ಕನ್ನಡ ಸುದ್ದಿ  /  Photo Gallery  /  Sonakshi Sinha Lost Her Weight When Salman Khan Said Her He Give Opportunity In His Hindi Movie Dabangg Rsm

Sonakshi Birthday: ನನ್ನ ಚಿತ್ರಕ್ಕೆ ನಾಯಕಿಯನ್ನಾಗಿ ಮಾಡ್ತೀನಿ ಸಣ್ಣ ಆಗು ಎಂದ ಸಲ್ಮಾನ್‌ ಖಾನ್;‌ ಬಳುಕುವ ಬಳ್ಳಿಯಂತಾದ ಸೋನಾಕ್ಷಿ ಸಿನ್ಹಾ

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೆಚ್ಚಿನ ನಟಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ನಿನ್ನೆ ರಾತ್ರಿಯಿಂದಲೇ ಬರ್ತ್‌ಡೇ ಶುಭ ಕೋರುತ್ತಿದ್ದಾರೆ. 

ಸೋನಾಕ್ಷಿ ಸಿನ್ಹಾ ಬಾಲಿವುಡ್‌ ಖ್ಯಾತ ನಟ ಶತ್ರುಘ್ನ ಸಿನ್ಹಾ ಹಾಗೂ ಪೂನಂ ಸಿನ್ಹಾ ಪುತ್ರಿ. ಹುಟ್ಟಿದ್ದು 2 ಜೂನ್‌ 1987. 
icon

(1 / 12)

ಸಿನಿಮಾಗೆ ಬರುವ ಮುನ್ನ ಸೋನಾಕ್ಷಿ ಸಿನ್ಹಾ ಕಾಸ್ಟ್ಯೂಮ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಫ್ಯಾಷನ್‌ ಶೋಗಳಲ್ಲಿ ಆಡಿಯನ್ಸ್‌ ಮ್ಯಾನೇಜರ್‌ ಆಗಿದ್ದರು. 
icon

(2 / 12)

ಹಾಗೇ ಸೋನಾಕ್ಷಿ ಈಗಿನಂತೆ ಮೊದಲು ಸಣ್ಣ ಇರಲಿಲ್ಲ. ನೋಡಲು ಬಹಳ ದಪ್ಪ ಇದ್ದರು. ಆದರೆ ಅವರನ್ನು ಬದಲಿಸಿದ್ದು ಸಲ್ಮಾನ್‌ ಖಾನ್‌. 
icon

(3 / 12)

ಸೋನಾಕ್ಷಿಯನ್ನು ನೋಡಿದ ಸಲ್ಮಾನ್‌ ಖಾನ್‌ ನೀನು ಸಣ್ಣ ಆದರೆ ನನ್ನ ಸಿನಿಮಾಗೆ ನಿನ್ನನ್ನು ನಾಯಕಿಯನ್ನಾಗಿ ಮಾಡುತ್ತೇನೆ ಎಂದದ್ದೇ ತಡ, ಈ ಚೆಲುವೆ ವರ್ಕೌಟ್‌ ಶುರು ಮಾಡೇ ಬಿಟ್ರು. 
icon

(4 / 12)

ಬೆಳಗ್ಗೆ ರಾತ್ರಿ ಜಿಮ್‌ನಲ್ಲಿ ವರ್ಕೌಟ್‌ ಮಾಡಿ, ತನ್ನಿಷ್ಟದ ಆಹಾರಗಳನ್ನು ತ್ಯಜಿಸಿ ಕೆಲವೇ ತಿಂಗಳಲ್ಲಿ ಸಲ್ಮಾನ್‌ ಖಾನ್‌ಗೆ ಕೊಟ್ಟ ಮಾತಿನಂತೆ ಸೋನಾಕ್ಷಿ ಸಣ್ಣ ಆದರು. 
icon

(5 / 12)

ಸಲ್ಮಾನ್‌ ಕೂಡಾ ಪ್ರಾಮಿಸ್‌ ಮಾಡಿದಂತೆ ತಮ್ಮ ದಬಾಂಗ್‌ ಚಿತ್ರಕ್ಕೆ ಸೋನಾಕ್ಷಿಯನ್ನು ನಾಯಕಿಯನ್ನಾಗಿ ಮಾಡಿದರು. 
icon

(6 / 12)

ತೆರೆ ಮೇಲೆ ಸೋನಾಕ್ಷಿಯನ್ನು ನೋಡಿದವರು ಬಹಳ ಆಶ್ಚರ್ಯ ವ್ಯಕ್ತಪಡಿಸಿದರು. ಅಷ್ಟು ದಪ್ಪ ಇದ್ದ ಹುಡುಗಿ ಈ ರೀತಿ ಸ್ಲಿಮ್‌ ಆಗುವ ಮೂಲಕ ಆಕೆಗೆ ಕೆಲಸದಲ್ಲಿ ಎಷ್ಟು ಶ್ರದ್ಧೆ ಇದೆ ಅನ್ನೋದನ್ನು ಪ್ರೂವ್‌ ಮಾಡಿದ್ದಾರೆ ಸೋನಾಕ್ಷಿ. 
icon

(7 / 12)

ಸೋನಾಕ್ಷಿ ಇದುವರೆಗೂ ರೌಡಿ ರಾಥೋರ್‌, ಸನ್‌ ಆಫ್‌ ಸರ್ದಾರ್‌, ದಬಾಂಗ್‌ 2, ಬಾಸ್‌, ಬುಲೆಟ್‌ ರಾಜ, ಅಕಿರಾ, ನೂರ್‌, ಮಿಷನ್‌ ಮಂಗಳ್‌, ದಬಾಂಗ್‌ 3 ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(8 / 12)

ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿ 14 ಕೋಟಿ ರೂಪಾಯಿ ಖರ್ಚು ಮಾಡಿ ಮನೆಯೊಂದನ್ನು ಖರೀದಿಸಿದ್ದಾರೆ. ಈ ಫೋಟೋಗಳನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(9 / 12)

ಸೋನಾಕ್ಷಿ ಸಿನ್ಹಾ ಜಹೀರ್‌ ಇಕ್ಬಾಲ್‌ ಎಂಬುವರನ್ನು ಪ್ರೀತಿಸುತ್ತಿದ್ದಾರೆ. ಶೀಘ್ರದಲ್ಲೇ ಇಬ್ಬರೂ ಮದುವೆ ಆಗುತ್ತಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. 
icon

(10 / 12)

ಆದರೆ ಸೊನಾಕ್ಷಿ ಡೇಟಿಂಗ್‌, ಮದುವೆ ಸುದ್ದಿಯನ್ನು ತಂದೆ ಶತ್ರುಘ್ನ ಸಿನ್ಹಾ ನಿರಾಕರಿಸಿದ್ದರು. ಸೊನಾಕ್ಷಿ ಕೂಡಾ ತಮಾಷೆಯಾಗಿ ಪ್ರತಿಕ್ರಿಯಿಸಿ, ನಾನು ಇಷ್ಟು ಬೇಗ ಮದುವೆ ಆಗಬೇಕೆಂದು ನೀವೆಲ್ಲಾ ಏಕೆ ಒತ್ತಾಯ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. 
icon

(11 / 12)

ಸೋನಾಕ್ಷಿ ಸಿನ್ಹಾ ಸದ್ಯಕ್ಕೆ ಕಾಕುಡ, ನಿಖಿತಾ ಬುಕ್‌ ಆಫ್‌ ಡಾರ್ಕ್ನೆಸ್‌, ಬಡೇ ಮಿಯಾ ಚೋಟೇ ಮಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 
icon

(12 / 12)

ಸೋನಾಕ್ಷಿ ಸಿನ್ಹಾ ಸದ್ಯಕ್ಕೆ ಕಾಕುಡ, ನಿಖಿತಾ ಬುಕ್‌ ಆಫ್‌ ಡಾರ್ಕ್ನೆಸ್‌, ಬಡೇ ಮಿಯಾ ಚೋಟೇ ಮಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು