Bhishma Ashtami: ಭೀಷ್ಮಾಷ್ಟಮಿ ಆಚರಣೆಯ ಮಹತ್ವವೇನು, ಈ ದಿನ ಉಪವಾಸ ವ್ರತ ಮಾಡುವುದರಿಂದ ಸಿಗುವ ಫಲಾಫಲಗಳ ವಿವರ ಇಲ್ಲಿದೆ
- Bhismastami 2024: ಮಾಘ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ಭೀಷ್ಮಾಷ್ಟಮಿ ಕೂಡ ಒಂದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನವನ್ನು ಭೀಷ್ಮ ಪಿತಾಮಹ ತರ್ಪಣ ದಿನ ಎಂದೂ ಕರೆಯುತ್ತಾರೆ. ಇಂದು (ಫೆ.16) ಭೀಷ್ಮಾಷ್ಟಮಿ ಇದೆ. ಈ ದಿನದ ಆಚರಣೆಯ ಮಹತ್ವ, ಪಾಲಿಸಬೇಕಾದ ಪೂಜಾ ಕ್ರಮಗಳ ವಿವರ ತಿಳಿಯಿರಿ.

(1 / 5)
ಹಿಂದೂ ಧರ್ಮದಲ್ಲಿ ಭೀಷ್ಮ ಅಷ್ಟಮಿಗೆ ವಿಶೇಷ ಮಹತ್ವವಿದೆ. ಈ ದಿನವನ್ನು ಹಬ್ಬವಾಗಿ ಆಚರಿಸಲಾಗುತ್ತದೆ. ಮಾಘ ಮಾಸದ ಮೊದಲ ಹದಿನೈದು ದಿನಗಳ ಎಂಟನೆಯ ದಿನವನ್ನು ಭೀಷ್ಮಾಷ್ಟಮಿ ಎಂದು ಕರೆಯಲಾಗುತ್ತದೆ.
(2 / 5)
ಮಾಘ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ಭೀಷ್ಮನು ತನ್ನ ದೇಹವನ್ನು ತ್ಯಜಿಸಿದನು. ಈ ದಿನ ಭೀಷ್ಮ ಪಿತಾಮಹನಿಗೆ ಮೋಕ್ಷ ಸಿಕ್ಕಿತು ಎಂದು ವೇದ ವಿದ್ವಾಂಸರು ಹೇಳುತ್ತಾರೆ. ಆದ್ದರಿಂದಲೇ ಇಂದು ಭೀಷ್ಮ ಪಿತಾಮಹರ ಸ್ಮರಣಾರ್ಥ 'ಭೀಷ್ಮಾಷ್ಟಮಿ'ಯನ್ನು ಆಚರಿಸಲಾಗುತ್ತದೆ.
(3 / 5)
ಹಿಂದೂ ಕ್ಯಾಲೆಂಡರ್ ಪ್ರಕಾರ, ಇಂದು ಭೀಷ್ಮ ಅಷ್ಟಮಿ ಆಚರಿಸಲಾಗುತ್ತದೆ. ಅಷ್ಟಮಿ ತಿಥಿಯು ಫೆ 16ರ ಬೆಳಿಗ್ಗೆ 8:54 ಕ್ಕೆ ಪ್ರಾರಂಭವಾಗಿ, ಫೆ 17ರಂದು ಬೆಳಿಗ್ಗೆ 8:15 ಕ್ಕೆ ಕೊನೆಗೊಳ್ಳುತ್ತದೆ.
(4 / 5)
ಭೀಷ್ಮಾಷ್ಟಮಿ ಹಬ್ಬದ ಮಹತ್ವ: ಭೀಷ್ಮ ಅಷ್ಟಮಿ ತಿಥಿಯಂದು ಉಪವಾಸ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಐತಿಹ್ಯವಿದೆ. ಆ ಕಾರಣಕ್ಕೆ ಈ ದಿನ ಮಹಿಳೆಯರು ಉಪವಾಸ ಮಾಡುತ್ತಾರೆ. ಇದರಿಂದ ಸಂತಾನ ಭಾಗ್ಯ ಪ್ರಾಪ್ತಿಯಾಗಿ, ಜನಿಸಿದ ಮಗು ಸದಾ ಕಾಲ ಆರೋಗ್ಯದಿಂದಿರುತ್ತದೆ ಎಂಬ ನಂಬಿಕೆ ಇದೆ.
ಇತರ ಗ್ಯಾಲರಿಗಳು