Spiritual News: ಭೀಮನ ಅಮವಾಸ್ಯೆ ವಿಶೇಷ ಪೂಜೆ, ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ; ಫೋಟೋ ಗ್ಯಾಲರಿ
ಇಂದು ರಾಜ್ಯಾದ್ಯಂತ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸಲಾಗುತ್ತಿದೆ. ಭೀಮನ ಅಮವಾಸ್ಯೆಯಂದು ರಾಜ್ಯದ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರುತ್ತದೆ.
(1 / 10)
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೂಡಾ ಭೀಮನ ಅಮವಾಸ್ಯೆ ವಿಶೇಷ ಪೂಜೆ ನೆರವೇರಿಸಲಾಯ್ತು. ರಾಜ್ಯದ ನಾನಾ ಕಡೆಗಳಿಂದ ಭಕ್ತರು ಮಾದಪ್ಪನ ದರ್ಶನಕ್ಕೆ ಆಗಮಿಸಿದ್ದರು.
(2 / 10)
ಭೀಮನ ಅಮವಾಸ್ಯೆಯ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಭಾನುವಾರ ರಾತ್ರಿಯೇ ಜನರು ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದರು. ಕೆಲವರು ಬೆಟ್ಟದ ಹೋಟೆಲ್ ರೂಮ್‌ಗಳಲ್ಲಿ ಉಳಿದುಕೊಂಡರೆ, ಇನ್ನೂ ಕೆಲವರಿಗೆ ರೂಮ್ ಸಿಗದೆ ದೇವಸ್ಥಾನದ ಮುಂಭಾಗದ ಆವರಣದಲ್ಲೇ ರಾತ್ರಿಯೆಲ್ಲಾ ಮಲಗಿದ್ದು ಕಂಡು ಬಂತು.
(3 / 10)
ಭೀಮನ ಅಮವಾಸ್ಯೆಯಂದು ಜನರು ಶಿವನನ್ನು ಆರಾಧಿಸುವುದರಿಂದ ಜನರು ಶಿವ ಲಿಂಗ ಉದ್ಭವ ಆದ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
(4 / 10)
ಭೀಮನ ಅಮವಾಸ್ಯೆ ಮಾತ್ರವಲ್ಲದೆ ಭಕ್ತರು ಪ್ರತಿದಿನ ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಪ್ರತಿ ಸೋಮವಾರ ಹಾಗೂ ಶುಕ್ರವಾರ ಇಲ್ಲಿ ವಿಶೇಷ ಪೂಜೆ ಇರುತ್ತದೆ. ಭಕ್ತರು ಇಲ್ಲಿ ಬಂದು ಹರಕೆ ಕಟ್ಟಿಕೊಂಡು ತಮ್ಮ ಮನಸ್ಸಿನ ಆಸೆಗಳನ್ನು ಮಹದೇಶ್ವರ ಮುಂದೆ ಹೇಳಿಕೊಳ್ಳುತ್ತಾರೆ.
(5 / 10)
ತಾವು ಅಂದುಕೊಂಡಿದ್ದು ನೆರವೇರಿದಾಗ ಭಕ್ತರು ಬೆಟ್ಟಕ್ಕೆ ಬಂದು ಚಿನ್ನದ ರಥ, ಬೆಳ್ಳಿ ರಥ , ಉರುಳು ಸೇವೆ, ವಿಶೇಷ ಪೂಜೆ ಸೇರಿದಂತೆ ನಾನಾ ರೀತಿಯ ಸೇವೆ ಮಾಡಿ ಹರಕೆ ತೀರಿಸುತ್ತಾರೆ.
(6 / 10)
ಮಲೆ ಮಹದೇಶ್ವರ ಬೆಟ್ಟವನ್ನು ಏಳು ಮಲೆ ಎಂದೂ ಕರೆಯುತ್ತಾರೆ. ಕೊಂಗುಮಲೆ, ಜೇನುಮಲೆ, ಪ್ಯಾಚೆಮಲೆ, ಅನುಮಲೆ, ಕಾನುಮಲೆ, ಪೊನ್ನಾಚಿಮಲೆ ಮತ್ತು ಪಾವಲಮಲೆಗಳು ಈ ಬೆಟ್ಟವನ್ನು ಸುತ್ತುವರೆದಿದೆ.
(7 / 10)
ಭೀಮನ ಅಮವಾಸ್ಯೆ ಅಂಗವಾಗಿ ಶಿವಲಿಂಗ ಹಾಗೂ ದೇವಸ್ಥಾನದ ಆವರಣವನ್ನು ಹೂವು ಹಣ್ಣುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಈ ಸಮಯದಲ್ಲಿ ಮಾದಪ್ಪನನ್ನು ನೋಡಲು ಎರಡೂ ಕಣ್ಣುಗಳೂ ಸಾಲದು.
(9 / 10)
ಜ್ಯೋತಿರ್ಭೀಮೇಶ್ವರ ವ್ರತದ ಅಂಗವಾಗಿ ಸೋಮವಾರ ಶ್ರೀ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯ್ತು.
ಇತರ ಗ್ಯಾಲರಿಗಳು