ಹೊಸ ರೀತಿಯಲ್ಲಿ ಆಕರ್ಷಕವಾಗಿ ಕಾಣಿಸುವ ಕುರ್ತಾ ಹೊಲಿಸುವ ಆಸೆ ಇದೆಯಾ; ಹಾಗಾದ್ರೆ ಸ್ಲೀವ್‌ಲೆಸ್ ವಿನ್ಯಾಸ ಟ್ರೈ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೊಸ ರೀತಿಯಲ್ಲಿ ಆಕರ್ಷಕವಾಗಿ ಕಾಣಿಸುವ ಕುರ್ತಾ ಹೊಲಿಸುವ ಆಸೆ ಇದೆಯಾ; ಹಾಗಾದ್ರೆ ಸ್ಲೀವ್‌ಲೆಸ್ ವಿನ್ಯಾಸ ಟ್ರೈ ಮಾಡಿ

ಹೊಸ ರೀತಿಯಲ್ಲಿ ಆಕರ್ಷಕವಾಗಿ ಕಾಣಿಸುವ ಕುರ್ತಾ ಹೊಲಿಸುವ ಆಸೆ ಇದೆಯಾ; ಹಾಗಾದ್ರೆ ಸ್ಲೀವ್‌ಲೆಸ್ ವಿನ್ಯಾಸ ಟ್ರೈ ಮಾಡಿ

ಬೇಸಿಗೆಯ ದಿನಗಳಲ್ಲಿ ಸ್ಲೀವ್‌ಲೆಸ್‌ ಡ್ರೆಸ್‌ಗಳು ಹೆಚ್ಚು ಆರಾಮದಾಯಕ. ಅವುಗಳನ್ನು ಧರಿಸುವುದರಿಂದ ಸ್ಟೈಲಿಶ್‌ ಹಾಗೂ ಸುಂದರವಾಗಿಯೂ ಕಾಣಿಸಿಕೊಳ್ಳಬಹುದು. ತೋಳಿಲ್ಲದ ಹೊಸ ವಿನ್ಯಾಸದ ಕುರ್ತಾಗಳು ಎಲ್ಲಾ ಸಂದರ್ಭಗಳಿಗೂ ಹೊಂದಿಕೆಯಾಗುತ್ತವೆ. ಸ್ಲೀವ್‌ಲೆಸ್‌ ಕುರ್ತಾದಲ್ಲಿ ಹೊಸ ವಿನ್ಯಾಸ ಹುಡುಕುತ್ತಿದ್ದರೆ ಇಲ್ಲಿದೆ ಸ್ಟೈಲಿಶ್‌ ಆಗಿ ಕಾಣಿಸುವ ಡಿಸೈನ್‌ಗಳು.

ಬೇಸಿಗೆಯ ದಿನಗಳಲ್ಲೂ ಆರಾಮದಾಯಕವಾಗಿರುವ ಮತ್ತು ಸ್ಟೈಲಿಶ್ ಆಗಿ ಕಾಣುವ ಬಟ್ಟೆಗಳನ್ನು ಧರಿಸಬೇಕೆಂದರೆ ಸ್ಲೀವ್‌ ಲೆಸ್‌ ಡ್ರೆಸ್‌ಗಳನ್ನು ಪ್ರಯತ್ನಿಸಬಹುದು. ಎಲ್ಲಾ ವಿಶೇಷ ಸಂದರ್ಭಗಳಿಗೂ ಹೊಂದಿಕೆಯಾಗುವ ತೋಳಿಲ್ಲದ ಕುರ್ತಾಗಳು ನಿಮಗೆ ಸೊಗಸಾದ ನೋಟವನ್ನು ನೀಡುತ್ತದೆ. ತೋಳಿಲ್ಲದ ಕುರ್ತಾಗಳು ಸುಂದರವಾಗಿ ಕಾಣುವುದಲ್ಲದೆ, ಟ್ರೆಂಡಿಂಗ್‌ ವಿಷಯದಲ್ಲೂ ಸದ್ಯ ಮುಂಚೂಣಿಯಲ್ಲಿದೆ. ಹೊಸ ಡ್ರೆಸ್‌ ಹೊಲಿಸುವ ಯೋಚನೆಯಲ್ಲಿ ನೀವಿದ್ದರೆ, ಈ ತೋಳಿಲ್ಲದ ಆಕರ್ಷಕ ವಿನ್ಯಾಸಗಳನ್ನು ಖಂಡಿತವಾಗಿ ಪರಿಶೀಲಿಸಿ.
icon

(1 / 11)

ತೋಳಿಲ್ಲದ ಕುರ್ತಾ ಹಾಗೂ ಸ್ಟೈಲಿಶ್‌ ಆಗಿಯೂ ಕಾಣಬೇಕೆಂದರೆ ನೂಡಲ್‌ ಸ್ಟ್ರೆಪ್‌ ಮಾದರಿಯಲ್ಲಿ ಕುರ್ತಾವನ್ನು ಹೊಲಿಸಿ. ಇದನ್ನು ಪಲಾಜೋ ಪ್ಯಾಂಟ್‌ ಜೊತೆ ಮ್ಯಾಚ್‌ ಮಾಡಿಕೊಳ್ಳಿ. ಇದು ನಿಮಗೆ ಎಥ್ನಿಕ್‌ ಲುಕ್‌ ನೀಡುತ್ತದೆ. ಜೊತೆಗೆ ಎಲ್ಲರ ನಡುವೆ ನೀವು ಡಿಫರೆಂಟ್‌ ಆಗಿ ಕಾಣುವಂತೆ ಮಾಡುತ್ತದೆ.
icon

(2 / 11)

ಸ್ಲೀವ್‌ಲೆಸ್‌ ಕುರ್ತಾಗಳಿಗೆ ಹೈ ನೆಕ್‌ ಹೆಚ್ಚು ಹೊಂದಿಕೆಯಾಗುತ್ತದೆ. ಹಾಲ್ಟರ್‌ ನೆಕ್‌ ಬದಲಿಗೆ ಇದನ್ನು ಪ್ರಯತ್ನಿಸಿ. ಈ ರೀತಿಯ ಕುರ್ತಾಗಳು ಆಫೀಸ್‌ ಮತ್ತು ಕಾಲೇಜುಗಳಲ್ಲಿ ಸ್ಟೈಲ್‌ ಆಗಿ ಮಿಂಚುವಂತೆ ಮಾಡುತ್ತದೆ. ಈ ರೀತಿಯ ಕುರ್ತಾಗಳನ್ನು ಹೊಲಿಸುವುದು ಕೂಡಾ ತುಂಬಾ ಸುಲಭ.
icon

(3 / 11)

ಬೋಟ್‌ನೆಕ್‌ ಕುರ್ತಾಗಳನ್ನು ಹೊಲಿಸುವ ಯೋಚನೆಯಿದ್ದರೆ ಅದಕ್ಕೆ ಸ್ಲೀವ್‌ಲೆಸ್‌ ವಿನ್ಯಾಸ ಹೆಚ್ಚು ಹೊಂದಿಕೆಯಾಗುತ್ತದೆ. ಎಲ್ಲಾ ಸಂದರ್ಭಗಳಿಗೂ ಬೆಸ್ಟ್‌ ಎನಿಸುವ ಈ ವಿನ್ಯಾಸ ನಿಮ್ಮ ಆಫೀಸಿನ ವಿಶೇಷ ಕಾರ್ಯಕ್ರಮಗಳಿಗೆ ಧರಿಸಲು ಉತ್ತಮವಾಗಿದೆ.
icon

(4 / 11)

ನಿಮ್ಮ ಕುರ್ತಾಗೆ ಆಕರ್ಷಕ ನೋಟ ನೀಡಲು ಬಯಸಿದರೆ ಅದಕ್ಕೆ ಎ–ಲೈನ್ ನೆಕ್ ಜೊತೆಗೆ ತೋಳಿಲ್ಲದ ಕುರ್ತಾ ಹೊಲಿಸಿ. ಇದು ಲಾಂಗ್‌ ಕುರ್ತಾಕ್ಕೆ ಹೆಚ್ಚು ಸೂಟ್‌ ಆಗುತ್ತದೆ.
icon

(5 / 11)

ಕಾಲೇಜಿಗೆ ಹೋಗುವ ಮತ್ತು ಕಛೇರಿಗೆ ಹೋಗುವ ಹುಡುಗಿಯರಿಗೆ ಇದು ಪರಿಪೂರ್ಣ ವಿನ್ಯಾಸದ ಕುರ್ತಾ ಆಗಿದೆ. ಎ–ಲೈನ್ ಕಾಲರ್‌ ಕುರ್ತಾಗಳಿಗೆ ಸ್ಲೀವ್‌ ಲೆಸ್‌ ಡಿಸೈನ್‌ ಹೆಚ್ಚು ಹೊಂದಿಕೆಯಾಗುತ್ತದೆ ಮತ್ತು ಆಕರ್ಷಕವಾಗಿಯೂ ಕಾಣಿಸುತ್ತದೆ.
icon

(6 / 11)

ನೀವು ಇತರರಿಗಿಂತ ಭಿನ್ನವಾಗಿ ಕಾಣಿಸಲು ಬಯಸಿದರೆ ತೋಳಿಲ್ಲದ ಶಾರ್ಟ್‌ ಕುರ್ತಾಗಳನ್ನು ಪ್ರಯತ್ನಿಸಿ. ಝೀರೊ ನೆಕ್‌ ಮತ್ತು ಕಡಿಮೆ ಉದ್ದದ ಕುರ್ತಾಗಳು ಮಾಡರ್ನ್‌ ಲುಕ್‌ ಕೊಡುತ್ತದೆ.
icon

(7 / 11)

ವಿ–ನೆಕ್‌ ಮತ್ತು ತೋಳುಗಳಲ್ಲಿದ ಕುರ್ತಾ ಹೊಲಿಸಿ. ಕುರ್ತಾದ ಉದ್ದ ಕೂಡಾ ಕಡಿಮೆ ಇರಲಿ. ಇದು ಪ್ಯಾಂಟ್‌ ಮತ್ತು ಜೀನ್‌ ಎರಡರ ಜೊತೆಗೆ ಸುಂದರವಾಗಿ ಕಾಣುತ್ತದೆ.
icon

(8 / 11)

ಅನಾರ್ಕಲಿ ವಿನ್ಯಾಸದ ಕುರ್ತಾಗಳಿಗೆ ಸ್ಲೀವ್‌ ಲೆಸ್‌ ಹೊಲಿಸಿ. ಸಡಿಲವಾದ ಪ್ಯಾಂಟ್ ಮತ್ತು ಲೆಗಿನ್‌ ಇವೆರಡರ ಮೇಲೂ ಧರಿಸಬಹುದು.
icon

(9 / 11)

ಶಾರ್ಟ್‌ ಕುರ್ತಾಕ್ಕೆ ಹಾಲ್ಟರ್‌ ನೆಕ್‌ ಮತ್ತು ಸ್ಲೀವ್‌ ಲೆಸ್‌ ಹೊಲಿಸಿ. ಈ ವಿನ್ಯಾಸದ ಕುರ್ತಾಗಳು ಪಾಟರ್ನ್‌ ಪ್ಯಾಂಟ್‌ಗಳಿಗೆ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ.
icon

(10 / 11)

ಮ್ಯಾಂಡರಿನ್‌ ಕಾಲರ್ ಜೊತೆಗೆ ತೋಳಿಲ್ಲದ ಕುರ್ತಾ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ. ನೀವು ವರ್ಕಿಂಗ್‌ ವುಮನ್‌ ಆಗಿದ್ದರೆ ನಿಮ್ಮ ಕುರ್ತಾ ಸಂಗ್ರಹದಲ್ಲಿ ಇದಕ್ಕೂ ಒಂದು ಜಾಗವಿರಲಿ. ಪ್ರತಿದಿನ ಹೊಸ ತನವನ್ನು ಇಷ್ಟ ಪಡುವವರಿಗೆ ಈ ರೀತಿಯ ವಿವಿಧ ವಿನ್ಯಾಸದ ಕುರ್ತಾಗಳು ಹೆಚ್ಚು ಸೂಕ್ತವಾಗಿರುತ್ತದೆ.
icon

(11 / 11)

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in

ಇತರ ಗ್ಯಾಲರಿಗಳು