Akka Anu: ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಕಡೆಯಿಂದ ಹೊಸ ಅಭಿಯಾನ; ಸರ್ಕಾರಿ ಶಾಲೆ ಚೆಂದಗಾಣಿಸುವ ಯುವತಿಯಿಂದ ಮತ್ತೊಂದು ಮೆಚ್ಚುವ ಕೆಲಸ
- Akka Anu: ಜಾಲತಾಣದಲ್ಲಿ ತಮ್ಮ ಕೆಲಸದ ಮೂಲಕವೇ ಗುರುತಿಸಿಕೊಂಡಿದ್ದಾರೆ ಅಕ್ಕ ಅನು. ಕೆಚ್ಚೆದೆಯ ಕನ್ನಡತಿ ಎಂದೇ ಕರೆಸಿಕೊಳ್ಳುವ ಈ ಯುವತಿ ತಮ್ಮದೇ ತಂಡ ಕಟ್ಟಿಕೊಂಡು, ಸರ್ಕಾರಿ ಶಾಲೆಗಳನ್ನು ಅಂದಗಾಣಿಸುವ ಕೆಲಸಕ್ಕೆ ಇಳಿದಿದ್ದಾರೆ. ಸರ್ಕಾರಿ ಶಾಲೆ ಉಳಿಸಿ ಎನ್ನುತ್ತ ರಾಜ್ಯದ ಬಹುತೇಕ ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ. ಇದೀಗ ಇನ್ನೊಂದು ಅಭಿಯಾನಕ್ಕೆ ಇಳಿದಿದ್ದಾರೆ.
- Akka Anu: ಜಾಲತಾಣದಲ್ಲಿ ತಮ್ಮ ಕೆಲಸದ ಮೂಲಕವೇ ಗುರುತಿಸಿಕೊಂಡಿದ್ದಾರೆ ಅಕ್ಕ ಅನು. ಕೆಚ್ಚೆದೆಯ ಕನ್ನಡತಿ ಎಂದೇ ಕರೆಸಿಕೊಳ್ಳುವ ಈ ಯುವತಿ ತಮ್ಮದೇ ತಂಡ ಕಟ್ಟಿಕೊಂಡು, ಸರ್ಕಾರಿ ಶಾಲೆಗಳನ್ನು ಅಂದಗಾಣಿಸುವ ಕೆಲಸಕ್ಕೆ ಇಳಿದಿದ್ದಾರೆ. ಸರ್ಕಾರಿ ಶಾಲೆ ಉಳಿಸಿ ಎನ್ನುತ್ತ ರಾಜ್ಯದ ಬಹುತೇಕ ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ. ಇದೀಗ ಇನ್ನೊಂದು ಅಭಿಯಾನಕ್ಕೆ ಇಳಿದಿದ್ದಾರೆ.
(1 / 11)
ತಮ್ಮ ಸಮಾಜಮುಖಿ ಕೆಲಸದ ಮೂಲಕವೇ ನಾಡಿನ ತುಂಬೆಲ್ಲ ಪರಿಚಿಯತರಾಗಿರುವವರು ಅಕ್ಕ ಅನು. ಲಕ್ಷಾಂತರ ಸಾಲ ಪಡೆದು, ಆ ಸಾಲದ ಹಣದಿಂದಲೇ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ ಈ ಯುವತಿ.(instagram/ Akka Anu)
(2 / 11)
ಯಾರ ಸಹಾಯವನ್ನೂ ಪಡೆಯದೇ, ತಾವೇ ತಮ್ಮ ಕೈಲಾದ ಹಣ ಹೊಂದಿಸಿ ತಂಡದ ಜತೆ ಸೇರಿ ಕೆಲಸ ಮಾಡುತ್ತಿದ್ದಾರೆ ಅಕ್ಕ ಅನು. ಈಗಾಗಲೇ ರಾಜ್ಯಾದ್ಯಂತ ಸಂಚರಿಸಿ ನೂರಾರು ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ.
(3 / 11)
ಸರ್ಕಾರಿ ಶಾಲೆಗಳ ಉಳಿವು ಮತ್ತು ಅವುಗಳ ಸುಧಾರಣೆಯೇ ಅಕ್ಕ ಅನು ಅವರ ತಂಡದ ಮುಖ್ಯ ಧ್ಯೇಯ. ಮಾಸಿದ ಶಾಲೆಗಳನ್ನು ಗುರುತಿಸಿ, ಅವುಗಳನ್ನು ಅಂದಗಾಣಿಸಿ, ಮಕ್ಕಳಿಗೆ ಶಿಕ್ಷಣದ ಅರಿವು ಮೂಡಿಸುವುದು ಅಕ್ಕ ಅನು ತಂಡದ ಕೆಲಸ.
(4 / 11)
ಅಂದಹಾಗೆ ಅಕ್ಕ ಅನು ಮೂಲತಃ ರಾಯಚೂರು ಜಿಲ್ಲೆಯವರು. ಅಲ್ಲಿನ ಸಿಂಧನೂರು ತಾಲೂಕಿನ ಚಿಕ್ಕಬೇರಗಿ ಅನ್ನೋ ಗ್ರಾಮದಿಂದ ಬಂದ ಈ ಯುವತಿ ಇದೀಗ ತಮ್ಮ ಕೆಲಸದ ಮೂಲಕವೇ ಇಡೀ ರಾಜ್ಯದ ಜನರ ಗಮನ ಸೆಳೆದಿದ್ದಾರೆ.
(5 / 11)
ಸೋಷಿಯಲ್ ಮೀಡಿಯಾದಲ್ಲಿ ಅಪಾರ ಜನಮನ್ನಣೆ ಗಳಿಸಿರುವ ಅಕ್ಕ ಅನು, ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲ. ಇನ್‌ಸ್ಟಾಗ್ರಾಂನಲ್ಲಿ 11 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ ಅಕ್ಕ.
(6 / 11)
ಅನುಕರುಣೆ ಪ್ರತಿಷ್ಠಾನ ಹೆಸರಿನ ಸಂಸ್ಥೆ ತೆರೆದಿರುವ ಅಕ್ಕ ಅನು ಅದಕ್ಕೆ ಸಂಸ್ಥಾಪಕರಾಗಿದ್ದಾರೆ. ಈ ಸಂಸ್ಥೆ ಮೂಲಕ ಸರ್ಕಾರಿ ಕನ್ನಡ ಶಾಲೆ ಉಳಿಸಿ, ಸ್ವಚ್ಛ ಭಾರತ್ ಅಭಿಯಾನವನ್ನು ಕೆಲಸ ಆರಂಭಿಸಿದ್ದಾರೆ.
(7 / 11)
ಶಾಲೆಯ ಜತೆಗೆ ಐತಿಹಾಸಿಕ ಕಟ್ಟಡಗಳು, ಪುಷ್ಕರಣಿಗಳು, ಕೆರೆ ಹೂಳು ಸೇರಿ ಎಲ್ಲ ಕೆಲಸವನ್ನೂ ಅಕ್ಕ ಅನು ಮತ್ತವರ ತಂಡ ಮಾಡುತ್ತಲೇ ಬಂದಿದೆ. ಜನರಿಂದ ಮನ್ನಣೆಯನ್ನೂ ಪಡೆದುಕೊಂಡಿದೆ.
(8 / 11)
2018ರಲ್ಲಿ ಆರಂಭವಾದ ಇವರ ಈ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಇಂದಿಗೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸಂಚರಿಸಿದೆ. ಈವರೆಗೂ ರಾಜ್ಯದ 120ಕ್ಕೂ ಅಧಿಕ ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ.
(9 / 11)
ಇದೀಗ ಇದೇ ತಂಡ ಸರ್ಕಾರಿ ಶಾಲೆ ಉಳಿವಿನ ಜತೆಗೆ ಇನ್ನೊಂದು ಕೆಲಸಕ್ಕೆ ಕೈ ಜೋಡಿಸಿದೆ. ಜೂಜು ಮುಕ್ತ ಕರ್ನಾಟಕ ಅಭಿಯಾನ ಆರಂಭಿಸಿದ್ದಾರೆ. ಈ ಮೂಲಕ ಕರ್ನಾಟಕವನ್ನು ಜೂಜು ಮುಕ್ತಗೊಳಿಸುವ ಸಲುವಾಗಿ ಟೊಂಕಕಟ್ಟಿದ್ದಾರೆ.
(10 / 11)
ನಮ್ಮ ನೆರೆಹೊರೆಯ ರಾಜ್ಯಗಳಲ್ಲಿ ಜನರ ಹಿತ ಬಯಸಿ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡುತ್ತಿದ್ದಾರೆ. ಆದ್ರೆ, ನಮ್ಮ ಸರ್ಕಾರ ಏನ್ ಮಾಡ್ತಿದೆ? ಅದೆಷ್ಟೋ ಆತ್ಮಹತ್ಯೆಗೆ ಕಾರಣವಾಗ್ತಿರುವ ಈ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ನಮ್ಮ ರಾಜ್ಯ ಸರ್ಕಾರ ನಿಷೇಧ ಮಾಡಬೇಕಾಗಿ ನನ್ನ ಮನವಿ. ಅದರ ಸಲುವಾಗಿ ಈ ಅಭಿಯಾನ #BanOnlineBettingApps ಎಂಬ ಬ್ಯಾನರ್ ಹಿಡಿದು ಸರ್ಕಾರವನ್ನು ಕೇಳಿದ್ದಾರೆ.
ಇತರ ಗ್ಯಾಲರಿಗಳು