ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ವೈಭವದ ಮಹಾರಥೋತ್ಸವ ಸಂಪನ್ನ; ಫೋಟೊಸ್ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ವೈಭವದ ಮಹಾರಥೋತ್ಸವ ಸಂಪನ್ನ; ಫೋಟೊಸ್ ನೋಡಿ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ವೈಭವದ ಮಹಾರಥೋತ್ಸವ ಸಂಪನ್ನ; ಫೋಟೊಸ್ ನೋಡಿ

  • ದಕ್ಷಿಣ ಕನ್ನಡದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ವೈಭವದ ಮಹಾರಥೋತ್ಸವ ಸಂಪನ್ನಗೊಂಡಿದೆ. 1 ತಿಂಗಳ ವಾರ್ಷಿಕ ಜಾತ್ರೆ ಸಾವಿರಾರು ಭಕ್ತರ ಸಾಕ್ಷಿಯೊಂದಿಗೆ ಮುಕ್ತಾಯವಾಗಿದೆ. ಫೋಟೊಸ್ ಇಲ್ಲಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)

ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಸುದೀರ್ಘ ಒಂದು ತಿಂಗಳ ಕಾಲದ ವಾರ್ಷಿಕ ಜಾತ್ರೆಯ ನಿಮಿತ್ತ ವೈಭವದ ಮಹಾರಥೋತ್ಸವ ಗುರುವಾರ (ಏಪ್ರಿಲ್ 10) ಸಂಜೆ ನಡೆಯಿತು. ಭಕ್ತರ ಜಯಘೋಷದ ನಡುವೆ ರಥೋತ್ಸವ ಸಂಪನ್ನಗೊಂಡಿತು.
icon

(1 / 10)

ಏ.9ರಂದು ಕಡೇ ಚೆಂಡಿನ ಉತ್ಸವದ ಬಳಿಕ ಗುರುವಾರ ರಥೋತ್ಸವ ನಡೆಯುತ್ತದೆ. ಈ ಸಂದರ್ಭ ಸಿಡಿಮದ್ದಿನ ಪ್ರದರ್ಶನವೂ ನಡೆಯಿತು. ವಿದ್ಯುತ್ ದೀಪಾಲಂಕಾರಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು.
icon

(2 / 10)

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಮಹಾರಥೋತ್ಸವ ವೀಕ್ಷಿಸಲು ಏಪ್ರಿಲ್ 10ರ ಗುರುವಾರ ಸಂಜೆ ಸಹಸ್ರಾರು ಮಂದಿ ಸೇರಿದ್ದರು.
icon

(3 / 10)

ರಥೋತ್ಸವದ ದಿನ ಬೆಳಗ್ಗೆ ದೇವರಲ್ಲಿ ವಿಧಿವತ್ತಾಗಿ ಪ್ರಾರ್ಥನೆ ನೆರವೇರಿಸಿ ಮಹಾಪೂಜೆಯ ಬಳಿಕ ದೇವರು ರಥಾರೋಹಣ ಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು.
icon

(4 / 10)

ವಿಶೇಷ ಪೂಜೆ ನಡೆದು ಸಂಜೆ ರಥದಲ್ಲಿ ದೇವರಿಗೆ ಪೂಜೆಯ ಬಳಿಕ ಗುತ್ತಿನವರು ಹಾಗೂ ಭಕ್ತರು ತೆಂಗಿನ ಕಾಯಿ ಒಡೆದು ರಥ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಚೆಂಡಿನ ಗದ್ದೆಗೆ ಎಳೆಯಲಾಯಿತು. ಬಳಿಕ ಸುಡುಮದ್ದು ಪ್ರದರ್ಶನ ಆರಂಭಗೊಂಡು ಸುದೀರ್ಘ ಸಮಯದವರೆಗೆ ಮುಂದುವರಿತು.
icon

(5 / 10)

ಸಹಸ್ರಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡು, ಅಲ್ಲೇ ಇದ್ದ ಸಂತೆಮಾರುಕಟ್ಟೆಯಲ್ಲಿ ಖರೀದಿ ವಹಿವಾಟಿನಲ್ಲಿ ತೊಡಗಿದ್ದು ಕಂಡುಬಂತು.
icon

(6 / 10)

ರಥ ಸಾಗುವ ಮಾರ್ಗದಲ್ಲಿ ಭಕ್ತರು ಹಾಕಿದ ವಿವಿಧ ಬಣ್ಣಗಳ ರಂಗೋಲಿ ಚಿತ್ರಗಳು ಗಮನ ಸೆಳೆಯಿತು.
icon

(7 / 10)

ರಥ ಸಾಗುವ ಮಾರ್ಗದಲ್ಲಿ ಭಕ್ತರು ಹಾಕಿದ ವಿವಿಧ ಬಣ್ಣಗಳ ರಂಗೋಲಿ ಚಿತ್ರಗಳು ಗಮನ ಸೆಳೆಯಿತು.

ಪೊಳಲಿ ರಾಜರಾಜೇಶ್ವರಿ ಮಹಾರಥೋತ್ಸವಕ್ಕೆ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು. ತೇರು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದಿದ್ದಾರೆ.
icon

(8 / 10)

ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದಜಿ, ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು, ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
icon

(9 / 10)

ವಿಶೇಷ ಎಂದರೆ ಪೊಳಲಿ ರಾಜರಾಜೇಶ್ವರಿ ಜಾತ್ರೆಯಲ್ಲಿ ಪ್ರಸಾದವಾಗಿ ಕಲ್ಲಂಗಡಿಯನ್ನು ನೀಡಲಾಗುತ್ತದೆ. ಹೀಗಾಗಿ ಇಲ್ಲಿ ಕಲ್ಲಂಗಡಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. ಭಕ್ತರು ಅಂಗಡಿಯಿಂದ ಕಲ್ಲಂಗಡಿ ಖರೀದಿಸಿ ಮನೆಯಲ್ಲಿ ಎಲ್ಲರಿಗೂ ಹಂಚುತ್ತಾರೆ. ಈ ಭಾಗದಲ್ಲಿ ಬೆಳೆದ ಕಲ್ಲಂಗಡಿಯನ್ನು ಮಾತ್ರ ಇಲ್ಲಿ ಮಾರಾಟ ಮಾಡಲಾಗುತ್ತದೆ.
icon

(10 / 10)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು