Alasanda Vada: ಚುಮು ಚುಮು ಚಳಿ, ಜಿಟಿ ಜಿಟಿ ಮಳೆಗೆ ಹೇಳಿ ಮಾಡಿಸಿದಂತಿದೆ ಈ ಸ್ನಾಕ್ಸ್‌; ಗರಿ ಗರಿ ರುಚಿಯಾದ ಅಲಸಂದೆ ಮಸಾಲೆ ವಡೆ ರೆಸಿಪಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Alasanda Vada: ಚುಮು ಚುಮು ಚಳಿ, ಜಿಟಿ ಜಿಟಿ ಮಳೆಗೆ ಹೇಳಿ ಮಾಡಿಸಿದಂತಿದೆ ಈ ಸ್ನಾಕ್ಸ್‌; ಗರಿ ಗರಿ ರುಚಿಯಾದ ಅಲಸಂದೆ ಮಸಾಲೆ ವಡೆ ರೆಸಿಪಿ

Alasanda Vada: ಚುಮು ಚುಮು ಚಳಿ, ಜಿಟಿ ಜಿಟಿ ಮಳೆಗೆ ಹೇಳಿ ಮಾಡಿಸಿದಂತಿದೆ ಈ ಸ್ನಾಕ್ಸ್‌; ಗರಿ ಗರಿ ರುಚಿಯಾದ ಅಲಸಂದೆ ಮಸಾಲೆ ವಡೆ ರೆಸಿಪಿ

ಹೊರಗೆ ಜಿಟಿ ಜಿಟಿ ಮಳೆ, ಜೊತೆಗೆ ಚಳಿ. ಈ ಸಮಯದಲ್ಲಿ ಹೊರಗೆ ಹೋಗಲು ಯಾರೂ ಇಷ್ಟಪಡುವುದಿಲ್ಲ. ಮನೆಯಲ್ಲೇ ಬಿಸಿ ಬಿಸಿ ಕಾಫಿ ಕುಡಿಯುತ್ತಾ ಅದರ ಜೊತೆಗೆ ಸ್ನಾಕ್ಸ್‌ ಮೆಲ್ಲುತ್ತಾ ತಮಗಿಷ್ಟವಾದ ಸಿನಿಮಾ ನೋಡುತ್ತಾ ಕುಳಿತುಕೊಳ್ಳೋಣ ಎನಿಸದೆ ಇರದು. 

ಈ ಮಾನ್ಸೂನ್‌ ಸಂಜೆಗೆ ಏನಾದರೂ ಕುರುಕಲು ಬೇಕು ಅಂತ ನಾಲಿಗೆ ಬಯಸುವುದು ಸಹಜ. ಬಜ್ಜಿ, ಪಕೋಡಾ, ಸಮೋಸಾ, ಮಸಾಲೆ ಪೂರಿ, ವಡೆ ಹೀಗೆ ಏನು ಬೇಕಾದ್ರೂ ಮಾಡಿ ತಿನ್ನಬಹುದು. 
icon

(1 / 11)

ಈ ಮಾನ್ಸೂನ್‌ ಸಂಜೆಗೆ ಏನಾದರೂ ಕುರುಕಲು ಬೇಕು ಅಂತ ನಾಲಿಗೆ ಬಯಸುವುದು ಸಹಜ. ಬಜ್ಜಿ, ಪಕೋಡಾ, ಸಮೋಸಾ, ಮಸಾಲೆ ಪೂರಿ, ವಡೆ ಹೀಗೆ ಏನು ಬೇಕಾದ್ರೂ ಮಾಡಿ ತಿನ್ನಬಹುದು. (PC: Chaitraʼs Abhiruchi)

ಚೈತ್ರಾಸ್‌ ಅಭಿರುಚಿಯ ಚೈತ್ರ ಇಲ್ಲಿ ಅಲಸಂದೆ ಮಸಾಲೆ ವಡೆ ರೆಸಿಪಿ ಹೇಳಿಕೊಡುತ್ತಿದ್ದಾರೆ. ಇದಕ್ಕೆ ಬೇಕಾಗುವ ಸಾಮಗ್ರಿಗಳು ಹೀಗಿವೆ.  ಅಲಸಂದೆ ಕಾಳು - 2 ಕಪ್‌, ಸಬ್ಸಿಗೆ ಸೊಪ್ಪು - 1 ಕಟ್ಟು, ಈರುಳ್ಳಿ - 2 , ಹಸಿಮೆಣಸಿನ ಕಾಯಿ - 4 , ಹಿಂಗು - ಚಿಟಿಕೆ , ಅಕ್ಕಿಹಿಟ್ಟು - 1 ಸ್ಪೂನ್‌ , ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 1 ಸ್ಪೂನ್ , ಉಪ್ಪು - ರುಚಿಗೆ ತಕ್ಕಷ್ಟು , ಎಣ್ಣೆ - ಕರಿಯಲು                         
icon

(2 / 11)

ಅಲಸಂದೆ ಕಾಳನ್ನು 5 ಗಂಟೆಗಳ ಕಾಲ ನೆನೆಸಿ ನೀರು ಶೋಧಿಸಿ ಮಿಕ್ಸಿಯಲ್ಲಿ ಪಲ್ಸ್‌ ಮೋಡ್‌ನಲ್ಲಿ ತರಿ ತರಿಯಾಗಿ ಗ್ರೈಂಡ್‌ ಮಾಡಿಕೊಳ್ಳಿ. (ನುಣ್ಣಗೆ ರುಬ್ಬಬೇಡಿ)
icon

(3 / 11)

ಗ್ರೈಂಡ್‌ ಮಾಡಿದ ಅಲಸಂದೆ ಪೇಸ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಅದರೊಂದಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ. 
icon

(4 / 11)

ಜೊತೆಗೆ ಸಣ್ಣಗೆ ಹೆಚ್ಚಿದ ಸಬ್ಸಿಗೆ ಸೊಪ್ಪು, ಹಸಿಮೆಣಸಿನಕಾಯಿ, ಹಿಂಗು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಉಪ್ಪು, ಒಂದೆರಡು ಸ್ಪೂನ್‌ ಬಿಸಿ ಎಣ್ಣೆ ಸೇರಿಸಿ. 
icon

(5 / 11)

ಕೊನೆಗೆ ಬೈಂಡಿಂಗ್‌ಗಾಗಿ ಅಕ್ಕಿಹಿಟ್ಟು ಸೇರಿಸಿ ಎಲ್ಲವನ್ನೂ ಮಿಕ್ಸ್‌ ಮಾಡಿ,
icon

(6 / 11)

ಕೊನೆಗೆ ಬೈಂಡಿಂಗ್‌ಗಾಗಿ ಅಕ್ಕಿಹಿಟ್ಟು ಸೇರಿಸಿ ಎಲ್ಲವನ್ನೂ ಮಿಕ್ಸ್‌ ಮಾಡಿ,

ಅಗತ್ಯವಿದ್ದರೆ ಒಂದೆರಡು ಸ್ಪೂನ್‌ ನೀರು ಸೇರಿಸಿಕೊಂಡು ಮತ್ತೆ ಮಿಕ್ಸ್‌ ಮಾಡಿ, ವಡೆ ಮಿಶ್ರಣ ಬಹಳ ತೆಳ್ಳಗೆ ಅಥವಾ ಬಹಳ ಗಟ್ಟಿಯಾಗಿ ಇರಬಾರದು. 
icon

(7 / 11)

ಕೈಗೆ ಎಣ್ಣೆ ಅಥವಾ ನೀರು ಸವರಿಕೊಂಡು ವಡೆ ತಟ್ಟಿ ಕಾದ ಎಣ್ಣೆಗೆ ಬಿಡಿ.
icon

(8 / 11)

ಕೈಗೆ ಎಣ್ಣೆ ಅಥವಾ ನೀರು ಸವರಿಕೊಂಡು ವಡೆ ತಟ್ಟಿ ಕಾದ ಎಣ್ಣೆಗೆ ಬಿಡಿ.

ಮಧ್ಯಮ ಉರಿಯಲ್ಲಿ ವಡೆಗಳನ್ನು ಎರಡೂ ಕಡೆ ಫ್ಲಿಪ್‌ ಮಾಡಿ ಕಂದು ಬಣ್ಣ ಬರುವರೆಗೂ ಕರಿಯಿರಿ. 
icon

(9 / 11)

ಮಧ್ಯಮ ಉರಿಯಲ್ಲಿ ವಡೆಗಳನ್ನು ಎರಡೂ ಕಡೆ ಫ್ಲಿಪ್‌ ಮಾಡಿ ಕಂದು ಬಣ್ಣ ಬರುವರೆಗೂ ಕರಿಯಿರಿ. 

ಕರಿದ ವಡೆಗಳನ್ನು ಜಾಲರಿ ಸೌಟಿನಿಂದ ತೆಗೆದು ಎಣ್ಣೆ ಸೋರಿಸಿ ಪ್ಲೇಟ್‌ಗೆ ವರ್ಗಾಯಿಸಿ. 
icon

(10 / 11)

ಕರಿದ ವಡೆಗಳನ್ನು ಜಾಲರಿ ಸೌಟಿನಿಂದ ತೆಗೆದು ಎಣ್ಣೆ ಸೋರಿಸಿ ಪ್ಲೇಟ್‌ಗೆ ವರ್ಗಾಯಿಸಿ. 

ರುಚಿಯಾದ ವಡೆಯನ್ನು ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ಎಂಜಾಯ್‌ ಮಾಡಿ. 
icon

(11 / 11)

ಇತರ ಗ್ಯಾಲರಿಗಳು