Athiya Rahul Marriage: ಬಾಲಿವುಡ್ನಲ್ಲಿ ದೊಡ್ಡ ಸ್ಟಾರ್ ಆದ್ರೂ ಮಗಳ ಮದುವೆ ವೇಳೆ ಕರ್ನಾಟಕದ ಸಂಪ್ರದಾಯ ಮರೆಯಲಿಲ್ಲ ಸುನಿಲ್ ಶೆಟ್ಟಿ!
- ಜನವರಿ 23 ರಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಕ್ಕಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
- ಜನವರಿ 23 ರಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಕ್ಕಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
(1 / 12)
ರಾಹುಲ್ ಹಾಗೂ ಅಥಿಯಾ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆ ವಿಚಾರ ಬಂದಾಗಲೆಲ್ಲಾ ಈ ಜೋಡಿ, ಸುದ್ದಿಯನ್ನು ನಿರಾಕರಿಸುತ್ತಲೇ ಇದ್ದರು. 5 ದಿನಗಳ ಹಿಂದಷ್ಟೇ ಸರಳವಾಗಿ ಮದುವೆಯಾಗಿದ್ದಾರೆ. ಸುನಿಲ್ ಶೆಟ್ಟಿ ಮುಂಬೈನ ನಿವಾಸದಲ್ಲೇ ಈ ಮದುವೆ ನೆರವೇರಿದೆ. (PC: Htcity Instagram)
(2 / 12)
ಸುನಿಲ್ ಶೆಟ್ಟಿ ಹುಟ್ಟಿದ್ದು ಮಂಗಳೂರಿನ ಮುಲ್ಕಿಯಲ್ಲಿ. ಬಾಲಿವುಡ್ನಲ್ಲಿ ದೊಡ್ಡ ಸ್ಟಾರ್ ನಟನಾಗಿ ಹೆಸರು ಮಾಡಿದ್ದಾರೆ. ಆದರೂ ಅವರು ಕರ್ನಾಟಕದ ಸಂಪ್ರದಾಯವನ್ನು ಮರೆತಿಲ್ಲ. ಮದುವೆಯ ಎಲ್ಲಾ ಶಾಸ್ತ್ರಗಳು ದಕ್ಷಿಣ ಭಾರತದ ಸಂಪ್ರದಾಯದಂತೆ ನೆರವೇರಿದೆ.
(3 / 12)
ಸುನಿಲ್ ಶೆಟ್ಟಿ ಆಗ್ಗಾಗ್ಗೆ ಮಂಗಳೂರಿಗೆ ಬಂದು ದೇವರ, ದೈವದ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ತುಳು ಕಾರ್ಯಕ್ರಮಗಳಿಗೂ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದೀಗ ತಮ್ಮ ಮಗಳ ಮದುವೆಯಲ್ಲಿ ಕೂಡಾ ಅವರು ತಮ್ಮ ಊರಿನ ಸಂಪ್ರದಾಯವನ್ನು ಪಾಲಿಸಿದ್ದಾರೆ.
(4 / 12)
ಮದುವೆ ಹಾಗೂ ಹಳದಿ ಶಾಸ್ತ್ರದ ದಿನ ಸುನಿಲ್ ಶೆಟ್ಟಿ, ತಮ್ಮ ನಿವಾಸದ ಸುತ್ತಮುತ್ತ ಸೇವಂತಿಗೆ ಹೂವಿನಿಂದ ಸಿಂಗಾರ ಮಾಡಿಸಿದ್ದಾರೆ.
(5 / 12)
ಮದುವೆ ವೇಳೆ ಎಲ್ಲಾ ಶಾಸ್ತ್ರಗಳೂ ದಕ್ಷಿಣ ಭಾರತದ ಸಂಪ್ರದಾಯದಂತೆ ನೆರವೇರಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮದುವೆಗೆ ಬಂದ ಅತಿಥಿಗಳಿಗೆ ಸುನಿಲ್ ಶೆಟ್ಟಿ ಬಾಳೆ ಎಲೆ ಊಟದ ವ್ಯವಸ್ಥೆ ಮಾಡಿಸಿದ್ದರು ಎನ್ನಲಾಗಿದೆ.
(7 / 12)
ಮಗಳಿಗೆ ಮದುವೆ ಶಾಸ್ತ್ರ ಮಾಡುತ್ತಿರುವ ತಾಯಿ ಮಾನಾ ಶೆಟ್ಟಿ. ಸುನಿಲ್ ಶೆಟ್ಟಿ ಪತ್ನಿ ಮಾನಾ ಶೆಟ್ಟಿ ಬ್ಯುಸ್ನೆಸ್ ವುಮೆನ್. ಆಕೆ ಕೂಡಾ ಅನೇಕ ಬಾರಿ ಸುನಿಲ್ ಶೆಟ್ಟಿ ಜೊತೆ ಮಂಗಳೂರಿಗೆ ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
(8 / 12)
ಅರಿಶಿನ, ಹಾಲು, ಹೂವಿನಲ್ಲಿ ಮಿಂದೆದ್ದ ಕೆ.ಎಲ್. ರಾಹುಲ್ ಹಾಗೂ ಅಥಿಯಾ ಶೆಟ್ಟಿ. ರಾಹುಲ್ ಕೂಡಾ ಕರ್ನಾಟಕದವರು. ರಾಹುಲ್ ಹುಟ್ಟಿ ಬೆಳೆದದ್ದು ಬೆಂಗಳೂರಿನ ಮಾಗಡಿಯಲ್ಲಿ.
(9 / 12)
ನವ ದಂಪತಿಗೆ ಆಶೀರ್ವದಿಸುತ್ತಿರುವ ಸುನಿಲ್ ಶೆಟ್ಟಿ, ಮಾನಾ ಶೆಟ್ಟಿ ಹಾಗೂ ಕೆ.ಎನ್.ಲೋಕೇಶ್, ರಾಜೇಶ್ವರಿ ( ರಾಹುಲ್ ತಂದೆ-ತಾಯಿ)
(11 / 12)
ಮದುವೆಗೆ ಮಾಧ್ಯಮದವರಿಗೆ ಅವಕಾಶ ಇಲ್ಲದ ಕಾರಣ ಸುನಿಲ್ ಶೆಟ್ಟಿ ತಮ್ಮ ಪುತ್ರ ಅಹಾನ್ ಶೆಟ್ಟಿ ಜೊತೆ ಮನೆಯಿಂದ ಹೊರ ಬಂದು ತಮಗಾಗಿ ಕಾಯುತ್ತಿದ್ದ ಮಾಧ್ಯಮದವರಿಗೆ ಸಿಹಿ ಹಂಚಿದ್ದರು.
ಇತರ ಗ್ಯಾಲರಿಗಳು