ನೋಡೋಕೆ ಬೆಣ್ಣೆಯ ಆಕಾರ; ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಶ್ರೀಕೃಷ್ಣನ ಬಟರ್‌ಬಾಲ್ ಕುರಿತ ಆಸಕ್ತಿಕರ ವಿಚಾರಗಳಿವು
- ಧಾರ್ಮಿಕ ಜೊತೆಗೆ ಐತಿಹಾಸಿಕ ತಾಣವೂ ಆಗಿರುವ ತಮಿಳುನಾಡಿನ ಮಹಾಬಲಿಪುರಂನಲ್ಲಿರು ಶ್ರೀಕೃಷ್ಣನ ಬಟರ್‌ಬಾಲ್ ಹಲವು ವಿಶೇಷಗಳನ್ನು ಹೊಂದಿದೆ. ಇದರ ಕುರಿತ ಆಸಕ್ತಿಕರ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.
- ಧಾರ್ಮಿಕ ಜೊತೆಗೆ ಐತಿಹಾಸಿಕ ತಾಣವೂ ಆಗಿರುವ ತಮಿಳುನಾಡಿನ ಮಹಾಬಲಿಪುರಂನಲ್ಲಿರು ಶ್ರೀಕೃಷ್ಣನ ಬಟರ್‌ಬಾಲ್ ಹಲವು ವಿಶೇಷಗಳನ್ನು ಹೊಂದಿದೆ. ಇದರ ಕುರಿತ ಆಸಕ್ತಿಕರ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.
(1 / 7)
ಪ್ರಾಚೀನ ಕಾಲದ ದೇವಾಲಯಗಳ ತಾಣವಾಗಿರುವ ಮಹಾಬಲಿಪುರಂನಲ್ಲಿರುವ ಕೃಷ್ಣನ ಬಟರ್‌ಬಾಲ್ ರಹಸ್ಯ ತಿಳಿಯುವುದು ಹಲವರಿಗೆ ಸವಾಲಾಗಿದೆ. ಕೃಷ್ಣನ ಬಟರ್‌ಬಾಲ್ ಒಂದು ದೈತ್ಯಾಕಾರದ ಬ್ಯಾಲೆನ್ಸಿಂಗ್ ಬಂಡೆಯಾಗಿದೆ. ಇದನ್ನು ನೋಡಿದಾಗ ತುಂಬಾ ಜನರಿಗೆ ಗೊಂದಲವೂ ಆಗುತ್ತೆ.
(2 / 7)
ಘರ್ಷಣೆ ಮತ್ತು ಗುರುತ್ವಾಕರ್ಷಣೆಯ ವೈಜ್ಞಾನಿಕ ನಿಯಮಗಳನ್ನು ಧಿಕ್ಕರಿಸಿ ಬರೋಬ್ಬರಿ 1200 ವರ್ಷಗಳಿಂದ ಈ ಬಟರ್‌ಬಾಲ್ ಬೃಹತ್ ಗ್ರಾನೈಟ್ ಬಂಡೆಯ ಮೇಲೆ ನೇತಾಡುವಂತೆ ಕಾಣುತ್ತದೆ. ಇದು ದೇವರ ಕೈಗಳಿಂದೇ ರಚಿಸಲ್ಪಟ್ಟಿದೆ ಎಂದು ಹೇಳುತ್ತಾರೆ.
(3 / 7)
ಕೃಷ್ಣನ ಬಟರ್‌ಬಾಲ್ ಅನ್ನು ವಾನ ಕೃಷ್ಣ ಬಟರ್‌ಬಾಲ್ ಅಂತಲೂ ಕರೆಯಲಾಗುತ್ತದೆ. ಇದು ಸುಮಾರು 20 ಅಡಿ (6 ಮೀಟರ್) ಎತ್ತರ, 16 ಅಡಿ (5 ಮೀಟರ್) ಅಗಲವನ್ನು ಹೊಂದಿರುವ ಬೃಹತ್ ಗ್ರಾನೈಟ್ ಬಂಡೆಯಾಗಿದೆ. ಮಹಾಬಲಿಪುರಂನ ಗಣೇಶ ರಥದ ಬಳಿ ಸಣ್ಣ ಬೆಟ್ಟದ ಕಡಿದಾದ ಇಳಿಜಾರಿನ ಮೇಲೆ ಕುಳಿತು ಗುರುತ್ವಾಕರ್ಷಣೆಯೇ ಇಲ್ಲದ ರೀತಿಯಲ್ಲಿ ಈ ಬಟರ್‌ಬಾಲ್ ಇದೆ.
(4 / 7)
ಚೇಷ್ಟೆಯ ಸ್ವಭಾವಕ್ಕೆ ಹೆಸರುವಾಸಿಯಾದ ಕೃಷ್ಣನು ತನ್ನ ಬಾಲ್ಯದಲ್ಲಿ ಬೆಣ್ಣೆಯನ್ನು ಕದಿಯಲು ಇಷ್ಟಪಡುತ್ತಾನೆ. ಈ ಬಂಡೆ ಕೂಡ ದೊಡ್ಡ ಆಕಾರದ ಬೆಣ್ಣೆಯಂತೆಯೇ ಕಾಣುತ್ತದೆ.
(5 / 7)
ಪುರಾಣಗಳ ಪ್ರಕಾರ, ಈ ಬಂಡೆಯನ್ನು ಪಲ್ಲವ ರಾಜ ನರಸಿಂಹವರ್ಮನ್ 1 (ಮಾಮಲ್ಲ) ಆನೆಗಳೊಂದಿಗೆ ಸ್ಥಳಾಂತರಿಸಲು ಪ್ರಯತ್ನಿಸಿ ವಿಫಲವಾಗಿದ್ದನಂತೆ. ಆದರೆ ಬಂಡೆ ಇಂದಿಗೂ ಸ್ಥಿರವಾಗಿಯೇ ಉಳಿದಿದೆ.
(6 / 7)
ಈ ಬೃಹತ್ ಬಂಡೆಯ ಬಗ್ಗೆ ವಾಸ್ತುಶಿಲ್ಪ ಮತ್ತು ವಿಜ್ಞಾನ ಏನು ಹೇಳುತ್ತೆ ಅನ್ನೋದನ್ನು ನೋಡುವುದಾದರೆ, ಇದೊಂದು ಪ್ರಕೃತಿಯ ಭೌಗೋಳಿಕ ಶಕ್ತಿಗಳ ದವಡೆ ಬಿಡುವ ಉದಾವರಣೆಯಾಗಿದೆ. ಬಂಡೆಯನ್ನು ಗ್ನೈಸ್ ಎಂದು ಕರೆಯಲ್ಪಡುವ ಒಂದು ರೀತಿಯ ಗ್ರಾನೈಟ್ ಆಗಿದೆ. ಬಾಳಿಕೆ ಮತ್ತು ಸವೆತಕ್ಕೆ ಪ್ರತಿರೋಧಕ್ಕೆ ಹೆಸರುವಾಸಿಯಾಗಿದೆ.
ಇತರ ಗ್ಯಾಲರಿಗಳು