National Horticulture day: ಕರ್ನಾಟಕದ ಹೆಮ್ಮೆಯ ವಿಜ್ಞಾನಿ ಎಂಎಚ್ ಮರಿಗೌಡರ ಸ್ಮರಣೆಗೆ ರಾಷ್ಟ್ರೀಯ ತೋಟಗಾರಿಕೆ ದಿನದ ಗೌರವ photos
- MH Marigowda ಕರ್ನಾಟಕದವರೇ ಆದ ಎಂಎಚ್‌ಮರಿಗೌಡ ಅವರನ್ನು ತೋಟಗಾರಿಕೆ ಪಿತಾಮಹ ಎನ್ನಲಾಗುತ್ತದೆ. ತೋಟಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಕಾರಣಕ್ಕೆ ಅವರ ಜನುಮ ದಿನವಾದ ಆಗಸ್ಟ್ 8 ಅನ್ನು ರಾಷ್ಟ್ರೀಯ ತೋಟಗಾರಿಕೆ ದಿನವಾಗಿ( National Horticulture day) ಆಚರಿಸಲಾಗುತ್ತಿದೆ. ಇಲ್ಲಿದೆ ವಿಶೇಷ
- MH Marigowda ಕರ್ನಾಟಕದವರೇ ಆದ ಎಂಎಚ್‌ಮರಿಗೌಡ ಅವರನ್ನು ತೋಟಗಾರಿಕೆ ಪಿತಾಮಹ ಎನ್ನಲಾಗುತ್ತದೆ. ತೋಟಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಕಾರಣಕ್ಕೆ ಅವರ ಜನುಮ ದಿನವಾದ ಆಗಸ್ಟ್ 8 ಅನ್ನು ರಾಷ್ಟ್ರೀಯ ತೋಟಗಾರಿಕೆ ದಿನವಾಗಿ( National Horticulture day) ಆಚರಿಸಲಾಗುತ್ತಿದೆ. ಇಲ್ಲಿದೆ ವಿಶೇಷ
(1 / 7)
ಮೈಸೂರಿನಲ್ಲಿ ಜನಿಸಿದ ಮರಿಗೌಡರು ರೈತ ಕುಟುಂಬದಲ್ಲಿ ಬಂದವರು. ಎಂಟು ದಶಕಗಳ ಹಿಂದೆಯೇ ಅವರು ತೋಟಗಾರಿಕೆಯ ಬಗ್ಗೆ ಆಸಕ್ತಿ ಹೊಂದಿ ಕೃಷಿ ಪದವಿ ಮೂಲಕ ವಿಶೇಷ ಗಮನ ನೀಡಿದವರು.
(2 / 7)
ತೋಟಗಾರಿಕೆಗೂ ಮರಿಗೌಡರಿಗೂ ಇಲ್ಲದ ನಂಟು.ಕರ್ನಾಟಕದಲ್ಲಿ ಹೂವು, ಹಣ್ಣು, ತರಕಾರಿಗಳನ್ನು ಒಳಗೊಂಡ ತೋಟಗಾರಿಕೆ ವಲಯಕ್ಕೆ ಯಥೇಚ್ಛ ಅವಕಾಶ ಇದೆ ಎಂದು ಅದಕ್ಕೆ ಮಾನ್ಯತೆ ಕೊಟ್ಟವರು ಮರಿಗೌಡರು.
(3 / 7)
ಕೃಷಿ ಶಿಕ್ಷಣ ಪಡೆದು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿ ಅಲ್ಲಿಯೇ ದೊಡ್ಡ ಹುದ್ದೆ ದೊರೆತರೂ ವಿದೇಶದಲ್ಲಿ ಉಳಿಯದೇ ಮಾತೃಭೂಮಿಗೆ ಮರಳಿ ಭಾರತದಲ್ಲಿ ತೋಟಗಾರಿಕೆ ವಿಜ್ಞಾನದಲ್ಲಿ ತೊಡಗಿಸಿಕೊಂಡರು. ಇದರಿಂದ ಕರ್ನಾಟಕವೂ ತೋಟಗಾರಿಕೆ ರಾಜ್ಯವಾಗಿ ರೂಪುಗೊಂಡಿತು.
(4 / 7)
ಬೆಂಗಳೂರಿನಲ್ಲಿ ಲಾಲ್ ಬಾಗ್,ಮೈಸೂರಿನಲ್ಲಿ ಕರ್ಜನ್ ಪಾರ್ಕ್ ಸಹಿತ ತೋಟಗಾರಿಕೆಗೆ ಮಹತ್ವ ಇರುವ ಸ್ಥಳಗಳನ್ನು ಅಭಿವೃದ್ದಿಪಡಿಸಿದವರೇ ಮರಿಗೌಡರು.
(5 / 7)
ತೋಟಗಾರಿಕೆ ಕೃಷಿ ಎನ್ನುವುದು ರೈತರನ್ನು ವರ್ಷದ ಎಲ್ಲಾ ಋತುವಿನಲ್ಲೂ ಕೈ ಹಿಡಿಯಬಲ್ಲದು. ಇದರಿಂದ ರೈತರು ಸ್ಥಿತಿವಂತರಾಗಲು ತೋಟಗಾರಿಕೆ ಬೇಕೇ ಬೇಕು ಎಂದು ಪ್ರತಿಪಾದಿಸಿ ಅದಕ್ಕೆ ಇನ್ನಿಲ್ಲದ ಒತ್ತು ನೀಡಿದ್ದರಿಂದಲೇ ಅವರನ್ನು ತೋಟಗಾರಿಕೆ ಪಿತಾಮಹ ಎಂದೇ ಕರೆಯಲಾಗುತ್ತದೆ.
(6 / 7)
ತೋಟಗಾರಿಕೆ ಎನ್ನುವುದು ಉಳ್ಳವರ ಪಾಲಾಗಬಾರದು.ಎಲ್ಲರಿಗೂ ಇದರ ಉಪಯೋಗ ದೊರಕಬೇಕು ಎಂದು ನರ್ಸರಿಗಳನ್ನು ತೋಟಗಾರಿಕೆ ಇಲಾಖೆ ನಿರ್ದೇಶಕರಾಗಿ ಪ್ರತಿ ಜಿಲ್ಲೆಯಲ್ಲೂ ಆರಂಭಿಸಿದರು. ಹಣ್ಣು, ಹೂವುಗಳ ಬೀಜಗಳನ್ನು ಉಚಿತವಾಗಿ ವಿತರಿಸಿದರು.
ಇತರ ಗ್ಯಾಲರಿಗಳು