Planet Conjunction: ಜೂನ್‌ನಲ್ಲಿ 5 ಗ್ರಹಗಳ ಅಪರೂಪದ ಸಂಯೋಜನೆ, ಈ 5 ರಾಶಿಯವರ ಬಾಳಿನಲ್ಲಿ ಅದೃಷ್ಟದ ದಿನಗಳು ಆರಂಭವಾಗುವ ಸಮಯ
ಜೂನ್ ತಿಂಗಳಲ್ಲಿ 5 ಗ್ರಹಗಳ ಸಂಯೋಗವಾಗಲಿದ್ದು, ಇದರಿಂದ ಕೆಲವು ರಾಶಿಯವರ ಬಾಳಿನಲ್ಲಿ ಅದೃಷ್ಟ ಮರಳಿ ಬರಲಿದೆ. ಅವರ ಹಣಕಾಸಿನ ಸಮಸ್ಯೆಗಳಿಗೆ ಅಂತ್ಯ ಸಿಗಲಿದೆ. ಜೀವನ ಸುಖಮಯವಾಗಿರುತ್ತದೆ. ಗ್ರಹಗಳ ಸಂಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಶುಭವಾಗಲಿದೆ ನೋಡಿ.
(1 / 9)
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ಸಂಯೋಜನೆಯನ್ನು ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಇದು 12 ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ವೃಷಭ ರಾಶಿಯು ಶುಕ್ರ, ಸೂರ್ಯ, ಮಂಗಳ, ಬುಧ ಮತ್ತು ಚಂದ್ರರನ್ನು ಹೊಂದಿದೆ. 5 ರಾಶಿಚಕ್ರ ಚಿಹ್ನೆಗಳ ಈ ಸಂಯೋಜನೆಯ ಪರಿಣಾಮವಾಗಿ, ಕೆಲವು ರಾಶಿಯವರಿಗೆ ಲಾಭವನ್ನು ಉಂಟು ಮಾಡಲಿದೆ.
(2 / 9)
ಇದೇ ತಿಂಗಳಲ್ಲಿ 5 ಗ್ರಹಗಳು ಸಂಯೋಗವಾಗಿದ್ದು ಮೂರು ರಾಶಿಯವರಿಗೆ ಅದೃಷ್ಟ ಹುಡುಕಿ ಬರಲಿದೆ. ಇದರಿಂದ ಅವರು ಅಂದುಕೊಂಡ ಕೆಲಸಗಳೆಲ್ಲವೂ ಆಗಲಿದೆ. ಅಂತಹ ಅದೃಷ್ಟಶಾಲಿ ರಾಶಿಗಳು ಯಾವುವು ನೋಡಿ.
(3 / 9)
ಮೇಷ: ಈ ಸಮಯದಲ್ಲಿ ನಿಮ್ಮ ಬದುಕಿನ ಮೌಲ್ಯ ಹೆಚ್ಚುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿಮ್ಮ ಬದುಕಿನಲ್ಲಿ ಸಂತೋಷ ಮನೆ ಮಾಡುತ್ತದೆ. ವೃತ್ತಿಪರ ಉದ್ಯೋಗಗಳ ವಿಷಯದಲ್ಲಿ ಈ ತಿಂಗಳು ಮುಖ್ಯವಾಗಿದೆ. ಎಲ್ಲಾ ಚಟುವಟಿಕೆಗಳಲ್ಲಿ ಸಂಗಾತಿಯು ನಿಮ್ಮೊಂದಿಗೆ ಇರುತ್ತಾರೆ.
(4 / 9)
ವೃಷಭ: ಈ ಸಮಯದಲ್ಲಿ ಉದ್ಯೋಗ ಬದಲಾವಣೆಯ ಬಗ್ಗೆ ಯೋಚಿಸುವಿರಿ. ವ್ಯಾಪಾರದಲ್ಲಿ ಲಾಭವಿದೆ. ಕೆಲಸದಲ್ಲಿ ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ಸಂಪತ್ತು ಸಂಗ್ರಹವಾಗುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯಲಿದ್ದೀರಿ. ಒಟ್ಟಾರೆ ಜೀವನ ಸುಖಮಯವಾಗಿರುತ್ತದೆ.
(5 / 9)
ಧನು: ನೀವು ಹೊಸ ಯೋಜನೆಯೊಂದನ್ನು ಪ್ರಾರಂಭಿಸುತ್ತೀರಿ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಮೌಲ್ಯ ಹೆಚ್ಚಾಗುತ್ತದೆ. ಕೌಟುಂಬಿಕ ವಾತಾವರಣ ಉತ್ತಮವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿಯು ಬಲವಾಗಿರುತ್ತದೆ. ಶಾಶ್ವತ ಗೌರವ ಹುದ್ದೆಗಳ ಸ್ಥಾಪನೆಯೂ ಆಗಲಿದೆ. ವೈವಾಹಿಕ ಜೀವನ ಆನಂದಮಯವಾಗಿರುತ್ತದೆ. ಶಿವನ ಕೃಪೆಗೆ ಪಾತ್ರರಾಗಲಿದ್ದೀರಿ.
(6 / 9)
ಸಿಂಹ: ನೀವು ಕೆಲಸ ಮಾಡುವ ಸ್ಥಳದಲ್ಲಿ ಒಳ್ಳೆಯ ಸುದ್ದಿಯೊಂದನ್ನು ಸ್ವೀಕರಿಸಲಿದ್ದೀರಿ. ತಿಂಗಳ ಕೊನೆಯಲ್ಲಿ ಒಳ್ಳೆಯ ಸುದ್ದಿ ನಿಮ್ಮ ಕಿವಿ ಮೇಲೆ ಬೀಳಲಿದೆ. ಅದೃಷ್ಟ ಹಾಗೂ ಹಣಕಾಸಿನ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನೀವು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ
(Freepik)(7 / 9)
ಕನ್ಯಾ: ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ಸ್ಥಗಿತವಾಗಿದ್ದ ಯಾವುದೇ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಕೆಲಸ ಅಥವಾ ವ್ಯಾಪಾರದಿಂದ ಶುಭವಾಗಲಿದೆ. ಸಂಪತ್ತು ವೃದ್ಧಿಸುತ್ತದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ.
(8 / 9)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು