
icon

(4 / 5)

ಇದೇ ವೇಳೆ ಪ್ರಧಾನಿ ಮೋದಿ ಅವರು  ಏರೋ ಇಂಡಿಯಾ 2023ರ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು
icon

(5 / 5)

ಇತರ ಗ್ಯಾಲರಿಗಳು