ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಡಿಸಲು ಬಿಳಿ ಬಣ್ಣದ ತಟ್ಟೆಯನ್ನೇ ಬಳಸುವುದೇಕೆ? ಇದರ ಹಿಂದಿದೆ ಇಂಟರೆಸ್ಟಿಂಗ್ ವಿಚಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಡಿಸಲು ಬಿಳಿ ಬಣ್ಣದ ತಟ್ಟೆಯನ್ನೇ ಬಳಸುವುದೇಕೆ? ಇದರ ಹಿಂದಿದೆ ಇಂಟರೆಸ್ಟಿಂಗ್ ವಿಚಾರ

ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಡಿಸಲು ಬಿಳಿ ಬಣ್ಣದ ತಟ್ಟೆಯನ್ನೇ ಬಳಸುವುದೇಕೆ? ಇದರ ಹಿಂದಿದೆ ಇಂಟರೆಸ್ಟಿಂಗ್ ವಿಚಾರ

ನೀವು ಪುಡ್ಡಿನಾ, ಹೊರಗಡೆ ತಿನ್ನೋದು ನಿಮಗೆ ಇಷ್ಟನಾ? ಹಾಗಾದ್ರೆ ನೀವು ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಹೋಗ್ತಾ ಇರ್ತೀರಿ. ಅಲ್ಲಿ ಹೋದಾಗ ಸರ್ವಿಂಗ್ ಮಾಡಲು ಯಾವಾಗಲೂ ಬಿಳಿ ಪಾತ್ರೆಗಳನ್ನೇ ಬಳಸುವುದನ್ನು ನೀವು ನೋಡಿರಬಹುದು. ಆದರೆ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಬಿಳಿಪಾತ್ರೆಯನ್ನೇ ಬಳಸುವುದು ಏಕೆ ಎನ್ನುವುದನ್ನು ಯೋಚಿಸಿದ್ದೀರಾ? ಇದರ ಹಿಂದಿನ ಕಾರಣ ಹೀಗಿದೆ. 

ಅದು ಮದುವೆ ಪಾರ್ಟಿಯಾಗಿರಲಿ ಅಥವಾ ಪ್ರೀತಿಪಾತ್ರರ ಜೊತೆಗೆ ಯಾವುದೇ ವಿಶೇಷ ಸಂದರ್ಭವನ್ನು ಆಚರಿಸುತ್ತಿರಲಿ, ಹೆಚ್ಚಿನ ಜನರು ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳಲ್ಲಿ ಲಂಚ್‌ ಅಥವಾ ಡಿನ್ನರ್ ಮಾಡಲು ಬಯಸುತ್ತಾರೆ. ಆದರೆ ಹೀಗೆ ಹೊಟೇಲ್, ರೆಸ್ಟೊರೆಂಟ್‌ಗಳಲ್ಲಿ ತಿನ್ನಲು ಹೋಗುವ ಬಹುತೇಕರು ನಿರ್ಲಕ್ಷಿಸುವ ಒಂದು ಅಂಶ ಎಂದರೆ ಅಲ್ಲಿ ಬಡಿಸುವ ಪಾತ್ರೆಯನ್ನ ಗಮನಿಸದೇ ಇರುವುದು, ಗಮನಿಸಿದರೂ ಸ್ವಚ್ಛತೆಯ ಕಾರಣದಿಂದ ಗಮನಿಸಿ ಇರಬಹುದು. ಆದರೆ ಅದಕ್ಕಿಂತಲೂ ಮುಖ್ಯವಾದದು ಅಲ್ಲಿ ಬಳಸುವುದು ಬಿಳಿ ಪಾತ್ರೆ ಮಾತ್ರ ಎಂಬುದು. ಹೌದು, ಹೋಟೆಲ್‌ಗಳಲ್ಲಿ ಯಾವಾಗಲೂ ಬಿಳಿ ಪ್ಲೇಟ್‌ಗಳಲ್ಲಿ ಆಹಾರವನ್ನು ನೀಡಲಾಗುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ನೋಡಿ. 
icon

(1 / 8)

(shutterstock)

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಪ್ರತಿ ಭಕ್ಷ್ಯವನ್ನು ಯಾವಾಗಲೂ ಬಿಳಿ ತಟ್ಟೆಯಲ್ಲಿ ನೀಡಲಾಗುತ್ತದೆ. ಇದರ ಹಿಂದಿನ ಕಾರಣ ತುಂಬಾ ವಿಶೇಷ ಮತ್ತು ವಿಭಿನ್ನವಾಗಿದೆ. ಹೋಟೆಲ್‌ಗೆ ಸಂಬಂಧಿಸಿದ ಈ ರಹಸ್ಯಗಳನ್ನು ತಿಳಿದ ನಂತರ ನೀವು ಕೂಡ ಆಶ್ಚರ್ಯಚಕಿತರಾಗುತ್ತೀರಿ. ಈ ವಿಚಾರ ಸರಳ ಆದ್ರೂ ನನ್ನ ತಲೆಗೆ ಹೊಳೆದೇ ಇಲ್ವಲ್ಲಾ ಎಂದು ನಿಮಗೆ ಅನ್ನಿಸದೇ ಇರದು. 
icon

(2 / 8)

ಆಹಾರ ಗಮನ ಸೆಳೆಯುತ್ತದೆ: ಹೋಟೆಲ್‌ಗಳಲ್ಲಿ ಬಿಳಿ ಪ್ಲೇಟ್‌ಗಳಲ್ಲಿ ಆಹಾರವನ್ನು ಬಡಿಸಲು ಮೊದಲ ಕಾರಣವೆಂದರೆ ಅದರಲ್ಲಿ ಬಡಿಸುವ ಪ್ರತಿಯೊಂದು ಭಕ್ಷ್ಯದ ಬಣ್ಣವು ರೋಮಾಂಚಕವಾಗಿದ್ದು, ಗಮನ ಸೆಳೆಯುವಂತಿರುತ್ತದೆ. ಬಿಳಿ ಬಣ್ಣವು ಸ್ಥಿರವಾದ ಹಿನ್ನೆಲೆಯನ್ನು ಹೊಂದಿರುತ್ತದೆ. ಇದರಿಂದಾಗಿ ಬಿಳಿ ತಟ್ಟೆಯಲ್ಲಿ ಬಡಿಸಲಾದ ಭಕ್ಷ್ಯವು ಆಕರ್ಷಕವಾಗಿ ಕಾಣುತ್ತದೆ, ಆ ಕಾರಣಕ್ಕೆ ತಿನ್ನುವ ಆಸೆಯನ್ನು ಹೆಚ್ಚಿಸುತ್ತದೆ. ತಿನ್ನುವ ಮೊದಲು ವ್ಯಕ್ತಿಯು ಆಹಾರವನ್ನು ಕಣ್ಣುಗಳಿಂದ ಆನಂದಿಸುತ್ತಾನೆ ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು. ಈ ತಂತ್ರದ ಹಿನ್ನೆಲೆಯಲ್ಲಿ ತಿನ್ನುವ ಮೊದಲು ಆಹಾರಗಳು ಗಮನ ಸೆಳೆಯಬೇಕು ಎನ್ನುವ ಉದ್ದೇಶದಿಂದ ಬಿಳಿ ಪಾತ್ರೆಗಳನ್ನು ಬಳಸುತ್ತಾರೆ. 
icon

(3 / 8)

ಬಿಳಿ ತಟ್ಟೆಯಲ್ಲಿ ಯಾವುದೇ ಮಾದರಿ ಅಥವಾ ವಿನ್ಯಾಸವಿಲ್ಲದ ಕಾರಣ, ವ್ಯಕ್ತಿಯ ಗಮನವು ವಿಚಲಿತವಾಗುವುದಿಲ್ಲ. ಇದರಿಂದಾಗಿ ವ್ಯಕ್ತಿಯು ತನಗೆ ಬೇಕಾದಷ್ಟನ್ನೇ ತಟ್ಟೆಗೆ ಹಾಕಿಕೊಳ್ಳುತ್ತಾನೆ. ಆಹಾರ ವ್ಯರ್ಥ ಮಾಡುವುದನ್ನು ತಪ್ಪಿಸಲು ಕೂಡ ಇದು ಉತ್ತಮ. ಆ ಕಾರಣಕ್ಕೆ ಬಹುತೇಕ ರೆಸ್ಟೋರೆಂಟ್‌ಗಳು  ಬಿಳಿ ಪ್ಲೇಟ್‌ಗಳನ್ನೇ ಇರಿಸುತ್ತಾರೆ.
icon

(4 / 8)

ಮನಶ್ಶಾಸ್ತ್ರಜ್ಞರ ಪ್ರಕಾರ, ನಿಮ್ಮ ಆಹಾರವನ್ನು ಬಡಿಸುವ ಪ್ಲೇಟ್ ನಿಮ್ಮ ಹಸಿವು ಮತ್ತು ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಬಿಳಿ ಬಣ್ಣವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ರೆಸ್ಟೋರೆಂಟ್‌ಗಳು ಹೆಚ್ಚಾಗಿ ಬಿಳಿ ಕ್ರೋಕರಿ ಸೆಟ್‌ಗಳನ್ನು ಬಳಸುತ್ತವೆ. ಬಿಳಿಯ ತಟ್ಟೆಯಲ್ಲಿ ಇಟ್ಟಿರುವ ಖಾದ್ಯವು ರುಚಿಕರವಾಗಿ ಕಾಣುವುದಲ್ಲದೆ ನಿಮ್ಮ ಹಸಿವನ್ನು ಹೆಚ್ಚಿಸುತ್ತವೆ. 
icon

(5 / 8)

ಸಾಮಾನ್ಯವಾಗಿ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವ ಬಾಣಸಿಗರು ತಮ್ಮ ಪಾಕವಿಧಾನಗಳನ್ನು ಬಿಳಿ ಪ್ಲೇಟ್‌ಗಳಲ್ಲಿ ಬಡಿಸಲು ಇಷ್ಟಪಡುತ್ತಾರೆ. ಏಕೆಂದರೆ ಬಿಳಿ ತಟ್ಟೆಯಲ್ಲಿ ಇಟ್ಟಿರುವ ಪ್ರತಿಯೊಂದು ಖಾದ್ಯದ ಬಣ್ಣವು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಇದರಿಂದಾಗಿ ಗ್ರಾಹಕನ ಹಸಿವು ಮತ್ತು ಆ ಖಾದ್ಯವನ್ನು ತಿನ್ನುವ ಹಂಬಲ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ. 
icon

(6 / 8)

ಬಿಳಿ ಬಣ್ಣವು ಸ್ವಚ್ಛ ಮತ್ತು ನೈರ್ಮಲ್ಯದ ನೋಟವನ್ನು ನೀಡುತ್ತದೆ ಎಂಬ ಕಾರಣದಿಂದ ಹೋಟೆಲ್‌ಗಳಲ್ಲಿ ಆಹಾರವನ್ನು ಹೆಚ್ಚಾಗಿ ಬಿಳಿ ಪಾತ್ರೆಗಳಲ್ಲಿ ನೀಡಲಾಗುತ್ತದೆ. ಆಹಾರವನ್ನು ಬಡಿಸಲು ಬಳಸುವ ಪಾತ್ರೆಗಳಿಗೆ ಇದು ಅತ್ಯಂತ ಮುಖ್ಯವಾದ ವಿಷಯವಾಗಿದೆ.
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು