ರೇಷ್ಮಾ ಕ್ವೀನ್, ಕಿಪ್ಪಿ ಕೀರ್ತಿಯಿಂದ ವೆಂಕಿ ಅಣ್ಣನವರೆಗೆ; ಹಾಸ್ಯ, ಅಪಹಾಸ್ಯವನ್ನೇ ಮೆಟ್ಟಿಲಾಗಿಸಿದ ವೈರಲ್ ಸ್ಟಾರ್‌ಗಳು
ಸೋಷಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಜನರ ಹಾಸ್ಯ, ಅಪಹಾಸ್ಯದಿಂದ ಕೆಲವರು ವೈರಲ್ ಆಗುವುದುಂಟು. ಕೆಲವರು ಆನ್‌ಲೈನ್ ಟ್ರೋಲ್‌ನಿಂದ ಕುಸಿದುಹೋಗಬಹುದು. ಇನ್ನು ಕೆಲವರು ಇಂತಹ ಟ್ರೋಲ್ ಅನ್ನೇ ಅವಕಾಶವಾಗಿ ಪರಿವರ್ತಿಸಿಕೊಳ್ಳಬಹುದು. ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ವೈರಲ್ ಸ್ಟಾರ್‌ಗಳ ಪರಿಚಯ ಇಲ್ಲಿದೆ.
(1 / 9)
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಟ್ರೋಲಿಗರಿಗೆ ಹೆದರಿ ಹಿಂದೆ ಸರಿಯುವುದುಂಟು. ಕೆಲವರು ಇಂತಹ ಟ್ರೋಲ್‌ಗಳನ್ನೇ ಅವಕಾಶವಾಗಿ ಪರಿವರ್ತಿಸಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಕಿಪ್ಪಿ ಕೀರ್ತಿ, ರೇಷ್ಮಾ ಆಂಟಿ, ರಕ್ಷಿತಾ ಟಾಕ್ಸ್, ಕುಡಪಲ್ಲಿ ನಾಗರಾಜ್, ಕ್ರೇಜಿ ವೆಂಕಿ ಅಣ್ಣಾ, ಮಂಜಣ್ಣ ಸಾಂಗ್ಸ್, ರವಿ ಸಿಂಗರ್ ಕುಮುಟಾ ಸೇರಿದಂತೆ ಸಾಕಷ್ಟು ಜನರು ನೆಗೆಟಿವ್ ಕಾಮೆಂಟ್‌ಗಳನ್ನೇ ಮೆಟ್ಟಿಲಾಗಿಸಿಕೊಂಡು ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ನೀವು ನಮ್ಮನ್ನು ಹಾಸ್ಯ ಮಾಡಿ, ಅಪಹಾಸ್ಯ ಮಾಡಿ, ಕಾಮೆಂಟ್‌ನಲ್ಲಿ ನಿಮ್ಮ ಮೂಗಿನ ನೇರಕ್ಕೆ ತೋಚಿದಂತೆ ಕಾಮೆಂಟ್ ಮಾಡಿ ನಾವು ಕ್ಯಾರೇ ಅನ್ನೋಲ್ಲ ಎನ್ನುವಂತೆ ಇವರೆಲ್ಲರು ಧೈರ್ಯವಾಗಿ ಮುನ್ನುಗ್ಗುತ್ತಿದ್ದಾರೆ. ಅಂತಹ ಕೆಲವು ಕನ್ನಡ ವೈರಲ್ ಸ್ಟಾರ್‌ಗಳ ಪರಿಚಯ ಇಲ್ಲಿದೆ.
(2 / 9)
ಕಿಪ್ಪಿ ಕೀರ್ತಿ: ಸೋಷಿಯಲ್ ಮೀಡಿಯಾದಲ್ಲಿ ಕಪ್ಪಿ ಕೀರ್ತಿ ಸದಾ ರೀಲ್ಸ್ ಮಾಡುತ್ತಿರುತ್ತಾರೆ. ಇವರಿಗೆ ಲಕ್ಷಕ್ಕಿಂತಲೂ ಹೆಚ್ಚು ಜನರು ಫಾಲೋವರ್ಸ್ ಇದ್ದಾರೆ. ನೆಗೆಟಿವ್ ಕಾಮೆಂಟ್‌ಗಳ ಕುರಿತು ತಲೆಕೆಡಿಸಿಕೊಳ್ಳದೆ ಮುನ್ನುಗ್ಗುತ್ತಿದ್ದಾರೆ. ಸಿನಿಮಾವೊಂದರಲ್ಲಿ ಅವಕಾಶ ದೊರಕಿದೆ ಎಂದು ಇತ್ತೀಚೆಗೆ ಹೇಳಿದ್ದಾರೆ.
(3 / 9)
ರಕ್ಷಿತಾ ಟಾಕ್ಸ್: ಕರಾವಳಿಯ ತುಳು ಮತ್ತು ಮುಂಬೈ ತುಳು-ಹಿಂದಿ ಮಿಶ್ರ ಮಾಡಿ ಮಾತನಾಡುವ ಈಕೆಯ ಮಾತಿನ ಶೈಲಿ ವೈರಲ್ ಆಗಿತ್ತು. ಅದೇ ಶೈಲಿಯನ್ನೇ ಮುಂದುವರೆಸಿ ಹಲವು ಲಕ್ಷ ಫಾಲೋವರ್ಸ್ ಗಳಿಸಿಕೊಂಡಿದ್ದಾರೆ ರಕ್ಷಿತಾ ಶೆಟ್ಟಿ. ಇವರ ವಿಡಿಯೋ ನೋಡುತ್ತಾ, ಮಾತುಗಳನ್ನು ಕೇಳುತ್ತಾ ಇದ್ದರೆ ವೀಕ್ಷಕರ ಮುಖದಲ್ಲಿ ನಗು ಬಾರದೆ ಇರದು.
(4 / 9)
ಮಂಜಣ್ಣ: ಮಂಜಣ್ಣ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ಹಾಡುತ್ತ, ಕುಣಿಯುತ್ತಾ ವೈರಲ್ ಆಗುತ್ತಿದ್ದಾರೆ. ಮಂಜಣ್ಣ ಸಾಂಗ್ಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
(5 / 9)
ರವಿ ಸಿಂಗರ್ ಕುಮುಟಾ: ಈತ ಕೂಡ ವಿವಿಧ ರೀಲ್ಸ್‌ಗಳ ಮೂಲಕ ವೈರಲ್ ಆಗುತ್ತಿದ್ದಾನೆ. ವಿಶೇಷವಾಗಿ ತಪ್ಪು ತಪ್ಪಾಗಿ ಮಾತನಾಡುತ್ತ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಂಡಿದ್ದಾನೆ.
(6 / 9)
ಕ್ರೇಜಿ ವೆಂಕಿ ಅಣ್ಣಾ: ಸೋಷಿಯಲ್ ಮೀಡಿಯಾದಲ್ಲಿ ಕ್ರೇಜಿ ವೆಂಕಿ ಅಣ್ಣನ ಸೌಂಡ್ ಕಡಿಮೆ ಇಲ್ಲ. ತನ್ನ ಚಿತ್ರ ವಿಚಿತ್ರ ವಿಡಿಯೋಗಳ ಮೂಲಕ ಆಗಾಗ ವೈರಲ್ ಆಗುತ್ತಿದ್ದಾರೆ.
(7 / 9)
ಕುಡಪಲ್ಲಿ ನಾಗರಾಜ್: ತನ್ನ ಹಾಸ್ಯ ವಿಡಿಯೋಗಳಿಂದ ಗಮನ ಸೆಳೆಯುತ್ತಿದ್ದಾರೆ. ಆಗಾಗ ಟ್ರೋಲಿಗರಿಗೂ ಆಹಾರವಾಗುತ್ತಿದ್ದಾರೆ. ಹಾಸ್ಯ ಮಾಡಿ, ತಮಾಷೆ ಮಾಡಿ, ಕ್ಯಾರೇ ಮಾಡದೆ ವಿಡಿಯೋ ಮಾಡುವುದನ್ನು ಮುಂದುವರೆಸಿದ್ದಾರೆ.
(8 / 9)
ರೇಷ್ಮಾ ಆಫ್ ಕ್ವೀನ್: ಸೋಷಿಯಲ್ ಮೀಡಿಯಾದಲ್ಲಿ ರೇಷ್ಮಾ ಆಂಟಿ ಎಂದೇ ಫೇಮಸ್. ಸಿಂಗಲ್ ಅಥವಾ ಇತರರ ಜತೆ ಅನೇಕ ರೀಲ್ಸ್ ಮಾಡುತ್ತ ಗಮನ ಸೆಳೆಯುತ್ತಾರೆ. ಇವರಿಗೂ ಹಲವು ಲಕ್ಷ ಫಾಲೋವರ್ಸ್‌ಗಳು ಇದ್ದಾರೆ.
ಇತರ ಗ್ಯಾಲರಿಗಳು