ದೇಗುಲ ವಿಶೇಷ: ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿರುವ ನಿಗೂಢ ರಹಸ್ಯಗಳು, ಹಲವರಿಗೆ ತಿಳಿದಿರದ ಕುತೂಹಲಕಾರಿ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ
- ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಆಂಧ್ರ ಪ್ರದೇಶದಲ್ಲಿರುವ ತಿರುಪತಿ ದೇವಸ್ಥಾನವು ಒಂದು. ಜಗತ್ತಿನ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಈ ದೇವಾಲಯವೂ ಇದೆ. ಸಹಸ್ರಾರು ಭಕ್ತರು ನಂಬಿರುವ ತಿರುಪತಿ ವೆಂಕಟರಮಣನ ಆಲಯದ ಕುರಿತ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿದೆ. ಈ ಫೋಟೊ ಗ್ಯಾಲರಿಗೆ ಪ್ರಾತಿನಿಧಿಕ ಚಿತ್ರಗಳನ್ನು ಬಳಸಲಾಗಿದೆ.
- ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಆಂಧ್ರ ಪ್ರದೇಶದಲ್ಲಿರುವ ತಿರುಪತಿ ದೇವಸ್ಥಾನವು ಒಂದು. ಜಗತ್ತಿನ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಈ ದೇವಾಲಯವೂ ಇದೆ. ಸಹಸ್ರಾರು ಭಕ್ತರು ನಂಬಿರುವ ತಿರುಪತಿ ವೆಂಕಟರಮಣನ ಆಲಯದ ಕುರಿತ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿದೆ. ಈ ಫೋಟೊ ಗ್ಯಾಲರಿಗೆ ಪ್ರಾತಿನಿಧಿಕ ಚಿತ್ರಗಳನ್ನು ಬಳಸಲಾಗಿದೆ.
(1 / 11)
ತಿರುಪತಿ ವೆಂಕಟೇಶ್ವರ ದೇವಸ್ಥಾನವು ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರತಿಷ್ಠಿತ ದೇಗುಲಗಳಲ್ಲಿ ಒಂದು. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ಇರುವ ತಿರುಮಲ ಬೆಟ್ಟದ ಮೇಲೆ ಶ್ರೀನಿವಾಸನ ದೇಗುಲವಿದೆ. ಇಲ್ಲಿ ಮಹಾವಿಷ್ಣುವನ್ನು ವೆಂಕಟೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. ಇದು ತಿರುಪತಿ ಬಾಲಾಜಿ ಎಂಬ ಹೆಸರಿನಿಂದ ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ವೆಂಕಟೇಶ್ವರನು ತನ್ನ ಪತ್ನಿ ಪದ್ಮಾವತಿಯೊಂದಿಗೆ ತಿರುಮಲದಲ್ಲಿ ನೆಲೆಸಿದ್ದಾನೆ ಎನ್ನುವುದು ಆಸ್ತಿಕರ ನಂಬಿಕೆ.
(2 / 11)
ದೇವಾಲಯದಲ್ಲಿರುವ ವೆಂಕಟೇಶ್ವರನ ವಿಗ್ರಹವು ವಿಶೇಷವಾದ ಕಪ್ಪು ಕಲ್ಲಿನಿಂದ ಮಾಡಲ್ಪಟ್ಟಿದೆ. ಇದರಲ್ಲಿ ಬಾಲಾಜಿಯು ಸ್ವಯಂವ್ಯಕ್ತ ಎಂದು ನಂಬಲಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಗ್ರಹದ ಮೇಲೆ ಬೆವರಿನ ಹನಿಯು ಸ್ವಷ್ಪವಾಗಿ ಗೋಚರವಾಗುತ್ತದೆ ಎನ್ನುವ ಪ್ರತೀತಿ ಇದೆ. ವಿಗ್ರಹವನ್ನು ಸ್ವಚ್ಛಗೊಳಿಸುವಾಗ ಅದು ತೇವವಾಗಿರುವುದು ಗಮನಕ್ಕೆ ಬಂದಿದೆ ಎಂದು ಹಲವರು ಹೇಳಿದ್ದಾರೆ. ದೇವರು ಬೆವರುತ್ತಾನೆ ಎನ್ನುವ ಪ್ರತೀತಿ ಇರುವುದರಿಂದ ವಾತಾವರಣವನ್ನು ತಂಪಾಗಿ ಇರಿಸುವ ವ್ಯವಸ್ಥೆ ಮಾಡಲಾಗಿದೆ.
(3 / 11)
ತಿರುಮಲದಲ್ಲಿರುವ ಸ್ವಾಮಿ ಪುಷ್ಕರಣಿ ಹೆಸರಿನ ಕಲ್ಯಾಣಿಯ ಕೊಳದ ದಡದಲ್ಲಿ ಭಗವಾನ್ ವಿಷ್ಣುವು ಕೆಲವು ಕಾಲ ನೆಲೆಸಿದ್ದನೆಂದು ಹೇಳಲಾಗುತ್ತದೆ. ಈ ಕೊಳ ಇಂದಿಗೂ ಅಸ್ತಿತ್ವದಲ್ಲಿದೆ ಮತ್ತು ದೇವಾಲಯದ ಎಲ್ಲಾ ವಿಧಿಗಳಿಗೂ ಇದೇ ಕಲ್ಯಾಣಿಯ ನೀರು ಬಳಸಲಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
(4 / 11)
ಇಲ್ಲಿ ವಿಷ್ಣುವಿನೊಂದಿಗೆ ಲಕ್ಷ್ಮೀದೇವಿಯೂ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಆದ್ದರಿಂದ, ಬಾಲಾಜಿಗೆ ಗಂಡು ಮತ್ತು ಹೆಣ್ಣು ಇಬ್ಬರ ಬಟ್ಟೆಗಳನ್ನು ತೊಡಿಸುವ ಸಂಪ್ರದಾಯವಿದೆ. ಪ್ರತಿದಿನ ಭಗವಂತನ ವಿಗ್ರಹದ ಅಲಂಕಾರಕ್ಕಾಗಿ ಸೀರೆ ಮತ್ತು ಧೋತಿ ಎರಡನ್ನೂ ಬಳಸಲಾಗುತ್ತದೆ,
(5 / 11)
ವೆಂಕಟೇಶ್ವರನ ವಿಗ್ರಹದಲ್ಲಿರುವುದು ನಿಜವಾದ ಕೂದಲು ಎಂದು ಹೇಳಲಾಗುತ್ತದೆ. ಈ ಮಾತನ್ನು ಯಾರೂ ದೃಢಪಡಿಸಿಲ್ಲ. ಆದರೂ ಭಕ್ತರಲ್ಲಿ ಈ ನಂಬಿಕೆ ಸದಾ ಚಾಲ್ತಿರುತ್ತದೆ.
(6 / 11)
ವಿಗ್ರಹದ ಒಳಗೆ ಆಗಾಗ ಸಮುದ್ರದ ಅಲೆಯ ಶಬ್ದ ಕೇಳಿಸುತ್ತದೆ ಎಂದು ಹೇಳುತ್ತಾರೆ. ಈ ಧ್ವನಿ ಹೇಗೆ ಮತ್ತು ಎಲ್ಲಿಂದ ಬರುತ್ತದೆ ಎಂಬುದು ಇಂದಿಗೂ ನಿಗೂಢ.
(7 / 11)
ಬಾಲಾಜಿಯ ದೇವಸ್ಥಾನದಲ್ಲಿನ ದೀಪ ಸದಾ ಉರಿಯುತ್ತಿರುತ್ತದೆ. ಇಲ್ಲಿ ದೀಪವನ್ನು ಯಾರು ಮೊದಲು ಮತ್ತು ಯಾವಾಗ ಬೆಳಗಿಸಿದರು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.
(8 / 11)
ಇಲ್ಲಿನ ವೆಂಕಟೇಶ್ವರನ ವಿಗ್ರಹದ ಹೃದಯಭಾಗದಲ್ಲಿ ಲಕ್ಷ್ಮೀದೇವಿಯ ಆಕೃತಿ ಗೋಚರವಾಗುತ್ತದೆ. ಪ್ರತಿ ಗುರುವಾರ ಅಲಂಕಾರ ತೆಗೆದು ದೇವರಿಗೆ ಅಭಿಷೇಕ ಮಾಡಿ ತೇಯ್ದ ಶ್ರೀಗಂಧ ಹಚ್ಚಿ ಪುನಃ ಅಭಿಷೇಕ ಮಾಡಿದಾಗ ವಿಗ್ರಹದ ಹೃದಯ ಭಾಗದಲ್ಲಿ ಲಕ್ಷ್ಮೀದೇವಿಯ ಆಕೃತಿ ಕಾಣುತ್ತದೆ ಎಂದು ಹೇಳಲಾಗುತ್ತದೆ.
(9 / 11)
ಪಚ್ಚೆ ಹೆಸರಿನ ಕರ್ಪೂರವನ್ನು ಭಗವಂತನ ವಿಗ್ರಹದ ಮೇಲೆ ಲೇಪಿಸಲಾಗುತ್ತದೆ. ಈ ಕರ್ಪೂರವನ್ನು ಯಾವುದೇ ಕಲ್ಲಿನ ಮೇಲೆ ಹಚ್ಚಿದರೆ ಅದು ಸ್ವಲ್ಪ ಸಮಯದ ನಂತರ ಬಿರುಕು ಬಿಡುತ್ತದೆ, ಆದರೆ ತಿರುಪತಿ ಬಾಲಾಜಿಯ ವಿಗ್ರಹದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಲಾಗುತ್ತದೆ.
(10 / 11)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು