ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಸಂಭ್ರಮ; ಕಾರಿಂಜ, ನರಹರಿ ಪರ್ವತಗಳಲ್ಲಿ ಭಕ್ತರ ತೀರ್ಥಸ್ನಾನ, ಫೋಟೋಸ್
- ಆಟಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಸಿದ್ಧ ಪರ್ವತ ಪುಣ್ಯ ಕ್ಷೇತ್ರಗಳಾದ ಕಾರಿಂಜ ಕಾರಿಂಜೇಶ್ವರ ಸನ್ನಿಧಿ ಹಾಗೂ ನರಹರಿ ಸದಾಶಿವ ರುದ್ರ ಸನ್ನಿಧಿಯಲ್ಲಿ ಇಂದು (ಆಗಸ್ಟ್ 4, ಭಾನುವಾರ) ನಸುಕಿನ ಜಾವ ಭಕ್ತರ ಪುಣ್ಯಸ್ನಾನ ಮಾಡಿ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದಿದ್ದಾರೆ. ಅದರ ಫೋಟೋಸ್ ಇಲ್ಲಿದೆ.

(1 / 6)
ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಸಂಭ್ರಮಾಚರಣೆ ಮನೆ ಮಾಡಿತ್ತು. ವಿಶೇಷವಾಗಿ ಕಾರಿಂಜ ಮತ್ತು ನರಹರಿ ಪರ್ವತಗಳಲ್ಲಿ ನೂರಾರು ಭಕ್ತರು ಮುಂಜಾನೆ ತೀರ್ಥಸ್ನಾನ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
(2 / 6)
ವೈದಿಕರು ವೇದಮಂತ್ರಗಳ ಪಠಣದ ನಡುವೆಯೇ ಭಕ್ತರು, ತೀರ್ಥಸ್ನಾನ ಮಾಡಿ ಪುನೀತರಾದರು. ಆಟಿ ತಿಂಗಳು ಎಂದೇ ಹೇಳಲಾಗುವ ಈ ತಿಂಗಳಲ್ಲಿ ಅಮವಾಸ್ಯೆಯಂದು ತೀರ್ಥಸ್ನಾನ ಮಾಡಿದರೆ, ಪುಣ್ಯಪ್ರಾಪ್ತಿ, ಸಕಲ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
(3 / 6)
ಆಟಿಯ ಅಮಾವಾಸ್ಯೆ ಅಥವಾ ಆಟಿ ಅಮಾಸೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡಿರುವ ತುಳುನಾಡಿನ ಆಚರಣೆಯ ಆಷಾಢ ಅಮಾವಾಸ್ಯೆಯಾಗಿದೆ.
(4 / 6)
ಆಟಿ ತಿಂಗಳಿನ ಅಮಾವಾಸ್ಯೆಯ ದಿನ ಕರಾವಳಿಯ ನಾನಾ ಶಿವನ ಸನ್ನಿಧಿಗಳಲ್ಲಿರುವ ಪುಷ್ಕರಿಣಿಗಳಲ್ಲಿ ತೀರ್ಥ ಸ್ನಾನದ ಮಾಡಿ ಭಕ್ತರು ಸಂಭ್ರಮಿಸುತ್ತಾರೆ.
(5 / 6)
ಐತಿಹಾಸಿಕ ಹಿನ್ನೆಲೆ ಇರುವ ಮಹತೋಭಾರ ಕಾರಿಂಜ ಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ನಡೆಯುವ ತೀರ್ಥಸ್ನಾನಕ್ಕೆ ವಿಶೇಷ ಮನ್ನಣೆ ಇದೆ.
ಇತರ ಗ್ಯಾಲರಿಗಳು