ಗುಡ್ ನ್ಯೂಸ್ ಕೊಟ್ಟ ಕಿಪ್ಪಿ ಕೀರ್ತಿ, ಇದು ಕನಸೋ ನನಸೋ ಗೊತ್ತಾಗ್ತಾ ಇಲ್ಲ ಎನ್ನುತ್ತಲೇ ಭಾವುಕಳಾದ ವೈರಲ್‌ ಸ್ಟಾರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗುಡ್ ನ್ಯೂಸ್ ಕೊಟ್ಟ ಕಿಪ್ಪಿ ಕೀರ್ತಿ, ಇದು ಕನಸೋ ನನಸೋ ಗೊತ್ತಾಗ್ತಾ ಇಲ್ಲ ಎನ್ನುತ್ತಲೇ ಭಾವುಕಳಾದ ವೈರಲ್‌ ಸ್ಟಾರ್

ಗುಡ್ ನ್ಯೂಸ್ ಕೊಟ್ಟ ಕಿಪ್ಪಿ ಕೀರ್ತಿ, ಇದು ಕನಸೋ ನನಸೋ ಗೊತ್ತಾಗ್ತಾ ಇಲ್ಲ ಎನ್ನುತ್ತಲೇ ಭಾವುಕಳಾದ ವೈರಲ್‌ ಸ್ಟಾರ್

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಬಗೆಬಗೆ ರೀಲ್ಸ್‌ ಮೂಲಕವೇ ಸುದ್ದಿಯಲ್ಲಿರುತ್ತಾರೆ ಕಿಪ್ಪಿ ಕೀರ್ತಿ. ವೈರಲ್‌ ಆಗಬೇಕು ಅನ್ನೋ ಕಾರಣಕ್ಕೆ ಸಿಕ್ಕ ಸಿಕ್ಕಂತೆ ರೀಲ್ಸ್‌ ಮಾಡಿ ಶೇರ್‌ ಮಾಡುವ ಕಿಪ್ಪಿ ಕೀರ್ತಿ, ಇದೀಗ ಕೊನೆಗೂ ತಮ್ಮ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಆ ಖುಷಿಯಲ್ಲಿ ಭಾವುಕರಾಗಿದ್ದಾರೆ. ಆ ಕನಸು ಏನು? ಇಲ್ಲಿದೆ ನೋಡಿ ವಿವರ.

ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನ ತಮ್ಮ ವಿಡಿಯೋಗಳ ಮೂಲಕವೇ ವೈರಲ್‌ ಆದವರಿದ್ದಾರೆ. ಪಾಸಿಟಿವ್‌ ವಿಚಾರಕ್ಕೆ ಒಂದಷ್ಟು ಮಂದಿ ಸುದ್ದಿಯಾದರೆ, ನೆಗೆಟಿವ್‌ ವಿಡಿಯೋಗಳಿಂದ ಟ್ರೋಲ್‌ಗೆ ಆಹಾರವಾದವರಿದ್ದಾರೆ.
icon

(1 / 11)

(instagram\ kipi Keerthi pooncha)

ಇಂತಿಪ್ಪ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಸ್ಟಾರ್‌ ಪಟ್ಟ ಪಡೆದು, ಆಗಾಗ ಸದ್ದು ಜತೆಗೆ ಸುದ್ದಿಯಲ್ಲಿರುವವರು ಕಿಪ್ಪಿ ಕೀರ್ತಿ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬ್ಯಾಕ್‌ ಟು ಬ್ಯಾಕ್‌ ರೀಲ್ಸ್‌ ಶೇರ್‌ ಮಾಡುತ್ತ, ʻವೈರಲ್‌ʼ ಹುಡುಕಾಟದಲ್ಲಿರುತ್ತಾರೆ.
icon

(2 / 11)

ಪಾಸಿಟಿವ್‌ ಟಾಕ್‌ಗಿಂತ ನೆಗೆಟಿವ್‌ ವಿಚಾರವಾಗಿಯೇ ಕಿಪ್ಪಿ ಕೀರ್ತಿ ಟ್ರೋಲ್‌ ಆಗಿದ್ದುಂಟು. ಇಂದಿಗೂ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳಿಗೆ ತರಹೇವಾರಿ ನೆಗೆಟಿವ್‌ ಕಾಮೆಂಟ್‌ಗಳೇ ಅಧಿಕ.
icon

(3 / 11)

ಸೋಷಿಯಲ್ ಮೀಡಿಯಾದ ಸ್ಟಾರ್‌ಡಮ್‌ನಿಂದಲೇ ಕಿರುತೆರೆ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿ ಬಂದಿದ್ದಾರೆ ಕಿಪ್ಪಿ ಕೀರ್ತಿ. ಹೀಗಿರುವಾಗಲೇ, ಇದೇ ವೈರಲ್‌ ಸ್ಟಾರ್‌ಗೆ ಆ ಒಂದು ಬಹು ದೊಡ್ಡ ಕನಸಿತ್ತು. ಇದೀಗ ಅದನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ.
icon

(4 / 11)

ಈ ಬಗ್ಗೆ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾವುಕವಾಗಿಯೇ ಆ ಖುಷಿಯನ್ನು ಎಕ್ಸ್‌ಪ್ರೆಸ್‌ ಮಾಡಿದ್ದಾರೆ. "ಸಿನಿಮಾದಲ್ಲಿ ನನಗೂ, ನನ್ನ ಮುಖಕ್ಕೂ ಅವಕಾಶ ಸಿಗುತ್ತಾ ಅಂತ ನಾನು ಕಾಯುತ್ತಿದ್ದೆ. ಕೊನೆಗೂ ಆ ಅವಕಾಶ ಬಂದಿದೆ" ಎಂದಿದ್ದಾರೆ.
icon

(5 / 11)

“ಈ ವರೆಗೂ ನಾನು ಏನೂ ಸಾಧನೆ ಮಾಡಿಲ್ಲ. ಬರೀ ಕಾಂಟ್ರವರ್ಸಿಯಲ್ಲಿಯೇ ಬಂದಿದ್ದೇನೆ. ಹಾಗಾಗಿ ನನ್ನನ್ನು ನಾನು ಪ್ರೂವ್‌ ಮಾಡಿಕೊಳ್ಳಬೇಕಿತ್ತು. ಎಲ್ಲರ ಹತ್ತಿರ ಬರೀ ಉಗಿಸಿಕೊಳ್ಳುವುದೇ ಆಗಿತ್ತು. ಒಂದೇ ಒಂದು ಸಿನಿಮಾ ಬೇಕು ಅಂತ, ಕನ್ನಡಿ ಮುಂದೆ ನನ್ನನ್ನು ನಾನೇ ಬೈದುಕೊಳ್ಳುತ್ತಿದ್ದೆ”
icon

(6 / 11)

"ಕಿಪ್ಪಿ ಕೀರ್ತಿ ಚೆನ್ನಾಗಿದ್ದಾಳೆ ಅಂತ ಯಾರೂ ಮೂವಿ ಕೊಡ್ತಿಲ್ವಲ್ಲ ಅನ್ನೋ ಬೇಜಾರಿತ್ತು. ಈ ಮೊದಲು ಒಂದು ಸಿನಿಮಾ ಆಫರ್‌ ಬಂದಿತ್ತು. ಅದನ್ನು ನಾನೇ ಬಿಟ್ಟಿದ್ದೆ. ಊರಿಂದ ಬಂದು ನಟಿಸೋಕೆ ಟೈಮ್‌ ಸಿಗುತ್ತಿರಲಿಲ್ಲ. ಹಾಗಾಗಿ ಬಿಟ್ಟಿದ್ದೆ"
icon

(7 / 11)

“ಎರಡನೇ ಸಿನಿಮಾ ಚಾನ್ಸ್‌ ಸಿಕ್ಕಾಗ, ನಾನು ಬೇಡ ಅಂತ ಹೇಳಲೇ ಇಲ್ಲ. ಆಗಿದ್ದಾಗಲಿ, ನಟಸೋಕೆ ಬರುತ್ತೋ ಬಿಡುತ್ತೋ ಗೊತ್ತಿಲ್ಲ. ಸಿನಿಮಾದಲ್ಲಿ ಕಾಣಿಸಿಕೊಳ್ಳಲೇಬೇಕು ಅಂತ ಒಪ್ಪಿಕೊಂಡಿದ್ದೇನೆ”
icon

(8 / 11)

ಅಂದಹಾಗೆ, ಕಿಪ್ಪಿ ಕೀರ್ತಿಗೆ ಸಿನಿಮಾ ಚಾನ್ಸ್‌ ಸಿಕ್ಕಿದ್ದು, ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಹೊಸ ಸಿನಿಮಾದಲ್ಲಿ. ಆ ಸಿನಿಮಾ ಯಾವುದು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕು.
icon

(9 / 11)

ಕಿಪ್ಪಿ ಕೀರ್ತಿ ಹೀಗೆ ತಮ್ಮ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ. ಈ ವಿಡಿಯೋವನ್ನೂ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ಹೀಗೆ ಶೇರ್‌ ಮಾಡಿದ್ದೇ ತಡ, ಬಗೆಬಗೆ ಕಾಮೆಂಟ್‌ಗಳ ರಾಶಿಯೇ ಹರಿದುಬಂದಿವೆ.
icon

(10 / 11)

"ಕಣ್ಣುಗಳು ಮಾರಾಟಕ್ಕಿವೆ ಬೇಕಾದವರು ಸಂಪರ್ಕಿಸಿ", "ಈ ಕಣ್ಣಲ್ಲಿ ಇನ್ನೂ ಏನೇನ್‌ ನೋಡ್ಬೇಕು ಗುರು", "ಮೂವೀಲಿ ಏನು ನಿಮ್ ಪಾತ್ರ ಆಕಾಶದಿಂದ ಬಿದ್ದೋಗಿರೋ ಏಲಿಯನ್ ಅಂತಾನಾ", "ಕನ್ನಡ ಸಿನಿಮಾಗಳು ಯಾಕೆ ಗೆಲ್ತಿಲ್ಲ? ಇಲ್ಲಿದೆ ನೋಡಿ ಕಾರಣ" ಎಂದು ಕಾಮೆಂಟ್‌ ಹಾಕುತ್ತಿದ್ದಾರೆ.
icon

(11 / 11)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು