ಹುಡುಗಿಯರನ್ನು ನಂಬಿ ನರಕಕ್ಕೆ ಹೋಗುವ ಬದಲು...; ಆಟೊಗಳ ಮೇಲೆ ಬರೆದ ಈ ಸಾಲುಗಳನ್ನು ಓದಿದ್ರೆ ಬಿದ್ದುಬಿದ್ದು ನಗ್ತೀರಿ
- ರಸ್ತೆಯಲ್ಲಿ ಓಡಾಡುವಾಗ, ಟ್ರಾಫಿಕ್‌ನಲ್ಲಿದ್ದಾಗ ಆಟೊಗಳ ಹಿಂದೆ ಬರೆದಿರುವ ಸಾಲುಗಳನ್ನ ನೋಡಿದ್ರೆ ಕೆಲವೊಮ್ಮೆ ಬಿದ್ದು ಬಿದ್ದು ನಗ್ತೇವೆ, ಕೆಲವು ಬರಹ ಹಾರ್ಟ್‌ಗೆ ಟಚ್ ಆಗುತ್ತೆ, ಕೆಲವೊಮ್ಮೆ ಅರ್ಥನೇ ಆಗ್ತದೆ ತಲೆ ಕೆರೆದುಕೊಳ್ಳುವಂತಾಗುತ್ತೆ. ಅದೇನೇ ಇರ್ಲಿ, ಆಟೊಗಳ ಹಿಂದೆ ಬರೆದಿರುವ ಸಾಲುಗಳಂತೂ ಒಂದಕ್ಕಿಂತ ಒಂದು ಅದ್ಭುತ ಕಣ್ರಿ. ನಿಮಗಾಗಿ ಆಟೊ ಸಾಲುಗಳ ಚಿತ್ರನೋಟ
- ರಸ್ತೆಯಲ್ಲಿ ಓಡಾಡುವಾಗ, ಟ್ರಾಫಿಕ್‌ನಲ್ಲಿದ್ದಾಗ ಆಟೊಗಳ ಹಿಂದೆ ಬರೆದಿರುವ ಸಾಲುಗಳನ್ನ ನೋಡಿದ್ರೆ ಕೆಲವೊಮ್ಮೆ ಬಿದ್ದು ಬಿದ್ದು ನಗ್ತೇವೆ, ಕೆಲವು ಬರಹ ಹಾರ್ಟ್‌ಗೆ ಟಚ್ ಆಗುತ್ತೆ, ಕೆಲವೊಮ್ಮೆ ಅರ್ಥನೇ ಆಗ್ತದೆ ತಲೆ ಕೆರೆದುಕೊಳ್ಳುವಂತಾಗುತ್ತೆ. ಅದೇನೇ ಇರ್ಲಿ, ಆಟೊಗಳ ಹಿಂದೆ ಬರೆದಿರುವ ಸಾಲುಗಳಂತೂ ಒಂದಕ್ಕಿಂತ ಒಂದು ಅದ್ಭುತ ಕಣ್ರಿ. ನಿಮಗಾಗಿ ಆಟೊ ಸಾಲುಗಳ ಚಿತ್ರನೋಟ
(1 / 10)
ಸಾಮಾಜಿಕ ಜಾಲತಾಣಗಳಲ್ಲಿ ಈಗೀಗ ಆಟೊ ಮೇಲೆ ಬರೆದಿರುವ ಸಾಲುಗಳ ಪೋಟೊಗಳು ಹರಿದಾಡುತ್ತಿರುತ್ತವೆ. ಕೆಲವೊಮ್ಮೆ ಆಟೊಗಳ ಮೇಲೆ ಬರೆದಿರುವ ಸಾಲುಗಳನ್ನು ನೋಡಿದ್ರೆ ಯಾವ ಕವಿಯಪ್ಪಾ ಇದನ್ನ ಬರ್ದಿರೋದು ಅನ್ಸುತ್ತೆ. ಬಹುತೇಕ ಭಗ್ನಪ್ರೇಮಿಯ ಕೋಟ್‌ಗಳೇ ಇರುತ್ತೆ ಅನ್ನೋದು ಸುಳ್ಳಲ್ಲ. ಹಗಂತ ಅಮ್ಮ, ಅಪ್ಪನ ಆಶೀರ್ವಾದ, ಮದರ್ಸ್ ಗಿಫ್ಟ್ ಅಂತೆಲ್ಲಾ ಇರೊಲ್ಲ ಅಂತಲ್ಲ. ಆದರೆ ಕೆಲವು ಆಟೊ ಬರಹಗಳಂತೂ ಸಖತ್ ಫನ್ನಿಯಾಗಿರುತ್ತೆ. ಅದನ್ನ ಓದಿದ ಮೇಲೆ ಹಿಂಗೂ ಬರೆಸೋದಾ ಅಂತ ನೀವು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ತೀರಿ. ಆಟೊ ಮೇಲೆ ಬರೆದಿರುವ ಚಿತ್ರ ವಿಚಿತ್ರ ಸಾಲುಗಳ ಚಿತ್ರ ಲಹರಿ ನಿಮಗಾಗಿ, ನೀವು ಓದಿ ಖುಷಿ ಪಡಿ.
(2 / 10)
'Slim or Fat, Black or White, Vigin or Not All Girls Deserve Respet' ಆಟೊವೊಂದರ ಮೇಲೆ ಬರೆದ ಈ ಸಾಲುಗಳು ಹೃದಯ ಮುಟ್ಟುವಂತಿದೆ. ಹೆಣ್ಣೆಗೆ ಗೌರವ ಕೊಡಬೇಕು ಎಂದು ಸೂಚಿಸುವ ಈ ಬರಹವು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಬಹುತೇಕರು ಈ ಬರಹವನ್ನು ಮೆಚ್ಚಿಕೊಂಡಿದ್ದಾರೆ.
(3 / 10)
ಅಂಜನೇಯ, ಗಣೇಶ ಅಂತೆಲ್ಲಾ ದೇವರ ಹೆಸರನ್ನು ಆಟೊ ಮೇಲೆ ಬರೆಸಿರುವುದು ನೋಡಿರುತ್ತೇವೆ. ಅಮ್ಮ ದೇವರು, ಅಪ್ಪ ದೇವರು ಎಂದು ಬರೆಸಿಕೊಂಡವರ ಆಟೊದಲ್ಲಿ ಓಡಾಡಿರುತ್ತೇವೆ. ಆದ್ರೆ ಇಲ್ಲೊಬ್ಬರು ಆಟೊ ಡ್ರೈವರ್ ನನ್ನವಳು ದೇವರು ಅಂತ ಹೆಂಡ್ತಿನ ದೇವರ ಸ್ಥಾನದಲ್ಲಿ ಇರಿಸಿದ್ದಾರೆ ನೋಡಿ.
(4 / 10)
ರಾಜ್ಯದ ಎಲ್ಲಾ ಕಡೆಯ ಆಟೊಗಳಿಗಿಂತ ಬೆಂಗಳೂರಿನ ಆಟೊಗಳಲ್ಲಿ ಕನ್ನಡಾಭಿಮಾನ ಉಕ್ಕಿ ಹರಿಯುವುದನ್ನು ಕಾಣುತ್ತೇವೆ. ಇಲ್ಲೊಂದು ಆಟೊದಲ್ಲಿ ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡ ಕಲಿ, ಅಹಂಕಾರ ತೋರಿಸಬೇಡ ಅಂತ ಪರ ಭಾಷಿಗರಿಗೆ ಟಾಂಗ್ ಕೊಡುವಂತೆ ಇಂಗ್ಲಿಷ್‌ನಲ್ಲಿ ಸಾಲುಗಳನ್ನು ಬರೆಸಿಕೊಂಡಿದ್ದಾರೆ
(5 / 10)
ಬೆಂಗಳೂರಿನ ಆಟೊವೊಂದರ ಮೇಲೆ ಬರೆದಿರುವ ಈ ಸಾಲು ನೋಡಿದ್ರೆ ನಿಮಗೆ ನಗು ಬರದೇ ಇರೋಕೆ ಸಾಧ್ಯನೇ ಇಲ್ಲ. ‘ದೇವರು ಕಣ್ಬಿಟ್ರೆ ಆನಂದ, ಮನುಷ್ಯ ಕಣ್ಬಟ್ರೆ ಗೋವಿಂದ‘.
(6 / 10)
ಈ ಆಟೊದ ಮೇಲೆ ಬರೆದಿರುವ ಸಾಲುಗಳನ್ನ ನೋಡಿದ್ರೆ ಹುಡುಗಿಯ ವಿಚಾರದಲ್ಲಿ ಮೋಸ ಹೋದ ಅನುಭವಿ ತನ್ನ ಮನದಾಳದ ಮಾತನ್ನ ಬರೆದಂತಿದೆ. ಹುಡುಗಿಯರ ಕೈಯಲ್ಲಿ ನರಕಕ್ಕೆ ಹೋಗುವ ಬದಲು ಸಮಾಧಿಗೆ ಹೋಗುವುದು ಉತ್ತಮ ಎಂದು ಬರೆಯುವ ಜೊತೆಗೆ ಚೂರಾದ ಹೃದಯದ ಹಾರ್ಟ್ ಸಿಂಬಲ್‌ಗಳಲ್ಲೂ ಹಾಕಲಾಗಿದೆ.
(7 / 10)
ಮಾತನಾಡಿಸಿ ಮರೆಯಬೇಡಿ, ಮನಸು ಕೊಟ್ಟು ನೋಯಿಸಬೇಡ, ಆಹಾ ಎಂತಹ ಸಾಲು ಅಲ್ವಾ. ಆಟೊದವರಿಗೆ ಇಂತಹ ಸಾಲುಗಳೆಲ್ಲಾ ಎಲ್ಲಿಂದ ಸಿಗುತ್ತೆ, ಇದನ್ನೆಲ್ಲಾ ಬರಿಯೋರು ಯಾರಪ್ಪಾ ಅಂತ ಅನ್ನಿಸದೇ ಇರೋಲ್ಲ ನೋಡಿ
(8 / 10)
ಆಟೊ ಡ್ರೈವರ್‌ಗಳೆಲ್ಲಾ ಭಗ್ನಪ್ರೇಮಿಗಳಾ ಎನ್ನಿಸುವಂತೆ ಮಾಡುತ್ತೆ ಕೆಲವರ ಆಟೊಗಳ ಹಿಂಬದಿಯಲ್ಲಿ ಬರೆದಿರುವ ಸಾಲುಗಳು. ನಿಮಗೆ ಬೇರೆಲ್ಲೂ ಇಂತಹ ಬರಹಗಳನ್ನ ಕಾಣೋಕೆ ಸಿಗಲು ಸಾಧ್ಯವೇ ಇಲ್ಲ. ಈ ಆಟೊದ ಮೇಲೆ ಬರೆದಿರುವ ಬರಹ ನೋಡಿ ಲವ್ ಈಸ್ ಲೈಫ್, ಬಟ್ ಲವರ್ ಈಸ್ ನಾಟ್ ವೈಫ್. ಇವ್ರಿಗೆ ಲವರ್ ಕೈ ಕೊಟ್ಟಿದ್ದು ಪಕ್ಕಾ ಅನ್ನಿಸುತ್ತೆ.
(9 / 10)
ಆಟೊಗಳ ಭಗ್ನ ಪ್ರೇಮಿಯ ಬರಹ, ಫನ್ನಿ ಕೋಟ್‌ಗಳು ಮಾತ್ರ ಬದುಕಿಗೆ ಹತ್ತಿರವಾಗುವ, ಮನಸ್ಸಿಗೆ ತಾಕುವ ಸಾಲುಗಳನ್ನು ಕೂಡ ಕಾಣಬಹುದು. ಈ ಆಟೊ ಮೇಲೆ ಬರೆದಿರುವ ಸಾಲು ನೋಡಿ, ಇಂದಿನ ಜಗತ್ತಿಗೆ ಇದು ಸ್ಯೂಟ್ ಅನ್ನಿಸುತ್ತೆ. ನಗುವಾಗ ಎಲ್ಲರೂ ನೆಂಟರೂ ಅಳುವಾಗ ಯಾರೂ ಇಲ್ಲ.
ಇತರ ಗ್ಯಾಲರಿಗಳು