ಮಹಾ ಕುಂಭ ಮೇಳಕ್ಕೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ; ಸಂಗಮದಲ್ಲಿ ಪುಣ್ಯಸ್ನಾನ, ಫೋಟೊಗಳು ಇಲ್ಲಿವೆ
Maha Kumbh Mela: ಮಹಾ ಕುಂಭ ಮೇಳದಲ್ಲಿ ಭಾಗವಹಿಸಲು ಮತ್ತು ಪವಿತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯ ಭಕ್ತರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿದ್ದಾರೆ. ಮಹಾ ಕುಂಭಮೇಳ ಪ್ರಾರಂಭವಾದ 11 ದಿನಗಳಲ್ಲಿ 9.73 ಕೋಟಿ ಭಕ್ತರು, ಕಲ್ಪವಾಸಿಗಳು ಹಾಗೂ ಸಾಧುಗಳು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
(1 / 9)
ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಲೇ ಇದೆ. ತ್ರಿವೇಣಿ ಸಂಗಮದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಭಕ್ತರೊಬ್ಬರು ನಮಸ್ಕರಿಸುತ್ತಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.
(ANI)(2 / 9)
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 2025ರ ಜನವರಿ 13 ರಂದು ಪ್ರಾರಂಭವಾಗಿರುವ ಮಹಾ ಕುಂಭ ಮೇಳದ ಭಾಗವಾಗಿ ತ್ರಿವೇಣಿ ಸಂಗಮದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡುತ್ತಿದ್ದಾರೆ.
(ANI)(3 / 9)
ಮಹಾಕುಂಭ 2025 ರ ಸಂದರ್ಭದಲ್ಲಿ, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ಭಕ್ತ
(AP)(4 / 9)
ಪ್ರಯಾಗ್‌ರಾಜ್‌ನ ಮಹಾಕುಂಭಮೇಳಕ್ಕೆ ಹೆಚ್ಚಿನ ಸಂಖ್ಯೆಯ ನಾಗಾ ಸಾಧುಗಳು ಮತ್ತು ಇತರ ಭಕ್ತರು ಆಗಮಿಸಿದ್ದಾರೆ. "ಪೈಲ್ವಾನ್ ಬಾಬಾ" ನಂತಹ ಅಧ್ಯಾತ್ಮಿಕ ನಾಯಕರು ತಮ್ಮ ಅಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಯುವಕರನ್ನು ಪ್ರೇರೇಪಿಸುತ್ತಿದ್ದಾರೆ.
(PTI)(5 / 9)
ಪ್ರಯಾಗ್‌ರಾಜ್‌ನ ಮಹಾಕುಂಭಮೇಳದ ಸಂದರ್ಭದಲ್ಲಿ ಕವಿ ಕುಮಾರ್ ವಿಶ್ವಾಸ್ ಅವರು ಉತ್ತರ ಪ್ರದೇಶದ ಸಚಿವ ನಂದ ಗೋಪಾಲ್ ಗುಪ್ತಾ ಅವರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು
(Nitin Sharma/Hindustan Times)(6 / 9)
ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ನದಿಗಳ ಸಂಗಮದಲ್ಲಿ 10 ಕೋಟಿಗೂ ಹೆಚ್ಚು ಯಾತ್ರಾರ್ಥಿಗಳು ಕುಂಭಮೇಳದ ಭಾಗವಾಗಿ ಸ್ನಾನ ಮಾಡಿದ್ದಾರೆ.
(PTI)(7 / 9)
ಮಹಾಕುಂಭ ಮೇಳದ ಸಂದರ್ಭದಲ್ಲಿ ಪ್ರಯಾಗ್‌ರಾಜ್‌ನ ಸಂಗಮ್ ನಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತರು.
(PTI)ಇತರ ಗ್ಯಾಲರಿಗಳು