ಶುರುವಾಗ್ತಿದೆ ಮಳೆಗಾಲ, ನೀವಿನ್ನೂ ರೆಡಿ ಆಗಿಲ್ವಾ? ಜೂನ್ ಆರಂಭಕ್ಕೂ ಮುನ್ನ ಈ ವಿಚಾರಗಳತ್ತ ಗಮನ ಹರಿಸೋದು ಮರಿಬೇಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶುರುವಾಗ್ತಿದೆ ಮಳೆಗಾಲ, ನೀವಿನ್ನೂ ರೆಡಿ ಆಗಿಲ್ವಾ? ಜೂನ್ ಆರಂಭಕ್ಕೂ ಮುನ್ನ ಈ ವಿಚಾರಗಳತ್ತ ಗಮನ ಹರಿಸೋದು ಮರಿಬೇಡಿ

ಶುರುವಾಗ್ತಿದೆ ಮಳೆಗಾಲ, ನೀವಿನ್ನೂ ರೆಡಿ ಆಗಿಲ್ವಾ? ಜೂನ್ ಆರಂಭಕ್ಕೂ ಮುನ್ನ ಈ ವಿಚಾರಗಳತ್ತ ಗಮನ ಹರಿಸೋದು ಮರಿಬೇಡಿ

ಮಳೆಗಾಲ ಸಂಪೂರ್ಣವಾಗಿ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಕೆಲವೆಡೆ ಮಳೆ ಸುರಿಯಲು ಶುರುವಾಗಿದೆ. ವರುಣನ ಆಗಮನಕ್ಕೂ ಮುನ್ನ ಈ ಕೆಲವು ಸಲಹೆಗಳನ್ನು ತಪ್ಪದೇ ಅನುಸರಿಸಿ, ಇಲ್ಲದಿದ್ದರೆ ಮುಂದೆ ತೊಂದರೆ ಎದುರಿಸಬೇಕಾಗಬಹುದು.

ಮಳೆಗಾಲ ಎಂದರೆ ಬಹುತೇಕ ಎಲ್ಲರಿಗೂ ಪ್ರೀತಿ, ಸೂರ್ಯನ ಶಾಖದಿಂದ ಬಳಲಿ ಬೆಂಡಾದ ಭೂಮಿ ತಾಯಿಗೆ ಮಾತ್ರವಲ್ಲ ಸಕಲ ಜೀವಚರಗಳಿಗೂ ವರುಣ ತಂಪನ್ನೆರೆಯುತ್ತಾನೆ. ಆದರೆ ಜೋರಾಗಿ ಸುರಿಯುವ ಮಳೆ ಒಂದಿಷ್ಟು ಅಪಾಯಗಳನ್ನೂ ಹೊತ್ತು ತರುತ್ತದೆ. ಅದಕ್ಕಾಗಿ ಮಳೆಗಾಲಕ್ಕೆ ಒಂದಿಷ್ಟು ಸಿದ್ಧತೆ ಖಂಡಿತ ಬೇಕು. ಮಳೆಗಾಲದಲ್ಲಿ ಸಮಸ್ಯೆಗಳು ಹೆಚ್ಚುವ ಕಾರಣ ಈ ಸಲಹೆಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಜೂನ್ ಆರಂಭಕ್ಕೂ ಮುನ್ನ ಈ ವಿಚಾರಗಳತ್ತ ಗಮನ ಹರಿಸಿ.
icon

(1 / 9)

ಮನೆಯ ಮೇಲ್ಛಾವಣಿ, ಸುತ್ತಲಿನ ಪರಿಸರ ಸ್ವಚ್ಛ ಮಾಡಿ: ಮಳೆಗಾಲ ಆರಂಭಕ್ಕೂ ಮುನ್ನ ಮನೆಯ ಮೇಲ್ಛಾವಣಿ, ಸುತ್ತಲಿನ ಪರಿಸರವನ್ನು ಸ್ವಚ್ಛ ಮಾಡಲು ಗಮನ ಕೊಡಿ. ಮನೆಯ ಟೆರೆಸ್‌ನಿಂದ ನೀರು ಸರಾಗವಾಗಿ ಹರಿದು ಹೋಗುತ್ತಿದೆಯೇ ಗಮನಿಸಿ. ಪೈಪ್‌ಗಳಲ್ಲಿ ಸಿಕ್ಕಿಕೊಂಡಿರುವ ಕಸ ತೆರವುಗೊಳಿಸಿ, ಪಾಚಿ ಕಟ್ಟಿರುವುದನ್ನು ಸ್ವಚ್ಛ ಮಾಡಿ. ನೀರು ಹರಿದು ಹೋಗಲು ಅವಕಾಶ ನೀಡಿ. ಮನೆಯ ಸುತ್ತಲಿನ ಗಟಾರ, ಚರಂಡಿಯಂತಹ ಪ್ರದೇಶಗಳಲ್ಲಿ ನೀರು ಹರಿದುಹೋಗಲು ವ್ಯವಸ್ಥೆ ಮಾಡಿ. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ. ಮಳೆಗಾಲದಲ್ಲಿ ನೀರು ನಿಲ್ಲುವ ಕಾರಣಕ್ಕೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
icon

(2 / 9)

(PC: Canva)

ಮನೆಯ ಸುತ್ತಲೂ ತೆಂಗಿನಸಿಪ್ಪೆ, ಡಬ್ಬಿಗಳು, ಪ್ಲಾಸ್ಟಿಕ್ ಕವರ್‌ಗಳು ಇಂತಹ ನೀರು ನಿಲ್ಲುವ ವಸ್ತುಗಳಿದ್ದರೆ ಮೊದಲು ಅವುಗಳನ್ನು ತೆರವುಗೊಳಿಸಿ. ಅವುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ. ಜೊತೆಗೆ ಕೊಳಚೆ ನೀರು ಇಲ್ಲದ ಆರೋಗ್ಯ ಸಮಸ್ಯೆಗಳು ಹರಡಲು ಕಾರಣವಾಗುತ್ತದೆ. ಹಾಗಾಗಿ ಮನೆಯ ಸುತ್ತಲಿನ ಪರಿಸರದಲ್ಲಿ ಎಲ್ಲೂ ನೀರು ನಿಲ್ಲಲ್ಲು ಬಿಡಬೇಡಿ. ಇದು ಮಳೆಗಾಲ ಆರಂಭವಾಗುವ ಮುನ್ನ ಮಾಡಬೇಕಾದ ಅಗತ್ಯ ಕೆಲಸವಾಗಿದೆ. (ಸಾಂಕೇತಿಕ ಚಿತ್ರ)
icon

(3 / 9)

ಮಳೆಗಾಲ ಆರಂಭಕ್ಕೂ ಮುನ್ನ ಮನೆಯ ಕಿಟಕಿ ಬಾಗಿಲುಗಳನ್ನು ಪರೀಕ್ಷಿಸಿ. ಅವುಗಳಲ್ಲಿ ರಿಪೇರಿ ಇದ್ದರೆ ಮೊದಲೇ ಮಾಡಿಸಿ. ಮಳೆಗಾಲದಲ್ಲಿ ಸೊಳ್ಳೆ, ಹಾವು ಮುಂತಾದವುಗಳ ಕಾಟ ಹೆಚ್ಚಿರುವ ಕಾರಣ ಕಿಟಕಿ, ಬಾಗಿಲು ಭದ್ರ ಪಡಿಸಿಕೊಳ್ಳುವುದು ಉತ್ತಮ. ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮ.
icon

(4 / 9)

ಗಾರ್ಡನ್ ಸ್ವಚ್ಛ ಮಾಡಿ: ನಿಮ್ಮ ಮನೆಯಲ್ಲಿ ಟೆರೆಸ್ ಗಾರ್ಡನ್ ಅಥವಾ ಮನೆ ಎದುರು ಗಾರ್ಡನ್ ಇದ್ದರೆ ಅದರ ಸ್ವಚ್ಛತೆಗೆ ಗಮನ ಹರಿಸಿ. ಗಾರ್ಡನ್‌ನಲ್ಲಿ ಎಲೆಗಳು, ಹಣ್ಣುಗಳು ಬಿದ್ದು ಕೊಳೆಯದಂತೆ ನೋಡಿಕೊಳ್ಳಿ. ಇದರಿಂದ ಮಳೆಗಾಲದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಜೊತೆಗೆ ಕೊಳೆತ ಎಲೆಗಳು ವಾಸನೆಗೂ ಕಾರಣವಾಗಬಹುದು. ಇದರಿಂದ ಮೊದಲೇ ಸ್ವಚ್ಛ ಮಾಡುವುದು ಉತ್ತಮ.
icon

(5 / 9)

ಸೊಳ್ಳೆ ನಿರೋಧಕ ಗಿಡಗಳನ್ನು ನೆಟ್ಟುಕೊಳ್ಳಿ: ಮಳೆಗಾಲದಲ್ಲಿ ಅತ್ಯಂತ ಅಪಾಯಕಾರಿ ಎಂದರೆ ಸೊಳ್ಳೆಗಳು. ಸೊಳ್ಳೆಗಳಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಈಗಲೇ ಸೊಳ್ಳೆ ನಿರೋಧಕ ಗಿಡಗಳನ್ನು ಮನೆಯ ಬಳಿ ನೆಟ್ಟುಕೊಳ್ಳಿ. ಮನೆಯ ಒಳಗೂ ಸೊಳ್ಳೆಗಳು ಬಾರದಂತೆ ಸುರಕ್ಷತೆ ವಹಿಸಿ. ಕಿಟಕಿ ಬಳಿ ಮೆಸ್ ಅಳವಡಿಸಿ. ಸೊಳ್ಳೆ ಪರದೆಗಳನ್ನು ತಂದಿರಿಸಿಕೊಳ್ಳಿ.
icon

(6 / 9)

ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ: ಮಳೆಗಾಲದಲ್ಲಿ ಬೇಡವೆಂದರೂ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಈಗಿನಿಂದಲೇ ತಿನ್ನುವ ಅಭ್ಯಾಸ ಮಾಡಿ. ಸಾಕಷ್ಟು ನೀರು ಕುಡಿಯಿರಿ. ಮನೆಯ ಒಳಗೆ ಹಾಗೂ ಮನೆಯ ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಗಮನ ಕೊಡಿ.
icon

(7 / 9)

ರೈನ್‌ಕೋಟ್‌, ಛತ್ರಿ ಖರೀದಿಸಿ: ಮಳೆಗಾಲ ಆರಂಭವಾಗಲು ಇನ್ನೂ ಸಮಯ ಇದೆ ಎನ್ನುವ ಮನಸ್ಥಿತಿ ಬೇಡ. ಈಗಲೇ ಮಳೆ ಸುರಿಯಲು ಶುರುವಾಗಿದ್ದು, ಈಗಿನಿಂದಲೇ ಮಳೆಗಾಲಕ್ಕೆ ಸಿದ್ಧತೆ ಇರಬೇಕು, ಹಾಗಾಗಿ ಛತ್ರಿ, ರೈನ್‌ಕೋಟ್‌ ಖರೀದಿಸಲು ಮರೆಯಬೇಡಿ. ಆರಂಭದ ಮಳೆಯಲ್ಲಿ ನೆನೆಯುವುದು ಹಿತವಾದರೂ, ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ, ಹಾಗಾಗಿ ಎಚ್ಚರ ವಹಿಸುವುದು ಅಗತ್ಯ.
icon

(8 / 9)

ಮಳೆಗಾಲದಲ್ಲಿ ನಾವಷ್ಟೇ ಸುರಕ್ಷಿತರಾಗಿದ್ದರೆ ಸಾಲುವುದಿಲ್ಲ, ಸಾಕುಪ್ರಾಣಿಗಳ ಸುರಕ್ಷತೆಗೂ ಆದ್ಯತೆ ನೀಡಬೇಕು. ಅವು ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಇರಲು ಸಾಧ್ಯವಾಗುವುದಿಲ್ಲ. ಅವುಗಳನ್ನು ರಕ್ಷಿಸಲು, ಮಳೆಯಲ್ಲಿ ನೆನೆಯದಂತೆ ಇರಲು ಅವುಗಳಿಗೆ ಸುರಕ್ಷಿತ ಜಾಗ ನಿರ್ಮಿಸುವುದು ಮುಖ್ಯವಾಗುತ್ತದೆ. (ಸಾಂಕೇತಿಕ ಚಿತ್ರ)
icon

(9 / 9)

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು