ಹಿಮಪಾತ: ಜಮ್ಮು-ಕಾಶ್ಮೀರ, ಉತ್ತರಾಖಂಡದ ವಿವಿಧೆಡೆ ಭಾರಿ ಹಿಮಪಾತ, ಸಂಕಷ್ಟದ ನಡುವೆಯೂ ಖುಷಿಪಟ್ಟ ಪ್ರವಾಸಿಗರು, ಫೋಟೋಸ್
Snow Fall: ಜಮ್ಮು-ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ ರಾಜ್ಯಗಳ ವಿವಿಧೆಡೆ ಶನಿವಾರ, ಭಾನುವಾರ (ಡಿ.29) ಭಾರಿ ಹಿಮಪಾತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಹಿಮಪಾತದ ಸಂಕಷ್ಟದ ನಡುವೆಯೂ ಪ್ರವಾಸಿಗರು ಆ ಕ್ಷಣಗಳನ್ನು ಆನಂದಿಸುತ್ತ ಸಂಭ್ರಮಿಸಿದ ಫೋಟೋಗಳು ಗಮನಸೆಳೆದಿವೆ.
(1 / 15)
ಕಾಶ್ಮೀರದಲ್ಲಿ ಹಿಮಪಾತ: ಜಮ್ಮು - ಕಾಶ್ಮೀರ, ಉತ್ತರಾಖಂಡದ ವಿವಿಧೆಡೆ ಶುಕ್ರವಾರ ಭಾರಿ ಹಿಮಪಾತ ಸಂಭವಿಸಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದ ಹಿಮಪಾತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶ್ರೀನಗರ, ದೋಡಾ, ಉದಂಪುರ, ರೋಹ್ಟಾಂಗ್, ರುದ್ರ ಪ್ರಯಾಗ ಮುಂತಾದ ಪ್ರದೇಶಗಳಲ್ಲಿ ದಟ್ಟ ಹಿಮದ ಹೊದಿಕೆ ಗಮನಸೆಳೆಯಿತು.
(2 / 15)
ಜಮ್ಮು- ಕಾಶ್ಮೀರದ ದಾಲ್ ಸರೋವರ ಮಂಜುಗಡ್ಡೆಯಂತಾಗಿರುವುದು. ಹಿಮದ ಹೊದಿಕೆ ಮೇಲೆ ನಿಂತು ಪ್ರವಾಸಿಗರು ದಾಲ್ ಸರೋವರದ
(3 / 15)
ಪ್ರವಾಸಿಗರು ಹಿಮಪಾತವನ್ನು ನೋಡಿ ಆನಂದಿಸುತ್ತಿರುವಾಗ, ಸ್ಥಳೀಯರು ಹಿಮವನ್ನು ತೆರವುಗೊಳಿಸುತ್ತಿರುವುದು ಕಂಡುಬಂತು.
(4 / 15)
ಜಮ್ಮು- ಕಾಶ್ಮೀರದ ಪಟ್ನಿಟಾಪ್ ಬೆಟ್ಟದ ಮೇಲೆ ಭಾನುವಾರ ಹಿಮಪಾತಕ್ಕೆ ಮೈಯೊಡ್ಡಿ ಆನಂದಿಸುತ್ತಿರುವ ಪ್ರವಾಸಿ ಯುವತಿ.
(PTI)(5 / 15)
ಉಧಂಪುರದಲ್ಲಿ ಪ್ರವಾಸಿಗರು ಹಿಮದೊಂದಿಗೆ ಆಟವಾಡುತ್ತಿದ್ದ ದೃಶ್ಯ. ಜಮ್ಮು- ಕಾಶ್ಮೀರದ ಬಹುತೇಕ ಪ್ರದೇಶಗಳಲ್ಲಿ ಹಿಮಪಾತವಾಗಿದೆ. ವಿಮಾನ ಯಾನ, ರೈಲು ಸಂಚಾರ, ವಾಹನ ಸಂಚಾರಕ್ಕೂ ಅಡ್ಡಿ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(PTI)(7 / 15)
ಉತ್ತರಾಖಂಡದ ಬದರೀನಾಥ ದೇವಸ್ಥಾನದ ಸುತ್ತಮುತ್ತ ಭಾನುವಾರ ಹಿಮಪಾತವಾಗಿದ್ದು, ಎಲ್ಲೆಡೆ ಹಿಮದ ಹೊದಿಕೆ ದಟ್ಟವಾಗಿ ಕಂಡುಬಂತು.
(Princess Ilvita/ ANI)(8 / 15)
ಬದರೀನಾಥ ಧಾಮದ ಸುತ್ತಮ ಹಿಮದ ಹೊದಿಕೆ ಕಂಡುಬಂತು. ಉತ್ತರಾಖಂಡ, ಹಿಮಾಚಲ ಪ್ರದೇಶ ವಿವಿಧೆಡೆ ಹಿಮಪಾತವಾಗಿದ್ದು ಜನಜೀವನ ಅಸ್ತವ್ಯಸ್ತವಾಯಿತು.
(Princess Ilvita / ANI)(9 / 15)
ರುದ್ರಪ್ರಯಾಗದಲ್ಲಿ, ಕೇದಾರನಾಥ ದೇವಸ್ಥಾನದ ಸುತ್ತಮುತ್ತ ಭಾರಿ ಹಿಮಪಾತ ಆಗಿದ್ದು, ಭಾನುವಾರ ಅಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು.
(Princess Ilvita /ANI)ಇತರ ಗ್ಯಾಲರಿಗಳು