Mahashivratri 2024: ದಕ್ಷಿಣ ಭಾರತದ ಪ್ರಸಿದ್ಧ ಶಿವಾಲಯಗಳಿವು; ಮಹಾಶಿವರಾತ್ರಿಗೂ ಮುನ್ನ ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ-spiritual news hindu festivals visit unique lord shiva temples located in south india as part of maha shivratri 2024 arc ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahashivratri 2024: ದಕ್ಷಿಣ ಭಾರತದ ಪ್ರಸಿದ್ಧ ಶಿವಾಲಯಗಳಿವು; ಮಹಾಶಿವರಾತ್ರಿಗೂ ಮುನ್ನ ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ

Mahashivratri 2024: ದಕ್ಷಿಣ ಭಾರತದ ಪ್ರಸಿದ್ಧ ಶಿವಾಲಯಗಳಿವು; ಮಹಾಶಿವರಾತ್ರಿಗೂ ಮುನ್ನ ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ

  • ಭಾರತದಲ್ಲಿ ಹಲವು ಶಿವಾಲಯಗಳಿವೆ. ಅವುಗಳಲ್ಲಿ ಜ್ಯೋತಿರ್ಲಿಂಗಗಳು, ಶಕ್ತಿಪೀಠಗಳೂ ಸೇರಿವೆ. ಅಲ್ಲೆಲ್ಲಾ ಶಿವನನ್ನು ವಿವಿಧ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಶಿವ ದೇಗುಲಗಳಲ್ಲಿ ಮಹಾ ಶಿವರಾತ್ರಿ ಆಚರಣೆ ಬಹಳ ವಿಶೇಷ. ಈ ವರ್ಷ ಮಹಾಶಿವರಾತ್ರಿಗೂ ಮುನ್ನ ದಕ್ಷಿಣ ಭಾರತದ ಪ್ರಸಿದ್ಧ ಶಿವ ದೇವಾಲಯಗಳ ಬಗ್ಗೆ ತಿಳಿಯಿರಿ.

ಹಿಂದೂ ಧರ್ಮದಲ್ಲಿ ಹಲವು ವಿಶೇಷ ಆಚರಣೆಗಳಿವೆ. ಪ್ರತಿಯೊಂದು ದೇವರನ್ನೂ ಪ್ರತ್ಯೇಕ ಹಬ್ಬ, ಆಚರಣೆಯ ಮೂಲಕ ಪೂಜಿಸಲಾಗುತ್ತದೆ. ಮಹಾಶಿವರಾತ್ರಿ ಶಿವನಿಗೆ ಅರ್ಪಿತವಾದ ಹಬ್ಬ. ಈ ದಿನ ಶಿವನನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಅಂದು ಶಿವಭಕ್ತರು ಜಾಗರಣೆ, ಉಪವಾಸ ವೃತ ಕೈಗೊಳ್ಳುತ್ತಾರೆ. ತ್ರಿಮೂರ್ತಿಗಳಲ್ಲಿ ಶಿವನನ್ನು ಲಯಕಾರಕ ಎಂದು ಕರೆದರೂ ಬ್ರಹ್ಮಾಂಡವನ್ನು ರಕ್ಷಿಸುವವನೂ ಅವನೇ ಎಂಬ ನಂಬಿಕೆಯಿದೆ. ಮಹಾ ಶಿವರಾತ್ರಿಯಂದು ಶಿವನ್ನು ಪೂಜಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ಎನ್ನಲಾಗುತ್ತದೆ. ಈ ದಿನ ಹಲವಾರು ಶಿವ ಭಕ್ತರು ಉಪವಾಸ ಆಚರಿಸುವುದರ ಜೊತೆಗೆ ಶಿವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಶಿವನ ಪ್ರಸಿದ್ಧ ದೇವಸ್ಥಾನಗಳಲ್ಲಿ ಅಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದ ಪ್ರತಿ ರಾಜ್ಯಗಳಲ್ಲೂ ಶಿವನ ದೇವಸ್ಥಾನಗಳನ್ನು ನೋಡಬಹುದಾಗಿದೆ. ಅವುಗಳಲ್ಲಿ ಕೆಲವು ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅಲ್ಲೆಲ್ಲಾ ಶಿವನು ತನ್ನ ವಿವಿಧ ರೂಪಗಳಲ್ಲಿ ನೆಲೆನಿಂತು ತನ್ನ ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ. ಶಿವರಾತ್ರಿಯ ಶುಭ ಸಂದರ್ಭದಲ್ಲಿ ನೀವೂ ಈ ದೇವಾಲಯಗಳ ಬಗ್ಗೆ ತಿಳಿಯಿರಿ.
icon

(1 / 9)

ಮುರ್ಡೇಶ್ವರ, ಕರ್ನಾಟಕ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಶಿವನ ಈ ದೇವಾಲಯವು ಅರಬ್ಬೀ ಸಮುದ್ರದ ದಂಡೆಯ ಮೇಲಿದೆ. ಮರ್ಡೇಶ್ವರದಲ್ಲಿರುವ ಶಿವನ ಮೂರ್ತಿಯು ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆಯ ನಂತರದ ಅತಿ ಎತ್ತರದ ಪ್ರತಿಮೆ ಎಂದು ಹೆಸರುವಾಸಿಯಾಗಿದೆ. ಇದು ಸರಿಸುಮಾರು 123 ಅಡಿಗಳಷ್ಟಿದೆ. ಈ ದೇವಸ್ಥಾನವು 20 ಅಂತಸ್ತಿನ ರಾಜಗೋಪುರವನ್ನು ಹೊಂದಿದೆ. ಈ ದೇವಸ್ಥಾನಕ್ಕೆ ರಾಮಾಯಣ ಕಾಲದ ನಂಟಿದೆ ಎಂಬುದು ವಿಶೇಷ. ಇದರ ಸುತ್ತಲಿನ ದೃಶ್ಯವು ರಮಣೀಯವಾಗಿದ್ದು ಶಿವ ಭಕ್ತರನ್ನು ಮತ್ತು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.  ಇಲ್ಲಿನ ಮತ್ತೊಂದು ವೈಶಿಷ್ಟ್ಯವೇನೆಂದರೆ ಈ ದೇವಸ್ಥಾನದ ರಾಜಗೋಪುರದಿಂದ ಬೃಹತ್‌ ಪ್ರತಿಮೆ ಅದ್ಭುತ ನೋಟವನ್ನು ಆನಂದಿಸಬಹುದಾಗಿದೆ. ಅದಕ್ಕಾಗಿ ಲಿಫ್ಟ್‌ನ ವ್ಯವಸ್ಥೆಯಿದೆ.
icon

(2 / 9)

ಕೋಟಿಲಿಂಗೇಶ್ವರ, ಕರ್ನಾಟಕ: ಕರ್ನಾಟಕದ ಮತ್ತೊಂದು ಪ್ರಸಿದ್ಧ ಶಿವನ ದೇವಸ್ಥಾನವೆಂದರೆ ಕೋಟಿಲಿಂಗೇಶ್ವರ ದೇವಸ್ಥಾನ. ಸುಮಾರು 1 ಕೋಟಿ ಶಿವಲಿಂಗವಿರುವ ಈ ಕ್ಷೇತ್ರವು ಶಿವನನ್ನು ಆರಾಧಿಸಿ ಕೃತಾರ್ಥರಾಗುವ ಸ್ಥಳ. ಇದು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿದೆ. ಇಲ್ಲಿ 33 ಮೀಟರ್ ಎತ್ತರ ಶಿವಲಿಂಗವಿರುವುದು ವಿಶೇಷವಾಗಿದೆ. ಶಿವನ ದೇವಸ್ಥಾನವೆಂದರೆ ನಂದಿ ಇರುವುದು ಸಾಮಾನ್ಯ. ಇಲ್ಲಿ 11 ಮೀಟರ್‌ ಎತ್ತರ ಸುಂದರ ನಂದಿಯನ್ನು ನೋಡಬಹುದಾಗಿದೆ. ಶಿವರಾತ್ರಿಯ ದಿನ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಶಿವನ ಪೂಜೆಯಲ್ಲಿ ಪಾಲ್ಗೊಂಡು, ಆಶೀರ್ವಾದ ಪಡೆದುಕೊಳ್ಳುತ್ತಾರೆ.
icon

(3 / 9)

ಕೋಟಿಲಿಂಗೇಶ್ವರ, ಕರ್ನಾಟಕ: ಕರ್ನಾಟಕದ ಮತ್ತೊಂದು ಪ್ರಸಿದ್ಧ ಶಿವನ ದೇವಸ್ಥಾನವೆಂದರೆ ಕೋಟಿಲಿಂಗೇಶ್ವರ ದೇವಸ್ಥಾನ. ಸುಮಾರು 1 ಕೋಟಿ ಶಿವಲಿಂಗವಿರುವ ಈ ಕ್ಷೇತ್ರವು ಶಿವನನ್ನು ಆರಾಧಿಸಿ ಕೃತಾರ್ಥರಾಗುವ ಸ್ಥಳ. ಇದು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿದೆ. ಇಲ್ಲಿ 33 ಮೀಟರ್ ಎತ್ತರ ಶಿವಲಿಂಗವಿರುವುದು ವಿಶೇಷವಾಗಿದೆ. ಶಿವನ ದೇವಸ್ಥಾನವೆಂದರೆ ನಂದಿ ಇರುವುದು ಸಾಮಾನ್ಯ. ಇಲ್ಲಿ 11 ಮೀಟರ್‌ ಎತ್ತರ ಸುಂದರ ನಂದಿಯನ್ನು ನೋಡಬಹುದಾಗಿದೆ. ಶಿವರಾತ್ರಿಯ ದಿನ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಶಿವನ ಪೂಜೆಯಲ್ಲಿ ಪಾಲ್ಗೊಂಡು, ಆಶೀರ್ವಾದ ಪಡೆದುಕೊಳ್ಳುತ್ತಾರೆ.(Holidify)

ಚಿದಂಬರಂ, ತಮಿಳುನಾಡು: ದಕ್ಷಿಣ ಭಾರತದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ತಮಿಳುನಾಡಿನ ಚದಂಬರಂ ದೇವಸ್ಥಾನದಲ್ಲಿ ಶಿವನು ನಟರಾಜನಾಗಿ ನೆಲೆಸಿದ್ದಾನೆ. ವಿಶಿಷ್ಟ ವಾಸ್ತುಶಿಲ್ಪ ಮತ್ತು ಗರ್ಭಗುಡಿಯಲ್ಲಿರುವ ಶಿವನ ನಟರಾಜನ ಮೂರ್ತಿಯಿಂದಾಗಿ ಇದು ಶಿವಭಕ್ತರಿಗೆ ವಿಶೇಷವಾದ ಸ್ಥಳವಾಗಿದೆ. ಶಿವನ ಈ ಮೂರ್ತಿಯು ಆಕಾಶ ಲಿಂಗವನ್ನು ಪ್ರತಿನಿಧಿಸುತ್ತದೆ. ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಇದನ್ನು ತಿಲ್ಲೈ ನಟರಾಜ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಸ್ಥಾನವನ್ನು ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ. ಚೋಳರ ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೀಡಿದ ಮಹತ್ವವನ್ನು ಚಿದಂಬರಂ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಇದರಲ್ಲಿ ಕನಕ ಸಭಾ ಅಥವಾ ಗೋಲ್ಡನ್‌ ಹಾಲ್‌ ಅನ್ನು ಕಾಣಬಹುದಾಗಿದೆ. ಸೂಕ್ಷ್ಮ ಕೆತ್ತನೆಗಳು ಮತ್ತು ಶ್ರೀಮಂತ ಶಿಲ್ಪಕಲೆಯಿಂದ ದೇವಸ್ಥಾನವು ಅಲಂಕರಿಸಲ್ಪಟ್ಟಿದೆ. ಆಧ್ಯಾತ್ಮಿಕ ಮಹತ್ವ ಮತ್ತು ಸಾಂಸ್ಕೃತಿಕ ಪರಂಪರೆಯಿಂದಾಗಿ ಇದು ಜನಪ್ರಿಯ ಪ್ರವಾಸಿ ತಾಣವಾಗಿದೆ.
icon

(4 / 9)

ರಾಮೇಶ್ವರಂ, ತಮಿಳುನಾಡು: ಹಿಂದೂಗಳ ಪವಿತ್ರ ಕ್ರೇತ್ರಗಳಲ್ಲಿ ತಮಿಳುನಾಡಿನ ರಾಮೇಶ್ವರಂ ಕೂಡಾ ಒಂದು. ರಮನಾಥಪುರಂ ಜಿಲ್ಲಿಯಲ್ಲಿರುವ ಶಿವನ ಈ ದೇವಸ್ಥಾನವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಉತ್ತರದಲ್ಲಿ ಕಾಶಿಗೆ ಎಷ್ಟು ಮಹತ್ವವಿದೆಯೋ ದಕ್ಷಿಣದಲ್ಲಿ ರಾಮೇಶ್ವರಂಗೆ ಅಷ್ಟೇ ಮಹತ್ವವಿದೆ. ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸುವ ಮೊದಲು ಶ್ರೀ ರಾಮನು ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಅದಕ್ಕೆ ಪೂಜೆ ಸಲ್ಲಿದನು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಈ ದೇವಸ್ಥಾನವನ್ನು ರಾಮೇಶ್ವರಂ ಎಂದು ಕರೆಯುತ್ತಾರೆ.
icon

(5 / 9)

ಕಾಳಹಸ್ತಿ, ಆಂದ್ರಪ್ರದೇಶ: ಆಂಧ್ರಪ್ರದೇಶವು ಅನೇಕ ಶಿವನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಕಾಳಹಸ್ತಿಯಲ್ಲಿರುವ ಶ್ರೀ ಕಾಳಹಸ್ತೇಶ್ವರ ದೇವಾಲಯವು ಶಿವನಿಗೆ ಅರ್ಪಿತವಾದ ಪವಿತ್ರ ಸ್ಥಳವಾಗಿದೆ. ಇಲ್ಲಿ ಶಿವನನ್ನು ಕಾಳಹಸ್ತೇಶ್ವರನನ್ನಾಗಿ ಪೂಜಿಸಲಾಗುತ್ತದೆ. ಶಿವರಾತ್ರಿಯ ಸಮಯದಲ್ಲಿ ಶಿವನ ಭಕ್ತರ ದಂಡೇ ಇಲ್ಲಿ ನೆರೆದಿರುತ್ತದೆ. ಶಿವನ ನಿಷ್ಠಾವಂತ ಭಕ್ತರಾದ ಶ್ರೀ (ಜೇಡ), ಕಾಳ(ಸರ್ಪ) ಮತ್ತು ಹಸ್ತಿ(ಆನೆ) ಹೆಸರುಗಳನ್ನು ಸೇರಿಸಿ ಇದಕ್ಕೆ ಇಡಲಾಗಿದೆ. ಈ ಮೂವರ ಅಚಲವಾದ ಭಕ್ತಿಯಿಂದ ಸಂತೋಷನಾದ ಶಿವನು ಅವರಿಗೆ ತನ್ನ ಹೆಸರಿನಲ್ಲಿ ವಿಲೀನವಾಗುವಂತೆ ವರವನ್ನು ನೀಡಿದನು ಎಂದು ಹೇಳಲಾಗುತ್ತದೆ.
icon

(6 / 9)

ಶ್ರೀಶೈಲ, ಆಂದ್ರಪ್ರದೇಶ: ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಶ್ರೀಶೈಲಂ ದೇವಾಲಯವು ಶಿವ ಮತ್ತು ಪಾರ್ವತಿಗೆ ಸಮರ್ಪಿತವಾದ ದೇವಾಲಯವಾಗಿದೆ. ಶಿವನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದಾಗಿದೆ. ಶಿವನ ಹದಿನೆಂಟು ಶಕ್ತಿ ಪೀಠಗಳಲ್ಲಿಯೂ ಸೇರಿದೆ. ಇಲ್ಲಿ ಶಿವ ಲಿಂಗವನ್ನು ಮಲ್ಲಿಕಾರ್ಜುನ ಎಂದು ಪೂಜಿಸಿದರೆ, ಮಾತೆ ಪಾರ್ವತಿಯನ್ನು ಭ್ರಮರಾಂಬ ಎಂದು ಪೂಜಿಸಲಾಗುತ್ತದೆ. ಮಹಾಶಿವರಾತ್ರಿಯು ಬಹಳ ಪ್ರಸಿದ್ಧಿಯನ್ನು ಪಡೆದಿದೆ.
icon

(7 / 9)

ಶ್ರೀಶೈಲ, ಆಂದ್ರಪ್ರದೇಶ: ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಶ್ರೀಶೈಲಂ ದೇವಾಲಯವು ಶಿವ ಮತ್ತು ಪಾರ್ವತಿಗೆ ಸಮರ್ಪಿತವಾದ ದೇವಾಲಯವಾಗಿದೆ. ಶಿವನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದಾಗಿದೆ. ಶಿವನ ಹದಿನೆಂಟು ಶಕ್ತಿ ಪೀಠಗಳಲ್ಲಿಯೂ ಸೇರಿದೆ. ಇಲ್ಲಿ ಶಿವ ಲಿಂಗವನ್ನು ಮಲ್ಲಿಕಾರ್ಜುನ ಎಂದು ಪೂಜಿಸಿದರೆ, ಮಾತೆ ಪಾರ್ವತಿಯನ್ನು ಭ್ರಮರಾಂಬ ಎಂದು ಪೂಜಿಸಲಾಗುತ್ತದೆ. ಮಹಾಶಿವರಾತ್ರಿಯು ಬಹಳ ಪ್ರಸಿದ್ಧಿಯನ್ನು ಪಡೆದಿದೆ.(Tripadvisor )

ವಡಕ್ಕುನಾಥನ್‌, ಕೇರಳ: ಹಿಂದೂಗಳ ಪುರಾತನ ಶಿವನ ದೇವಾಲಯಗಳಲ್ಲಿ ಕೇರಳದ ವಡಕ್ಕುನಾಥನ್‌ ಒಂದಾಗಿದೆ. ಇದು ಕೇರಳದ ತ್ರಿಶ್ಯೂರ್‌ನಲ್ಲಿದೆ. ಇದು ಪರುಶುರಾಮನ ಸೃಷ್ಟಿ ಎಂದು ಹೇಳಲಾಗುತ್ತದೆ. ಈ ದೇವಸ್ಥಾನದಲ್ಲಿ ಕೇರಳದ ಶಿಲ್ಪಕಲೆಯನ್ನು ಕಾಣಬಹುದಾಗಿದೆ. ಇಲ್ಲಿ ಶಿವನ ಜೊತೆಗೆ ಮಾತೆ ಪಾರ್ವತಿ, ಗಣೇಶ, ಶಂಕರನಾರಾಯಣ ಮತ್ತು ಶ್ರೀರಾಮನು ನೆಲೆಸಿದ್ದಾನೆ.
icon

(8 / 9)

ಧಾರ್ಮಿಕ ವಿಚಾರಗಳ ಬಗ್ಗೆ ನೀವು ತಿಳಿಯ ಬಯಸುವ ಸಮಗ್ರ ಮಾಹಿತಿ ಇಲ್ಲಿದೆ 
icon

(9 / 9)

ಇತರ ಗ್ಯಾಲರಿಗಳು