Maha Shivaratri 2024: ಆಂಧ್ರಪ್ರದೇಶದ ಪಂಚರಾಮ ಶಿವ ದೇಗುಲಗಳ ಪರಿಚಯ ಇಲ್ಲಿದೆ, ಮನಸಿಗೆ ಶಾಂತಿ ನೀಡುವ ಶಿವಾಲಯಗಳಿವು
- ಮಹಾಶಿವರಾತ್ರಿ ಸಂದರ್ಭ ಆಂಧ್ರಪ್ರದೇಶದಲ್ಲಿನ ಶಿವನಿಗೆ ಅರ್ಪಿತವಾದ 5 ಪುರಾತನ ಹಿಂದೂ ದೇವಾಲಯಗಳ ಬಗ್ಗೆ ನೀವೂ ತಿಳಿಯಲೇಬೇಕು. ಇದು ಹಿಂದೂಗಳಿಗೆ ಪವಿತ್ರ ಯಾತ್ರಸ್ಥಳವೂ ಹೌದು. ಪಂಚರಾಮ ಶಿವ ದೇಗುಲಗಳು ಎಂದು ಕರೆಯಲಾಗುವ ಈ ದೇವಾಲಯಗಳ ವೈಶಿಷ್ಟ್ಯ ತಿಳಿಯಿರಿ.
- ಮಹಾಶಿವರಾತ್ರಿ ಸಂದರ್ಭ ಆಂಧ್ರಪ್ರದೇಶದಲ್ಲಿನ ಶಿವನಿಗೆ ಅರ್ಪಿತವಾದ 5 ಪುರಾತನ ಹಿಂದೂ ದೇವಾಲಯಗಳ ಬಗ್ಗೆ ನೀವೂ ತಿಳಿಯಲೇಬೇಕು. ಇದು ಹಿಂದೂಗಳಿಗೆ ಪವಿತ್ರ ಯಾತ್ರಸ್ಥಳವೂ ಹೌದು. ಪಂಚರಾಮ ಶಿವ ದೇಗುಲಗಳು ಎಂದು ಕರೆಯಲಾಗುವ ಈ ದೇವಾಲಯಗಳ ವೈಶಿಷ್ಟ್ಯ ತಿಳಿಯಿರಿ.
(1 / 8)
ಆಂಧ್ರಪ್ರದೇಶದಲ್ಲಿರುವ ಪಂಚರಾಮ ಶಿವದೇಗುಲಗಳು ಶಿವನಿಗೆ ಅರ್ಪಿತವಾಗಿರುವ ಅತ್ಯಂತ ಹಳೆಯ ದೇಗುಲಗಳಾಗಿವೆ. ಆಂಧ್ರದಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಇದೂ ಒಂದು. ಒಂದೇ ಲಿಂಗದಿಂದ 5 ಶಿವಲಿಂಗಗಳು ಹುಟ್ಟಿಕೊಂಡವು ಎಂದು ದಂತಕಥೆಗಳು ಹೇಳುತ್ತವೆ. ರಾಕ್ಷಸ ತಾರಕಾಸುರ ಶಿವನ ಮೇಲೆ ದಾಳಿ ಮಾಡಿದಾಗ ಲಿಂಗವು 5 ತುಂಡುಗಳಾಗಿ ಒಡೆಯಿತು ಎನ್ನಲಾಗುತ್ತದೆ. ಈ 5 ತುಂಡುಗಳು ಬಿದ್ದ ಜಾಗವನ್ನು ಪಂಚರಾಮ ಶಿವಕ್ಷೇತ್ರಗಳು ಎಂದು ಕರೆಯಲಾಯಿತು. ಈ ಪಂಚಲಿಂಗ ದೇಗುಲಗಳು ಯಾವುವು, ಅವು ಎಲ್ಲಿವೆ ತಿಳಿಯಿರಿ.
(2 / 8)
ಅಮರೇಶ್ವರ ಸ್ವಾಮಿ ದೇವಾಲಯ: ಇದನ್ನು ಅಮರರಾಮ ದೇವಾಲಯ ಎಂದೂ ಕರೆಯುತ್ತಾರೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ಅಮರಾವತಿಯು ವಿಷ್ಣುವನ್ನು ಮೆಚ್ಚಿಸಲು ಶಿವ ತಪಸ್ಸು ಮಾಡಿದ ಸ್ಥಳ ಎಂಬ ನಂಬಿಕೆ ಇದೆ. ಈ ದೇವಾಲಯವನ್ನು ಚಾಲುಕ್ಯರ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಭಾರತದಲ್ಲಿರುವ ಅತ್ಯಂತ ಎತ್ತರದ ಶಿವಲಿಂಗಗಳಲ್ಲಿ ಇದೂ ಒಂದು. ಈ ದೇವಾಲಯವು ವಿಶಾಖಪಟ್ಟಣದಿಂದ 386 ಕಿಲೋಮೀಟರ್ ದೂರದಲ್ಲಿದೆ. ವಿಜಯವಾಡ ವಿಮಾನ ನಿಲ್ದಾಣದಿಂದ 59 ಕಿಲೋಮೀಟರ್ ದೂರದಲ್ಲಿದೆ. (HinduPad)
(3 / 8)
ಶ್ರೀ ಕುಮಾರರಾಮ ಭೀಮೇಶ್ವರ ಸ್ವಾಮಿ ದೇವಸ್ಥಾನ: ಇದು ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ. ಈ ದೇವಸ್ಥಾನವನ್ನು ಶಿವನ ಮಗ ಕಾರ್ತಿಕೇಯ ಪೂಜೆ ಸಲ್ಲಿಸಿದ ಜಾಗ ಎನ್ನಲಾಗುತ್ತದೆ. ಈ ದೇಗುಲವು ಚಾಲುಕ್ಯ ವಾಸ್ತುಶಿಲ್ಪವನ್ನು ಹೊಂದಿದೆ. ಸುಂದರ ಕೆತ್ತನೆ ಹಾಗೂ ಎತ್ತರದ ಗೋಪುರಗಳಿಗೆ ಹೆಸರುವಾಸಿಯಾಗಿದೆ. ಈ ದೇಗುಲವಿರುವುದು ಸಮರ್ಲಕೋಟಾದಲ್ಲಿ. (Wikipedia)
(4 / 8)
ದ್ರಾಕ್ಷಾರಾಮ: ಇದು ಕೂಡ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ದೇವಾಲಯ. ದ್ರಾಕ್ಷಾರಾಮವು ದಕ್ಷಯಜ್ಞ ನಡೆದ ಸ್ಥಳ ಎಂಬ ನಂಬಿಕೆ ಇದೆ. ಚಾಲುಕ್ಯ ಹಾಗೂ ಚೋಳ ಶೈಲಿಯ ವಾಸ್ತುಶಿಲ್ಪವನ್ನು ಇಲ್ಲಿ ಕಾಣಬಹುದು. ಭಾರತದ ಪುರಾತತ್ವ ಸಮೀಕ್ಷೆ ಅಡಿಯಲ್ಲಿ ಬರುವ ಈ ದೇಗುಲವು ದೇಶದ ಅತಿ ದೊಡ್ಡ ಹಾಗೂ ಪ್ರಮುಖ ಶಿವ ದೇಗುಲಗಳಲ್ಲಿ ಒಂದು ಎನ್ನಲಾಗುತ್ತದೆ. ಇದು ಆಂಧ್ರಪ್ರದೇಶದ ಕೋನಾಸೀಮಾ ಜಿಲ್ಲೆಯಲ್ಲಿದೆ. (Astroved)
(5 / 8)
ಸೋಮೇಶ್ವರ ದೇವಸ್ಥಾನ: ಇದನ್ನು ಸೋಮರಾಮ ದೇವಾಲಯ ಎಂದೂ ಕರೆಯುತ್ತಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ಜಿಲ್ಲೆಯಲ್ಲಿದೆ ಈ ದೇಗುಲ. ಕೇಂದ್ರ ಸಂರಕ್ಷಿತ ಸ್ಮಾರಕಗಳಲ್ಲಿ ಇದೂ ಒಂದಾಗಿದೆ. ಚಾಲುಕ್ಯರ ಕಾಲದ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವು ಇತರ ಪಂಚರಾಮ ಲಿಂಗಗಳಿಗೆ ಹೋಲಿಸಿದರೆ ಅತ್ಯಂತ ಚಿಕ್ಕದಾಗಿದೆ. ಚಂದ್ರಮಾಸಗಳಲ್ಲಿ ಇದು ಬಣ್ಣವನ್ನು ಬದಲಿಸುತ್ತದೆ. ( Indian Pilgrims Tour)
(6 / 8)
ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ: ಇದು ಪಶ್ಚಿಮ ಗೋದಾವರಿಯ ಪಾಲಕೊಳ್ಳುವಿನಲ್ಲಿದೆ. ಈ ದೇಗುಲದಲ್ಲಿ ಒಂದು ದಿನ ತಂಗುವುದು ವಾರಣಸಿಯಲ್ಲಿ ಒಂದು ವರ್ಷ ತಂಗಿದ್ದಕ್ಕೆ ಸಮ ಎಂಬ ನಂಬಿಕೆ ಇದೆ. ಸುಂದರ ಕೆತ್ತನೆಯ ವಾಸ್ತುಶಿಲ್ಪಕ್ಕೆ ಈ ದೇಗುಲ ಹೆಸರುವಾಸಿಯಾಗಿದೆ. ( Indian Pilgrims Tour)
(7 / 8)
ಪಂಚರಾಮ ದೇಗುಲಗಳಲ್ಲಿ ಆಚರಿಸುವ ಹಬ್ಬ ಹಾಗೂ ಆಚರಣೆಗಳು ಬಹಳ ವಿಶೇಷವಾಗಿವೆ. ಆದರೆ ಮಹಾಶಿವರಾತ್ರಿಯಲ್ಲಿ ಈ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ನೀವು ಮಹಾಶಿವರಾತ್ರಿ ಸಂದರ್ಭ ಆಂಧ್ರಪ್ರದೇಶ ಪ್ರವಾಸದಲ್ಲಿದ್ದರೆ ಈ ದೇಗುಲಗಳಿಗೆ ಭೇಟಿ ನೀಡಬಹುದು.
ಇತರ ಗ್ಯಾಲರಿಗಳು