Akka Anu: ಇನ್ಮೇಲೆ ಅಕ್ಕನ ಕೈ ಕುಂಚ ಹಿಡಿಯಲ್ಲ; ನಿಮ್ಮೂರಿನ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ ಅಂದ್ರು ಕೆಚ್ಚೆದೆಯ ಕನ್ನಡತಿ ಅಕ್ಕ ಅನು
- Akka Anu: ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಅವರು ತನ್ನ ಅನಾರೋಗ್ಯ ಕಾರಣದಿಂದ ಸೋಷಿಯಲ್ ವರ್ಕ್‌ನಿಂದ ದೂರ ಉಳಿಯಬೇಕಾಯಿತು ಎಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಇದೇ ಸಮಯದಲ್ಲಿ ನಿಮ್ಮ ಊರಿನ ತೊಂದರೆಗಳನ್ನು ಸರಿ ಮಾಡಲು ನಮ್ಮನೇ ಕಾಯಬೇಡಿ, ನಿಮ್ಮ ಊರಿನ ಶಾಲೆಗಳ ಕೆಲ್ಸಗಳನ್ನ ನೀವೇ ಮುಗಿಸಿಕೊಂಡ್ರೆ ತುಂಬಾನೇ ಒಳ್ಳೇದು ಎಂದಿದ್ದಾರೆ.
- Akka Anu: ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಅವರು ತನ್ನ ಅನಾರೋಗ್ಯ ಕಾರಣದಿಂದ ಸೋಷಿಯಲ್ ವರ್ಕ್‌ನಿಂದ ದೂರ ಉಳಿಯಬೇಕಾಯಿತು ಎಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಇದೇ ಸಮಯದಲ್ಲಿ ನಿಮ್ಮ ಊರಿನ ತೊಂದರೆಗಳನ್ನು ಸರಿ ಮಾಡಲು ನಮ್ಮನೇ ಕಾಯಬೇಡಿ, ನಿಮ್ಮ ಊರಿನ ಶಾಲೆಗಳ ಕೆಲ್ಸಗಳನ್ನ ನೀವೇ ಮುಗಿಸಿಕೊಂಡ್ರೆ ತುಂಬಾನೇ ಒಳ್ಳೇದು ಎಂದಿದ್ದಾರೆ.
(1 / 8)
ಅನಾರೋಗ್ಯ ಕಾರಣ: ನನಗೆ ಕೆಲವು ಆರೋಗ್ಯ ಸಮಸ್ಯೆಯಿಂದ ನಾವು ಕನ್ನಡ ಶಾಲೆ ಉಳಿಸಿ ಅಭಿಯಾನ ಹಾಗೂ ಸಾಮಾಜಿಕ ಕಾರ್ಯಗಳಿಂದ ದೂರ ಉಳಿಯಬೇಕಾಯಿತು. ಸುಮಾರು ಜನ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ವಿದ್ಯಾರ್ಥಿಗಳ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವವರು ನನಗೆ ಕರೆ ಮಾಡ್ತಾನೆ ಇದ್ದೀರಿ. ನಾನು ಎಲ್ಲರಿಗೂ ಕೆಲಸ ಬಿಟ್ಟಿದೀವಿ ಅನಾರೋಗ್ಯ ಅಂತ ಪ್ರತಿಯೊಬ್ಬರಿಗೂ ಹೇಳಲು ಕಷ್ಟವಾಗುತ್ತಿದೆ. ಆದ್ದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ವಿಷಯವನ್ನು ಹೇಳಲೇ ಬೇಕಾಯಿತು ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
(2 / 8)
ನಿಮ್ಮ ಊರಿನ ಕೆಲಸಗಳನ್ನು ನೀವೇ ಮಾಡಿ: ಮುಂದೊಂದು ದಿನ ನಮ್ಮ ಆರೋಗ್ಯ ಹಾಗೂ ನಮ್ಮ ಜೀವನ ಉತ್ತಮ ಮಟ್ಟದಲ್ಲಿ ಸಾಗಿದ್ರೆ ಖಂಡಿತ ನಾವೂ ಹಾಗೂ ನಮ್ಮ ತಂಡ ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲವೂ ಸರಿಹೊಂದಿದರೆ ನೋಡೋಣ. ಆಗಂತ ನಿಮ್ಮ ಊರಿನ ಶಾಲೆಗಳಿಗೆ ನಾವೇ ಬರ್ತೀವಿ ಅಂತ ಭಾವಿಸಬೇಡಿ. ಯಾಕೆಂದ್ರೆ ಈಗಾಗಲೇ ನಮ್ಮ ಲಿಸ್ಟ್ ನಲ್ಲಿ 75ಕ್ಕೂ ಹೆಚ್ಚು ಶಾಲೆಗಳು ಪೆಂಡಿಂಗ್ ನಲ್ಲಿ ಇವೆ. ದಯವಿಟ್ಟು ನಿಮ್ಮ ಊರಿನ ಸಮಸ್ಯೆಗಳಿಗೆ ಕೆಲಸಗಳಿಗೆ ನಾವೇ ಬಂದು ಕೆಲಸ ಮಾಡಬೇಕು ಅಂತ ಏನಿಲ್ಲ. ನಿಮ್ಮ ಊರಿನ ಶಾಲೆಗಳ ಕೆಲ್ಸಗಳನ್ನ ನೀವೇ ಮುಗಿಸಿಕೊಂಡ್ರೆ ತುಂಬಾನೇ ಒಳ್ಳೇದು" ಎಂದು ಅಕ್ಕ ಅನು ಅವರು ಮಾಡಿದ್ದಾರೆ.
(3 / 8)
ನಿಮ್ಮ ಊರಿನ ಕೆಲಸಗಳನ್ನು ಮುಂದೂಡಬೇಡಿ: ಸುಮಾರು ಜನ ನಾವು ಇಂದಲ್ಲ ನಾಳೆ ಬರ್ತಿವಿ ನಿಮ್ಮ ಊರಿಗೆ ಅಂತ ದಿನಗಳನ್ನ ಮುಂದೂಡುತ್ತಲೇ ಇದ್ದೀರಿ. ಆದ್ರೆ ನಮ್ಮ ಸಮಸ್ಯೆಗಳಿಂದ ನಾವು ಯಾರಿಗೂ ಸ್ಪಂದಿಸಲು ಆಗುತ್ತಿಲ್ಲ ಎಂದು ಅಕ್ಕ ಅನು ಅವರು ಹೇಳಿದ್ದಾರೆ. ಈ ಮೂಲಕ ನಾವು ಬಂದೇ ಸರಿ ಮಾಡಬೇಕು ಎಂದು ಕಾಯಬೇಡಿ, ನಿಮ್ಮ ಊರಿನ ಸಮಸ್ಯೆಗಳನ್ನು ಊರಿನವರೆಲ್ಲ ಸೇರಿ ಬಗೆಹರಿಸಲು ಪ್ರಯತ್ನಿಸಿ ಎಂದು ಮನವಿ ಮಾಡಿದ್ದಾರೆ.
(4 / 8)
ಮೊಬೈಲ್ ನಂಬರ್ ಬದಲಾಯಿಸಲು ಹೇಳಬೇಡಿ: "ಕ್ಷಮಿಸಬೇಕು ನೀವೆಲ್ಲಾ. ತೊಂದರೆ ಆದ್ರೆ ಈ ನಂಬರ್ ಆಫ್ ಮಾಡಿ ಅಂತ ಕೆಲವರು ಹೇಳ್ತ ಇದಿರಿ. ಕೆಲವು ದಾಖಲಾತಿಗಳಿಗೆ ಇದೇ ನಂಬರ್ ಇರುವುದರಿಂದ ನಂಬರ್ ಚೇಂಜ್ ಮಾಡಲು ಆಗುತ್ತಿಲ್ಲ. ಕೆಲವು ಕಮಿಟ್ಮೆಂಟ್ ಹಾಗೂ ಮುಖ್ಯವಾದ ಆತ್ಮೀಯರ ಸಲುವಾಗಿ ಮೊಬೈಲ್ ನಂಬರ್ ನ ಚಾಲ್ತಿಯಲ್ಲಿ ಇಡಬೇಕಾಯಿತು" ಎಂದು ಅಕ್ಕ ಅನು ಅವರು ಹೇಳಿದ್ದಾರೆ.
(5 / 8)
ಹೆಸರು ಮಾಡಲು ಸಮಾಜ ಸೇವೆ ಮಾಡಿಲ್ಲ: "ನಿಮ್ಮಿಂದ ನಂಗೆ ಸಹಾಯವೇನೆಂದರೆ ನಿಮ್ಮ ಊರಿನ ಸಮಸ್ಯೆಗಳನ್ನ ನೀವೇ ಬಗೆಹರಿಸಿಕೊಂಡರೆ ತುಂಬಾ ಒಳ್ಳೇದು ಯಾಕೆಂದ್ರೆ ನಾನು ಈ ಕಾರ್ಯವನ್ನ ಏನೋ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿ ಹೆಸರು ಮಾಡಬೇಕು ಅನ್ನೋದು ಇದಿಲ್ಲ . ನನ್ನ ಜೀವನದಲ್ಲಿ ನಡೆದ ಒಂದಿಷ್ಟು ಘಟನೆಗಳಿಂದ ಪ್ರೇರಿತಳಾಗಿ ಒಂದು ಚಿಕ್ಕ ಬದಲಾವಣೆ ತರ್ಬೇಕು ಅಂದ್ರೆ ಶಿಕ್ಷಣ.ಹಾಗೂ ಆರೋಗ್ಯವಾಗಿ ಜನಗಳು ಬದುಕೋಕೆ ವೈಯಕ್ತಿಕ ಸ್ವಚ್ಛತೆಯಿಂದ ಹಾಗೂ ಪರಿಸರ ಸ್ವಚ್ಛತೆಯ ಅವಶ್ಯಕತೆ ನನ್ನ ಭಾರತದಲ್ಲಿ ಬಹಳ ಅವಶ್ಯಕತೆ ಇರುವುದರಿಂದ ಒಂದೆರಡು ಜನಗಳಿಗೆ ಆದ್ರೂ ನಮ್ಮ ಕಾರ್ಯಗಳು ತಿಳಿಲಿ ಅಂತ ಒಂದಿಷ್ಟು ಅಭಿಯಾನಗಳನ್ನ ಕೈಗೊಂಡೆ ಅಷ್ಟೇ" ಎಂದು ಅವರು ಹೇಳಿದ್ದಾರೆ.
(6 / 8)
ಯಾರಿದು ಅಕ್ಕ ಅನು?: ಅಕ್ಕ ಅನು ಸೋಷಿಯಲ್ ಮೀಡಿಯಾ ಇನ್‌ಫ್ಲೂನ್ಸರ್. ಸೋಷಿಯಲ್ ಮೀಡಿಯಾದಲ್ಲಿ ಪಡೆದ ಖ್ಯಾತಿಯನ್ನು ಸೋಷಿಯಲ್ ವರ್ಕ್‌ಗೆ ಮೀಸಲಿಡುವ ಅಪರೂಪದ ಯುವತಿ. ಈವರೆಗೂ ರಾಜ್ಯದ ಉದ್ದಗಲಕ್ಕೂ ಸಂಚರಿಸಿ 109 ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಚಿಕ್ಕಬೇರಗಿಯಲ್ಲಿ ಜನಿಸಿದ ಇವರು ಮಸ್ಕಿಯಲ್ಲಿ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಹೈಸ್ಕೂಲ್ ಓದಿದ್ದಾರೆ. ಸಂಕೇತ ಕಾಲೇಜಲ್ಲಿ ಪಿಯುಸಿ ಓದಿ, ಬೆಂಗಳೂರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.
(7 / 8)
ಅಕ್ಕ ಅನು ಇನ್‌ಸ್ಟಾಗ್ರಾಂ ಸಂದೇಶಕ್ಕೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಬೇಗಹುಷಾರಾಗಿ ಅಕ್ಕ ನಿಮ್ಮಿಂದ ಇನ್ನೂ ಹತ್ತು ಹಲವು ಕೆಲಸಗಳು ಆಗ ಬೇಕಿದೆ ನಮ್ಮ ಕುಟುಂಬವು ನಿಮ್ಮ ಚೇತರಿಕೆಗೆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಸಾಕಷ್ಟು ಜನರು ನಿಮ್ಮ ಆರೋಗ್ಯ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ.
ಇತರ ಗ್ಯಾಲರಿಗಳು