ಸಿನಿಮಾ ಶೂಟಿಂಗ್‌ಗೆ ಬಿಡುವು, ಗುವಾಹಟಿಯ ಕಾಮಾಕ್ಯ ದೇವಿಯ ದರ್ಶನ ಪಡೆದ ನಟಿ ಐಶ್ವರ್ಯಾ ರಾಜೇಶ್
ಬಹುಭಾಷಾ ನಟಿ ಐಶ್ವರ್ಯ ರಾಜೇಶ್ ಅವರು ಅಸ್ಸಾಂನ ಗುವಾಹಟಿ ಬಳಿಯ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ ಮತ್ತು ಆ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
(1 / 5)
ಈ ವರ್ಷ ಬಿಡುಗಡೆಯಾದ ‘ಸಂಕ್ರಾಂತಿಕಿ ವಸ್ತುನ್ನಾಂʼ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡ ನಟಿ ಐಶ್ವರ್ಯ ರಾಜೇಶ್, ಇತ್ತೀಚೆಗೆ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
(2 / 5)
ಅಸ್ಸಾಂನ ಗುವಾಹಟಿಯಲ್ಲಿರುವ ಈ ಶಕ್ತಿಪೀಠಕ್ಕೆ ಐಶ್ವರ್ಯ ರಾಜೇಶ್ ಭೇಟಿ ನೀಡಿ ಕಾಮಾಕ್ಯ ದೇವಿಯ ದರ್ಶನ ಪಡೆದಿದ್ದಾರೆ ಮತ್ತು ದೀಪಾರಾಧನೆ ಮಾಡಿದ್ದಾರೆ.
(3 / 5)
ತಮ್ಮ ಸ್ನೇಹಿತೆಯರೊಂದಿಗೆ ದೇವಾಲಯಕ್ಕೆ ತೆರಳಿದ ಐಶ್ವರ್ಯಾ, ಭಕ್ತಿಯಿಂದ ಅಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ. ಈ ಭೇಟಿಯ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ‘ಜೈ ಕಾಮಾಕ್ಯ ಮಾ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
(4 / 5)
‘ಸಂಕ್ರಾಂತಿಕಿ ವಸ್ತುನ್ನಾಂ’ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಅವರ ಜೊತೆ ಐಶ್ವರ್ಯ ನಟಿಸಿದ್ದರು, ಅನಿಲ್ ರವಿಪೂಡಿ ನಿರ್ದೇಶನದ ಈ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು.
ಇತರ ಗ್ಯಾಲರಿಗಳು