ಕೊಪ್ಪಳ ಗವಿಸಿದ್ಧೇಶ್ವರ ಮಠದ ಜಾತ್ರೆ ಸಂಪನ್ನ; ಮಹಾರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗಿ, ಇಲ್ಲಿವೆ ಫೋಟೊಸ್
- ಕೊಪ್ಪಳದ ಗವಿಸಿದ್ದೇಶ್ವರ ಮಠದ ಮಹಾರಥೋತ್ಸವ ಸಾವಿರಾರು ಭಕ್ತರ ಸಾಕ್ಷಿಯೊಂದಿಗೆ ಸಂಪನ್ನಗೊಂಡಿದೆ. ಜನವರಿ 15ರ ಬುಧವಾರ ನಡೆದ ಮಹಾರಥೋತ್ಸವ ಕುಂಭಮೇಳವನ್ನು ನೆನಪಿಸುವಂತೆ ಮಾಡಿದೆ. ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಜ್ಜನ ಜಾತ್ರೆಯ ಫೋಟೊಸ್ ಇಲ್ಲಿವೆ.
- ಕೊಪ್ಪಳದ ಗವಿಸಿದ್ದೇಶ್ವರ ಮಠದ ಮಹಾರಥೋತ್ಸವ ಸಾವಿರಾರು ಭಕ್ತರ ಸಾಕ್ಷಿಯೊಂದಿಗೆ ಸಂಪನ್ನಗೊಂಡಿದೆ. ಜನವರಿ 15ರ ಬುಧವಾರ ನಡೆದ ಮಹಾರಥೋತ್ಸವ ಕುಂಭಮೇಳವನ್ನು ನೆನಪಿಸುವಂತೆ ಮಾಡಿದೆ. ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಜ್ಜನ ಜಾತ್ರೆಯ ಫೋಟೊಸ್ ಇಲ್ಲಿವೆ.
(1 / 7)
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದರೆ ಇತ್ತ ದಕ್ಷಿಣ ಭಾರತದ ಕುಂಭಮೇಳ ಅಂತಲೇ ಖ್ಯಾತಿ ಪಡೆದಿರುವ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಯ ಮಹಾರಥೋತ್ಸವ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಮಹಾರಥೋತ್ಸವಕ್ಕೆ ಭಕ್ತ ಸಾಗರ ಹರಿದು ಬಂದಿತ್ತು.
(2 / 7)
ಗವಿಮಠದ ಮುಂಭಾಗದ ಆವರಣದಿಂದ ಪಾದಗಟ್ಟೆ ತನಕ ತೇರನ್ನು ಎಳೆಯಲಾಗಿಯಿತು. ತೇರು ಸಾಗುತ್ತಿದ್ದಂತೆ ಹರ್ಷೋದ್ಗಾರಗಳನ್ನು ಕೂಗಿದ ಭಕ್ತರು, ಭಕ್ತಿ ಭಾವನದಲ್ಲಿ ಮಿಂದೆದ್ದರು.
(3 / 7)
ಗವಿಸಿದ್ಧೇಶ್ವರ ಮಠದ ಆವರಣದಲ್ಲಿ ಮಾತ್ರವಲ್ಲದೆ, ಹೊರಗಡೆ ಕಾರು ಪಾರ್ಕಿಂಗ್ ಸ್ಥಳ ಸೇರಿದಂತೆ ತೇರು ಸಾಗಿದ ಸುತ್ತಲಿನ ಪ್ರದೇಶದಲ್ಲಿ ಭಕ್ತರು ಜಮಾವಣೆಗೊಂಡಿದ್ದರು.
(4 / 7)
ಜನವರಿ 15ರ ಬುಧವಾರ ನಡೆದ ಮಹಾರಥೋತ್ಸವದ ದಿನದಂದು ಬೆಳಗ್ಗೆಯಿಂದಲೇ ಸೇರಿದ್ದ ಭಕ್ತರು ಕರ್ತೃ ಗದ್ದುಗೆಯ ದರ್ಶನ ಪಡೆದರು. ವಿವಿಧ ಬಣ್ಣಗಳಿಂದ ಗದ್ದುಗೆಯನ್ನು ಅಲಂಕಾರ ಮಾಡಲಾಗಿತ್ತು. ಭಕ್ತರಿಗಾಗಿ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು.
(6 / 7)
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಹಿಂದೂಸ್ತಾನಿ ಗಾಯಕ, ಧಾರವಾಡದ ಪಂಡಿತ್ ಎಂ. ವೆಂಕಟೇಶ ಕುಮಾರ ಅವರು ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ಆಡಳಿತ ಹಾಗೂ ವಿಪಕ್ಷಗಳು ನಾಯಕರು ಭಾಗವಹಿಸಿದ್ದರು.
(7 / 7)
ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಕೆಲವರು ಪಾದಯಾತ್ರೆಯ ಮೂಲಕ ಮಹಾರಥೋತ್ಸವಕ್ಕೆ ಆಗಮಿಸಿದ್ದರು. ಭಕ್ತರಿಗಾಗಿ ಅನ್ನ, ಸಾಂಬರ್, ಪಲ್ಯ, ಸಾವಯವ ಬೆಲ್ಲದ ಜಿಲೇಬಿ, ಮಾದಲಿ, ಖರ್ಜಿಕಾಯಿ ಸೇರಿದಂತೆ ಸಿಹಿ ತಿನಿಸುಗಳನ್ನು ತಯಾರಿಸಲಾಗಿತ್ತು. ಜೋಳದ ರೊಟ್ಟಿ ವಿಶೇಷ ಎನಿಸಿತು. ಅಚ್ಚುಕಟ್ಟಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಇತರ ಗ್ಯಾಲರಿಗಳು