ಅತಿ ಹೆಚ್ಚು ಯುದ್ಧ ವಿಮಾನಗಳನ್ನು ಹೊಂದಿರುವ ವಿಶ್ವದ 10 ದೇಶಗಳಿವು, ಇದರಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ; ಇಲ್ಲಿದೆ ಮಾಹಿತಿ
- ಯಾವುದೇ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ವಾಯುಪಡೆಯ ಪಾತ್ರ ಮಹತ್ವದ್ಧು. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ 15ನೇ ಆವೃತ್ತಿ ಏರ್ ಷೋ ಸಂದರ್ಭ ಅತಿ ಹೆಚ್ಚು ಯುದ್ಧ ವಿಮಾನಗಳನ್ನು ಹೊಂದಿರುವ ವಿಶ್ವದ 10 ದೇಶಗಳ ಬಗ್ಗೆ ತಿಳಿಯಿರಿ.
- ಯಾವುದೇ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ವಾಯುಪಡೆಯ ಪಾತ್ರ ಮಹತ್ವದ್ಧು. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ 15ನೇ ಆವೃತ್ತಿ ಏರ್ ಷೋ ಸಂದರ್ಭ ಅತಿ ಹೆಚ್ಚು ಯುದ್ಧ ವಿಮಾನಗಳನ್ನು ಹೊಂದಿರುವ ವಿಶ್ವದ 10 ದೇಶಗಳ ಬಗ್ಗೆ ತಿಳಿಯಿರಿ.
(1 / 12)
ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳು ಮತ್ತು ಮಿಲಿಟರಿ ವೆಚ್ಚದಲ್ಲಿ ಭಾರಿ ಹೆಚ್ಚಳದ ನಡುವೆ ಜಾಗತಿಕ ಮಟ್ಟದಲ್ಲಿ ವಾಯುಪಡೆಯ ಶಕ್ತಿ ಬಲವಾಗುತ್ತಿದೆ. ಗ್ಲೋಬಲ್ ಫೈರ್‌ಪವರ್ 2025ರ ಇತ್ತೀಚಿನ ವರದಿಯ ಪ್ರಕಾರ, ವಿಶ್ವದ ಅತ್ಯಂತ ಶಕ್ತಿಶಾಲಿ ವಾಯುಪಡೆಗಳ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ. ಭಾರತವು ನಾಲ್ಕನೇ ಸ್ಥಾನ ಪಡೆದಿದೆ. ಹಾಗಾದರೆ ಯಾವೆಲ್ಲಾ ದೇಶಗಳು ಅತಿ ಹೆಚ್ಚು ಯುದ್ಧ ವಿಮಾನಗಳನ್ನು ಹೊಂದಿವೆ ನೋಡಿ.
(2 / 12)
1. ಅಮೆರಿಕ ಅಮೆರಿಕದ ವಾಯುಪಡೆಯು 13,043 ಮಿಲಿಟರಿ ವಿಮಾನಗಳನ್ನು ಹೊಂದಿರುವ ವಿಶ್ವದ ಅತ್ಯಂತ ಬಲಿಷ್ಠ ವಾಯುಪಡೆಯನ್ನು ಹೊಂದಿರುವ ರಾಷ್ಟ್ರು ಎಂದು ಪರಿಗಣಿಸಲಾಗಿದೆ. ಅಮೆರಿಕದ ರಕ್ಷಣಾ ಬಜೆಟ್ ಇಡೀ ಪ್ರಪಂಚದ ಒಟ್ಟು ಮಿಲಿಟರಿ ವೆಚ್ಚದ ಸರಿಸುಮಾರು ಶೇ 40 ರಷ್ಟಿದೆ. ಇದರಿಂದಾಗಿ ಅದರ ಮಿಲಿಟರಿ ಬಲವು ನಿರಂತರವಾಗಿ ಹೆಚ್ಚುತ್ತಿದೆ.
(3 / 12)
2. ರಷ್ಯಾಎರಡನೇ ಸ್ಥಾನದಲ್ಲಿ ರಷ್ಯಾ ಇದ್ದು, ಒಟ್ಟು 4,292 ಮಿಲಿಟರಿ ವಿಮಾನಗಳನ್ನು ಹೊಂದಿದೆ. ಈ ಸಂಖ್ಯೆಯು ಅಮೆರಿಕಕ್ಕಿಂತ ಕೇವಲ ಮೂರನೇ ಒಂದು ಭಾಗದಷ್ಟಿದ್ದರೂ, ರಷ್ಯಾ ಇನ್ನೂ ನಿರಂತರವಾಗಿ ತನ್ನ ವಾಯುಪಡೆಯನ್ನು ಬಲಗೊಳಿಸುತ್ತಿದೆ.
(4 / 12)
3. ಚೀನಾಮೂರನೇ ಸ್ಥಾನದಲ್ಲಿ ಚೀನಾ ಇದ್ದು, ಇದು 3,309 ಮಿಲಿಟರಿ ವಿಮಾನಗಳನ್ನು ಹೊಂದಿದೆ. ಚೀನಾ ತನ್ನ ವಾಯುಪಡೆಯನ್ನು ಬಲಪಡಿಸಲು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ.
(5 / 12)
4. ನಾಲ್ಕನೇ ಸ್ಥಾನದಲ್ಲಿ ಭಾರತಭಾರತವು ವಿಶ್ವದ ನಾಲ್ಕನೇ ಅತ್ಯಂತ ಶಕ್ತಿಶಾಲಿ ವಾಯುಪಡೆಯಾಗಿ ಹೊರಹೊಮ್ಮಿದೆ. 2,229 ಮಿಲಿಟರಿ ವಿಮಾನಗಳೊಂದಿಗೆ, ಭಾರತೀಯ ವಾಯುಪಡೆ (IAF) ದಕ್ಷಿಣ ಏಷ್ಯಾದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಪ್ರಮುಖ ಶಕ್ತಿಯಾಗಿದೆ. ಭಾರತವು ರಫೇಲ್, ತೇಜಸ್ ಮತ್ತು ಸುಖೋಯ್‌ನಂತಹ ಆಧುನಿಕ ವಿಮಾನಗಳನ್ನು ಸೇರಿಸಿಕೊಳ್ಳುವ ಮೂಲಕ ತನ್ನ ವಾಯುಪಡೆಯನ್ನು ನಿರಂತರವಾಗಿ ಬಲಪಡಿಸುತ್ತಿದೆ.
(6 / 12)
5. ದಕ್ಷಿಣ ಕೊರಿಯಾದಕ್ಷಿಣ ಕೊರಿಯಾ ಕೂಡ ಟಾಪ್ 10 ಪಟ್ಟಿಯಲ್ಲಿದೆ. ಈ ದೇಶವು 1,592 ಯುದ್ಧ ವಿಮಾನಗಳನ್ನು ಹೊಂದಿದ್ದು, 5ನೇ ಸ್ಥಾನದಲ್ಲಿದೆ.
(8 / 12)
7. ಪಾಕಿಸ್ತಾನಭಾರತದ ನೆರೆಯ ರಾಷ್ಟ್ರವಾದ ಪಾಕಿಸ್ತಾನವೂ ಕೂಡ ಟಾಪ್ 10ರಲ್ಲಿದೆ. ಪಾಕಿಸ್ತಾನ ವಾಯುಪಡೆಯು 1,399 ವಿಮಾನಗಳನ್ನು ಹೊಂದಿದ್ದು, 7ನೇ ಸ್ಥಾನದಲ್ಲಿದೆ.
(11 / 12)
10. ಫ್ರಾನ್ಸ್ಫ್ರಾನ್ಸ್ ರಫೇಲ್‌ನಂತಹ ಶಕ್ತಿಶಾಲಿ ವಿಮಾನಗಳನ್ನು ಇಡೀ ಜಗತ್ತಿಗೆ ಮಾರಾಟ ಮಾಡುತ್ತದೆ. ಆದಾಗ್ಯೂ, ಫ್ರಾನ್ಸ್ ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಫ್ರಾನ್ಸ್ 976 ವಿಮಾನಗಳನ್ನು ಹೊಂದಿದೆ.
ಇತರ ಗ್ಯಾಲರಿಗಳು