ಇತಿಹಾಸ ನಿರ್ಮಿಸಿದ ಸ್ಮೃತಿ ಮಂಧಾನ; ವನಿತೆಯರ ಕ್ರಿಕೆಟ್‌ನಲ್ಲಿ ಈ ವಿಶ್ವದಾಖಲೆ ನಿರ್ಮಿಸಿದ ಮೊದಲ ಆಟಗಾರ್ತಿ
- ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಮಹಿಳೆಯರ ಕ್ರಿಕೆಟ್ ತಂಡದ ಉಪನಾಯಕಿ ಸ್ಮತಿ ಮಂಧಾನ ಭರ್ಜರಿ ಶತಕ ಸಿಡಿಸಿದ್ದಾರೆ. ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಸ್ಟೈಲಿಶ್ ಆಟಗಾರ್ತಿ, ವಿಶೇಷ ದಾಖಲೆ ನಿರ್ಮಿಸಿದ್ದಾರೆ.
- ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಮಹಿಳೆಯರ ಕ್ರಿಕೆಟ್ ತಂಡದ ಉಪನಾಯಕಿ ಸ್ಮತಿ ಮಂಧಾನ ಭರ್ಜರಿ ಶತಕ ಸಿಡಿಸಿದ್ದಾರೆ. ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಸ್ಟೈಲಿಶ್ ಆಟಗಾರ್ತಿ, ವಿಶೇಷ ದಾಖಲೆ ನಿರ್ಮಿಸಿದ್ದಾರೆ.
(1 / 6)
ಟೀಮ್ ಇಂಡಿಯಾ ಉಪನಾಯಕಿ, ಆಸೀಶ್ ವಿರುದ್ಧದ ಶತಕದೊಂಧಿಗೆ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಏಕದಿನ ಶತಕಗಳನ್ನು ಬಾರಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(BCCI X)(2 / 6)
ಆಸೀಸ್ ವನಿತೆಯರು ನೀಡಿದ್ದ 299 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡದ ಪರ, ಆರಂಭಿಕ ಆಟಗಾರ್ತಿ ಮಂಧನಾ 109 ಎಸೆತಗಳಲ್ಲಿ 105 ರನ್ ಬಾರಿಸಿದರು. ಎಡಗೈ ಬ್ಯಾಟರ್ ಕ್ರೀಸ್‌ನಲ್ಲಿರುವವರೆಗೂ ಪಂದ್ಯ ಭಾರತದ ಪರವಾಗಿತ್ತು. ಆದರೆ ಸ್ಮೃತಿ ನಿರ್ಗಮನದ ನಂತರ, ಟೀಮ್ ಇಂಡಿಯಾ ಬ್ಯಾಟಿಂಗ್ ಕಳಪೆಯಾಯ್ತು.
(BCCI X)(3 / 6)
ಪರ್ತ್‌ನ ಡಬ್ಲ್ಯೂಎಸಿಎ ಮೈದಾನದಲ್ಲಿ ಅದ್ಭುತ ಶತಕದೊಂದಿಗೆ ಸ್ಮೃತಿ ಮಂಧಾನ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಅವರು ಈ ವರ್ಷ ಭಾರತದ ಪರ ಉತ್ತಮ ಫಾರ್ಮ್‌ನಲ್ಲಿರುವ ಬ್ಯಾಟರ್ ಆಗಿದ್ದಾರೆ.
(4 / 6)
ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಏಕದಿನ ಶತಕಗಳನ್ನು ಗಳಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ನಾಯಕಿ ಪಾತ್ರರಾದರು. ಈ ಹಿಂದೆ ಏಳು ಮಹಿಳಾ ಕ್ರಿಕೆಟಿಗರು ಒಂದೇ ವರ್ಷದಲ್ಲಿ ಮೂರು ಏಕದಿನ ಶತಕಗಳನ್ನು ಬಾರಿಸಿದ್ದರು. ಆದರೆ, ನಾಲ್ಕು ಶತಕ ದಾಖಲಾಗಿದ್ದು ಇದೇ ಮೊದಲು.
(5 / 6)
ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ಟ್ (2024), ಮೆಗ್ ಲ್ಯಾನಿಂಗ್ (2016), ನ್ಯಾಟ್ ಸ್ಕಿವರ್-ಬ್ರಂಟ್ (2023), ಸೋಫಿ ಡಿವೈನ್ (2018), ಸಿದ್ರಾ ಅಮೀನ್ (2022), ಆಮಿ ಸ್ಯಾಟರ್ಥ್ವೈಟ್ (2016), ಬೆಲಿಂಡಾ ಕ್ಲಾರ್ಕ್ (1997) ಈವರೆಗೆ ಒಂದೇ ವರ್ಷ ಮೂರು ಶತಕಗಳನ್ನು ಸಿಡಿಸಿದ್ದಾರೆ.
ಇತರ ಗ್ಯಾಲರಿಗಳು