Smriti Mandhana: ಏಕದಿನ ಕ್ರಿಕೆಟ್​ನಲ್ಲಿ 4,000 ರನ್ ಪೂರೈಸಿ ವಿಶ್ವದಾಖಲೆ ನಿರ್ಮಿಸಿದ ಸ್ಮೃತಿ ಮಂಧಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Smriti Mandhana: ಏಕದಿನ ಕ್ರಿಕೆಟ್​ನಲ್ಲಿ 4,000 ರನ್ ಪೂರೈಸಿ ವಿಶ್ವದಾಖಲೆ ನಿರ್ಮಿಸಿದ ಸ್ಮೃತಿ ಮಂಧಾನ

Smriti Mandhana: ಏಕದಿನ ಕ್ರಿಕೆಟ್​ನಲ್ಲಿ 4,000 ರನ್ ಪೂರೈಸಿ ವಿಶ್ವದಾಖಲೆ ನಿರ್ಮಿಸಿದ ಸ್ಮೃತಿ ಮಂಧಾನ

  • ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂಧಾನ ಏಕದಿನ ಕ್ರಿಕೆಟ್​​ನಲ್ಲಿ​ 4000 ರನ್ ಪೂರೈಸಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಈ ಅಮೋಘ ಸಾಧನೆ ಮಾಡಿದ್ದಾರೆ. ಇದರೊಂದಿಗೆ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಮಹಿಳೆಯರ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 4000 ರನ್ ಪೂರೈಸಿರುವ ಟಾಪ್​-5 ಆಟಗಾರ್ತಿಯರ ಪಟ್ಟಿಯನ್ನು ಒಮ್ಮೆ ನೋಡೋಣ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಸ್ಮೃತಿ ಮಂಧಾನ ಅವರು ತಮ್ಮ ಮಾಜಿ ನಾಯಕಿ ಮಿಥಾಲಿ ರಾಜ್ ದಾಖಲೆ ಮುರಿದಿದ್ದಾರೆ. 
icon

(1 / 7)

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 4000 ರನ್‌ ಪೂರೈಸಿದ ದಾಖಲೆ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಅವರ ಹೆಸರಿನಲ್ಲಿದೆ. ಅವರು ಕೇವಲ 86 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
icon

(2 / 7)

ಎರಡನೇ ಸ್ಥಾನದಲ್ಲೂ ಆಸ್ಟ್ರೇಲಿಯಾದ ಆಟಗಾರ್ತಿಯೇ ಸ್ಥಾನ ಪಡೆದಿದ್ದಾರೆ. ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಅವರು 89 ಇನ್ನಿಂಗ್ಸ್​​ಗಳಲ್ಲಿ 4000 ರನ್‌ ಪೂರ್ಣಗೊಳಿಸಿದ್ದಾರೆ.
icon

(3 / 7)

ಭಾರತದ ಸ್ಟಾರ್​ ಬ್ಯಾಟರ್ ಸ್ಮೃತಿ ಮಂಧಾನ ಜನವರಿ 10ರಂದು ಐರ್ಲೆಂಡ್ ವಿರುದ್ಧ 41 ರನ್ ಸಿಡಿಸಿ ಏಕದಿನ ಕ್ರಿಕೆಟ್‌ನಲ್ಲಿ 4000 ರನ್‌ ಪೂರ್ಣಗೊಳಿಸಿದರು. ಅವರು ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಹಾಗೂ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಂಧಾನ 95 ಇನ್ನಿಂಗ್ಸ್‌ ಈ ಸಾಧನೆ ಮಾಡಿದ್ದಾರೆ.
icon

(4 / 7)

(PTI)

ಸೌತ್ ಆಫ್ರಿಕಾದ ಲಾರಾ ವೋಲ್ವಾರ್ಡ್ ಮತ್ತು ಆಸ್ಟ್ರೇಲಿಯಾದ ಕರೆನ್ ರೋಲ್ಟನ್ ಅವರು ವೇಗವಾಗಿ 4000 ರನ್ ಪೂರೈಸಿದ 4ನೇ ಮತ್ತು 5ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಾರಾ 96 ಇನ್ನಿಂಗ್ಸ್​​​ಗಳಲ್ಲಿ ಮತ್ತು ಕರೆನ್ 103 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
icon

(5 / 7)

ಭಾರತ ಪರ ವೇಗವಾಗಿ 4000 ರನ್ ಪೂರೈಸಿದ ದಾಖಲೆ ಮಿಥಾಲಿ ರಾಜ್ ಹೆಸರಿನಲ್ಲಿತ್ತು. ಆದರೀಗ ಮಂಧಾನ ಈ ದಾಖಲೆಯನ್ನು ಮುರಿದಿದ್ದಾರೆ. ಮಂಧಾನ 100 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದಾರೆ.
icon

(6 / 7)

ಕ್ಷಣಕ್ಷಣದ ಕ್ರೀಡಾ ಸುದ್ದಿಗಳ ಅಪ್ಡೇಟ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(7 / 7)

ಇತರ ಗ್ಯಾಲರಿಗಳು