Kubera Worship: ಕೋಟಿ ಸಂಪತ್ತು ನೀಡುವ ಕುಬೇರನನ್ನು ಒಲಿಸಿಕೊಳ್ಳುವುದು ಹೇಗೆ?; ಹೀಗಿದೆ ಪೂಜಾ ವಿಧಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kubera Worship: ಕೋಟಿ ಸಂಪತ್ತು ನೀಡುವ ಕುಬೇರನನ್ನು ಒಲಿಸಿಕೊಳ್ಳುವುದು ಹೇಗೆ?; ಹೀಗಿದೆ ಪೂಜಾ ವಿಧಾನ

Kubera Worship: ಕೋಟಿ ಸಂಪತ್ತು ನೀಡುವ ಕುಬೇರನನ್ನು ಒಲಿಸಿಕೊಳ್ಳುವುದು ಹೇಗೆ?; ಹೀಗಿದೆ ಪೂಜಾ ವಿಧಾನ

  • Kubera Worship: ಕುಬೇರನನ್ನು ಪೂಜಿಸುವುದರಿಂದ ಕೋಟಿಗಟ್ಟಲೆ ಸಂಪತ್ತು ಬರುತ್ತದೆ ಎಂಬುದು ಜನರ ನಂಬಿಕೆ. ಹಾಗಾದರೆ ಆ ಕುಬೇರನ ಆರಾಧನೆ ಮತ್ತು ಕುಬೇರ ಉಪವಾಸ ಹೇಗಿರುತ್ತದೆ ಎಂಬುದನ್ನು ಇಲ್ಲಿ ನೋಡೋಣ.

ಹಿಂದೂ ಸಂಪ್ರದಾಯದಲ್ಲಿ ಲಕ್ಷ್ಮೀ ದೇವಿಯ ಜತೆಗೆ ಕುಬೇರನನ್ನೂ ಸಂಪತ್ತು ವೃದ್ಧಿಯ ದೇವನೆಂದು ಪರಿಗಣಿಸಲಾಗಿದೆ. ಪೂಜಾ ಸಮಯದಲ್ಲಿ ಕುಬೇರನ ಜತೆಗೆ ಲಕ್ಷ್ಮೀಯನ್ನೂ ಪೂಜೆ ಮಾಡಲಾಗುತ್ತದೆ.
icon

(1 / 6)

ಅಂದಹಾಗೆ ಕುಬೇರ ಕಾಣಿಸಿಕೊಂಡ ದಿನ ಗುರುವಾರ. ಹಾಗಾಗಿ ಪ್ರತಿ ಗುರುವಾರ ಕುಬೇರ ದೇವನನ್ನು ಪೂಜೆ ಮಾಡಲಾಗುತ್ತದೆ. ಕುಬೇರನಿಗೆ ಇಷ್ಟವಾದ ಬಿಲ್ವ ಪತ್ರೆಯಿಂದ ಈ ಪೂಜೆಯನ್ನು ಆರಂಭಿಸಬೇಕು.
icon

(2 / 6)

ಸಂಪತ್ತನ್ನು ಹೆಚ್ಚಿಸಲು ಪೂಜಾವ್ರತ ಪಾಲಿಸುವವರು ಕುಬೇರನಿಗಾಗಿ ಉಪವಾಸ ಮಾಡುವುದು ವಾಡಿಕೆ. ಈ ಉಪವಾಸದ ಸಮಯದಲ್ಲಿ ಲಕ್ಷ್ಮಿ ದೇವಿಯನ್ನೂ ಸಹ ಪೂಜಿಸಬೇಕು. ಹೀಗೆ ಪೂಜೆ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಯೂ ನಿಮಗೆ ಸಿಗಲಿದೆ.
icon

(3 / 6)

ಪಂಚಲೋಹ ಅಥವಾ ಚಿನ್ನ, ತಾಮ್ರ, ಬೆಳ್ಳಿಯ ಕುಬೇರ ಯಂತ್ರವನ್ನು ವಿಳ್ಯದೆಲೆಯ ಮೇಲೆ ಇಟ್ಟು ಪೂಜಿಸಬೇಕು. ಅಕ್ಷಯ ತೃತೀಯ ಶುಭದಿನದಂದು ಕುಬೇರನನ್ನು ಪೂಜಿಸುವುದರಿಂದ ಹೆಚ್ಚಿನ ಸಂಪತ್ತು ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ.
icon

(4 / 6)

ಮೊದಲು ಕುಬೇರನ ಮುಂದೆ ದೀಪವನ್ನು ಬೆಳಗಿಸಿ. ಬಳಿಕ ಕಮಲದ ಹೂವಿನಿಂದ ಅರ್ಚನೆ ಮಾಡಿ ಕುಬೇರ ಮಂತ್ರವನ್ನು ಜಪಿಸಿಬೇಕು. ಹೀಗೆ ಮಾಡುವುದರಿಂದ ಅನಿಯಮಿತ ಸಂಪತ್ತು ಪ್ರಾಪ್ತವಾಗಲಿದೆ ಎಂದು ನಂಬಲಾಗಿದೆ.
icon

(5 / 6)

ಮನೆಯಲ್ಲಿ ನಿತ್ಯ ಸತತ 48 ದಿನಗಳ ಕಾಲ ಈ ಪೂಜೆಯನ್ನು ಮಾಡಿ ಪ್ರಯೋಜನವನ್ನು ಪಡೆಯಬಹುದು. ಪೂಜೆಯ ವೇಳೆ ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ  ಲಕ್ಷ್ಮಿ ಮಮ ಗೃಹೇ ಧನಂ ಪುರಯ ಪುರಯ ನಮಃ ಎಂಬ ಮಂತ್ರ ಪಠಿಸಬೇಕು
icon

(6 / 6)

ಇತರ ಗ್ಯಾಲರಿಗಳು