ಚಾರ್ ಧಾಮ್ ಯಾತ್ರೆ ಆರಂಭ: ಗಂಗೋತ್ರಿ, ಯಮುನೋತ್ರಿಯಲ್ಲಿ ಜಮಾಯಿಸಿದ ಭಕ್ತರು; ಪೋಟೊಸ್ ನೋಡಿ
ಅಕ್ಷಯ ತೃತೀಯ ದಿನವಾದ ಏಪ್ರಿಲ್ 30 ರ ಬುಧವಾರ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ತೆರೆಯಲಾಗಿದೆ. ಭಕ್ತರ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.
(1 / 8)
ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಬಾಗಿಲುಗಳನ್ನು ತೆರೆಯಲಾಗಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಏಪ್ರಿಲ್ 30ರ ಬುಧವಾರ ಪವಿತ್ರ ಗಂಗೋತ್ರಿ ಧಾಮದಲ್ಲಿ ಪ್ರಾರ್ಥನೆ ಸಲ್ಲಿಸಿದರು,
(X/@pushkardhami)(2 / 8)
ವರದಿಗಳ ಪ್ರಕಾರ, ವಾರ್ಷಿಕ ತೀರ್ಥಯಾತ್ರೆ ಪ್ರಾರಂಭವಾಗಿರುವುದರಿಂದ 2025 ರ ಚಾರ್ ಧಾಮ್ ಯಾತ್ರೆಗೆ ಎಲ್ಲಾ ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ ಎಂದು ಗರ್ವಾಲ್ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.
(PTI)(3 / 8)
ಚಾರ್ ಧಾಮ್ ಯಾತ್ರೆಯು ಭಾರತದ ಅತ್ಯಂತ ಪ್ರಮುಖ ಯಾತ್ರಾ ಸ್ಥಳವಾಗಿದೆ. ಯಾತ್ರೆಯು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದಾಗಿದೆ.
(PTI)(4 / 8)
ಅಕ್ಷಯ ತೃತೀಯದ ಸಂದರ್ಭದಲ್ಲಿ ಉತ್ತರಕಾಶಿಯ ಯಮುನೋತ್ರಿ ದೇವಾಲಯದ ಬಾಗಿಲುಗಳನ್ನು ಬುಧವಾರ (ಏಪ್ರಿಲ್ 30) ಭಕ್ತರಿಗೆ ತೆರೆಯುವುದರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಯಮುನೋತ್ರಿಯ ದೇವಾಲಯವನ್ನೂ ತೆರೆಯಲಾಗಿದೆ.
(ANI)(5 / 8)
ಬದರೀನಾಥ್-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಮುಂಬರುವ ಬದರೀನಾಥ-ಕೇದಾರನಾಥ ಧಾಮ್ ಯಾತ್ರೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಕೇದಾರನಾಥ ಧಾಮದ ಬಾಗಿಲುಗಳನ್ನು ಮೇ 2 ರಂದು ಮತ್ತು ಬದರೀನಾಥ ಧಾಮದ ಬಾಗಿಲುಗಳನ್ನು ಮೇ 4 ರಂದು ತೆರೆಯಲಾಗುತ್ತದೆ.
(X/@pushkardhami)(6 / 8)
ಉತ್ತರಕಾಶಿಯಲ್ಲಿ ಅಕ್ಷಯ ತೃತೀಯದ ಸಂದರ್ಭದಲ್ಲಿ ಗಂಗೋತ್ರಿ ಧಾಮ್ ದೇವಾಲಯದ ಬಾಗಿಲು ತೆರೆಯುವ ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಗಂಗೋತ್ರಿ ಧಾಮದಲ್ಲಿ ಜಮಾಯಿಸಿದ್ದರು.
(X/@pushkardhami)(7 / 8)
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಕ್ಷಯ ತೃತೀಯ ಸಂದರ್ಭದಲ್ಲಿ ಗಂಗೋತ್ರಿ ಧಾಮ್ ದೇವಾಲಯದ ಬಾಗಿಲು ತೆರೆಯುವ ಸಮಾರಂಭದಲ್ಲಿ ಉತ್ತರ ಕಾಶಿಯ ಗಂಗೋತ್ರಿ ಧಾಮದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
(X/@pushkardhami)ಇತರ ಗ್ಯಾಲರಿಗಳು