ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಕೆಲವೇ ಮೈಲಿ ಅಂತರದಲ್ಲಿವೆ, ಪ್ಲಾನ್ ಮಾಡಿಕೊಂಡು ಹೋದರೆ ದರ್ಶನ ಮಾಡ್ಕೊಂಡು ಬರಬಹುದು-spiritual news list of 6 pilgrimage places near tirupati andhra pradesh you can visit just a few miles from tirupati uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಕೆಲವೇ ಮೈಲಿ ಅಂತರದಲ್ಲಿವೆ, ಪ್ಲಾನ್ ಮಾಡಿಕೊಂಡು ಹೋದರೆ ದರ್ಶನ ಮಾಡ್ಕೊಂಡು ಬರಬಹುದು

ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಕೆಲವೇ ಮೈಲಿ ಅಂತರದಲ್ಲಿವೆ, ಪ್ಲಾನ್ ಮಾಡಿಕೊಂಡು ಹೋದರೆ ದರ್ಶನ ಮಾಡ್ಕೊಂಡು ಬರಬಹುದು

ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಅಲ್ಲಿಂದ ಕೆಲವೇ ಮೈಲಿಗಳ ಅಂತರದಲ್ಲಿವೆ. ಸರಿಯಾಗಿ ಪ್ಲಾನ್ ಮಾಡಿಕೊಂಡು ಹೋದರೆ ಅಷ್ಟೂ ದೇವರ ದರ್ಶನ ಮಾಡ್ಕೊಂಡು ಬರಬಹುದು. ಇಲ್ಲಿದೆ ಆ ಆರೂ ದೇವಸ್ಥಾನಗಳ ವಿವರ.    

ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಕೆಲವೇ ಮೈಲಿ ಅಂತರದಲ್ಲಿವೆ. ಪ್ಲಾನ್ ಮಾಡಿಕೊಂಡು ಹೋದರೆ ದರ್ಶನ ಮಾಡ್ಕೊಂಡು ಬರಬಹುದು. ಅದಕ್ಕಾಗಿ ಈ ದೇವಸ್ಥಾನಗಳ ಕಿರು ವಿವರ ಇಲ್ಲಿದೆ.
icon

(1 / 7)

ಕಲಿಯುಗ ವೈಕುಂಠ ಎಂದೇ ಪ್ರಸಿದ್ಧಿ ಪಡೆದಿರುವ ದೇವಸ್ಥಾನ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ. ಪಾದಯಾತ್ರೆ ಮೂಲಕ ಬೆಟ್ಟ ಏರಿ ದೇವರ ದರ್ಶನ ಪಡೆಯುವುದು ವಾಡಿಕೆ. ಇದಕ್ಕಾಗಿ ಸುಸಜ್ಜಿತ ಕಾಲುದಾರಿಯನ್ನು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಆಡಳಿತ ಮಂಡಳಿ ನಿರ್ಮಿಸಿದೆ. ಇದನ್ನು ಶ್ರೀವಾರಿ ಮೆಟ್ಟು ಅಥವಾ ಆಲಿಪಿರಿ ಮೆಟ್ಟು ಎನ್ನುತ್ತಾರೆ. ಸದಾ ಭಕ್ತದಟ್ಟಣೆಯಿಂದ ಕೂಡಿರುವ ಕ್ಷೇತ್ರ ಇದಾಗಿದ್ದು, ದೇಶದ ಅತಿಶ್ರೀಮಂತ ದೇವಸ್ಥಾನ ಎಂಬ ಖ್ಯಾತಿಗೂ ಭಾಜನವಾಗಿದೆ.
icon

(2 / 7)

ತಿರುಮಲ ತಿರುಪತಿಯಿಂದ ಕೇವಲ 5 ಕಿ.ಮೀ. ಅಂತರದಲ್ಲಿ ತಿರುಚನೂರು ಪದ್ಮಾವತಿ ಅಮ್ಮನ ದೇವಸ್ಥಾನ. ಈ ದೇವಸ್ಥಾನವೂ ಟಿಟಿಡಿ ಅಧೀನದಲ್ಲೇ ಇದೆ. ಅಲರ್‌ ಮೇಲ್ ಮಂಗಾ ಪುರಂ (ಅಲರ್ -ಕಮಲ, ಮೇಲ್ - ಮೇಲೆ, ಮಂಗಾ-ದೇವತೆ, ಪುರಂ- ಪಟ್ಟಣ) ಎಂದೇ ಈ ಯಾತ್ರಾ ಕೇಂದ್ರ ಪ್ರಸಿದ್ಧಿಪಡೆದಿದೆ. ದಂತಕಥೆಯ ಪ್ರಕಾರ, ಪದ್ಮಸರೋವರದ ಮಧ್ಯದಲ್ಲಿ ಪದ್ಮಾವತಿ ದೇವಿಯಾಗಿ ಮಹಾಲಕ್ಷ್ಮಿ ದೇವಿಯು ಚಿನ್ನದ ಕಮಲದ ಮೇಲೆ ಹೊರಹೊಮ್ಮಿದಳು, ಆದ್ದರಿಂದಲೇ ಈ ಸ್ಥಳವು "ಅಲರಮೇಲ್ಮಂಗಪುರಂ" ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ತಿರುಪತಿಗೆ ಭೇಟಿ ನೀಡುವ ಭಕ್ತರು ಇಲ್ಲಿಗೆ ಖಚಿತವಾಗಿ ಭೇಟಿ ನೀಡುತ್ತಾರೆ.  
icon

(3 / 7)

ತಿರುಮಲ ತಿರುಪತಿಯಿಂದ ಅಂದಾಜು 37 ಕಿ.ಮೀ. ಅಂತರದಲ್ಲಿದೆ ಶ್ರೀಕಾಳಹಸ್ತಿ ದೇವಸ್ಥಾನ. ಶ್ರೀಕಾಳಹಸ್ತಿ ಎಂಬುದು ಸಂಸ್ಕೃತ ಪದಗಳಾದ ಶ್ರೀ (ಜೇಡ), ಕಾಳ (ಹಾವು) ಮತ್ತು ಹಸ್ತಿ (ಆನೆ) ಗಳ ಸಂಯೋಜನೆಯಿಂದ ಉಂಟಾದುದು. ಇವು ಇಲ್ಲಿರುವ ಶಿವಲಿಂಗವನ್ನು ಪೂಜಿಸಿ ಮೋಕ್ಷ ಪಡೆದವು ಎಂಬುದು ದಂತಕಥೆ. ಇದೇ ರೀತಿ ಇನ್ನೂ ಕೆಲವು ದಂತಕಥೆಗಳಿವೆ. ಒಟ್ಟಿನಲ್ಲಿ ತಿರುಪತಿಗೆ ಭೇಟಿ ನೀಡಿದಾಗ ತಪ್ಪದೇ ನೋಡಬಹುದಾದ ಕ್ಷೇತ್ರ ಇದು.
icon

(4 / 7)

ತಿರುಪತಿಯ ನೈಋತ್ಯಕ್ಕೆ ಅಂದಾಜು 70 ಕಿ.ಮೀ ಅಂತರದಲ್ಲಿರುವ ದೇವಾಲಯವೇ ಈ ಕಾಣಿಪಾಕಂ ಗಣಪತಿ ದೇವಸ್ಥಾನ. ಇಲ್ಲಿನ ಗಣಪತಿಯು ಸ್ವಯಂಭೂ ಆಗಿದ್ದು, ಕಾಲಾನುಕ್ರಮದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂಬುದು ಭಕ್ತರ ನಂಬಿಕೆ. ಈ ವರಸಿದ್ಧಿ ವಿನಾಯಕನು, ಸಂಪತ್ತು, ವಿಜಯ ಮತ್ತು ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ತಿರುಪತಿಗೆ ಭೇಟಿ ನೀಡುವವರು ಸಾಮಾನ್ಯವಾಗಿ ಈ ಕ್ಷೇತ್ರಕ್ಕೂ ಭೇಟಿ ನೀಡಿ ಗಣೇಶನ ದರ್ಶನ ಪಡೆಯುತ್ತಾರೆ.  
icon

(5 / 7)

ತಿರುಪತಿಯಿಂದ 125 ಕಿ.ಮೀ. ಅಂತರದಲ್ಲಿದೆ ವೆಲ್ಲೂರಿನ ಶ್ರೀ ಲಕ್ಷ್ಮೀ ನಾರಾಯಣೀ ಗೋಲ್ಡನ್ ಟೆಂಪಲ್. ತಿರುಮಲೈ ಕೋಡಿ ಬೆಟ್ಟ ಪ್ರದೇಶದಲ್ಲಿರುವ ಈ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ನಾರಾಯಣಿ ಅಥವಾ ಮಹಾಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ಸಂಪತ್ತಿನ ಅಧಿದೇವತೆಯಾಗಿರುವ ಮಾತೆಯ ದರ್ಶನ ಪಡೆಯಲು ತಿರುಪತಿಗೆ ಬರುವ ಭಕ್ತರು ಹೆಚ್ಚಾಗಿ ಆಗಮಿಸುತ್ತಾರೆ. 
icon

(6 / 7)

ತಿರುಪತಿಯಿಂದ ಅಹೋಬಿಲಂ ನರಸಿಂಹ ದೇವಸ್ಥಾನಕ್ಕೆ 5 ಗಂಟೆ ದಾರಿ. ಅಂದರೆ ಸುಮಾರು 230 ಕಿ.ಮೀ. ಅಂತರ. ಅಹೋಬಿಲಂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪೂರ್ವ ಘಟ್ಟಗಳ ಬೆಟ್ಟಗಳಲ್ಲಿದೆ. ಇದು ಚೆನ್ನೈನಿಂದ ವಾಯವ್ಯಕ್ಕೆ 400 ಕಿಮೀ ದೂರದಲ್ಲಿದೆ. ಈ ದೇವಾಲಯದ 5 ಕಿಮೀ ಸುತ್ತಳತೆಯಲ್ಲಿ ಒಂಬತ್ತು ನರಸಿಂಹ ದೇಗುಲಗಳಿವೆ. ತಿರುಪತಿಗೆ ಭೇಟಿ ನೀಡುವ ಅನೇಕ ಭಕ್ತರು ಸಮಯ ಮಾಡಿಕೊಂಡು ಈ ದೇವಾಲಯಕ್ಕೂ ಭೇಟಿ ನೀಡಿ ನರಸಿಂಹ ದೇವರ ದರ್ಶನ ಪಡೆಯುತ್ತಾರೆ.
icon

(7 / 7)

ಇತರ ಗ್ಯಾಲರಿಗಳು