Rudraksha: ರುದ್ರಾಕ್ಷಿ ಧರಿಸುವುದರಿಂದಾಗುವ ಪ್ರಯೋಜನಗಳೇನು, ಸಿಟ್ಟಿನ ನಿರ್ವಹಣೆಯಲ್ಲಿ ರುದ್ರಾಕ್ಷಿಯ ಪಾತ್ರವೇನು? ಇಲ್ಲಿದೆ ಮಾಹಿತಿ
- ಮಹಾಶಿವನಿಗೆ ಪ್ರಿಯವಾದ ವಸ್ತುಗಳಲ್ಲಿ ರುದ್ರಾಕ್ಷಿಯು ಒಂದು. ಶಿವನ ಕಣ್ಣಿನಿಂದ ರುದ್ರಾಕ್ಷಿ ಹುಟ್ಟಿತು ಎಂಬುದು ನಂಬಿಕೆ. ಈ ಪವಿತ್ರ ರುದ್ರಾಕ್ಷಿಯನ್ನು ಧರಿಸುವುದರಿಂದ ಹಲವು ಪ್ರಯೋಜನಗಳಿವೆ. ಸಿಟ್ಟನ್ನು ನಿಯಂತ್ರಿಸುವಲ್ಲಿ ರುದ್ರಾಕ್ಷಿಯು ಮಹತ್ವದ ಪಾತ್ರ ವಹಿಸುತ್ತದೆ.
- ಮಹಾಶಿವನಿಗೆ ಪ್ರಿಯವಾದ ವಸ್ತುಗಳಲ್ಲಿ ರುದ್ರಾಕ್ಷಿಯು ಒಂದು. ಶಿವನ ಕಣ್ಣಿನಿಂದ ರುದ್ರಾಕ್ಷಿ ಹುಟ್ಟಿತು ಎಂಬುದು ನಂಬಿಕೆ. ಈ ಪವಿತ್ರ ರುದ್ರಾಕ್ಷಿಯನ್ನು ಧರಿಸುವುದರಿಂದ ಹಲವು ಪ್ರಯೋಜನಗಳಿವೆ. ಸಿಟ್ಟನ್ನು ನಿಯಂತ್ರಿಸುವಲ್ಲಿ ರುದ್ರಾಕ್ಷಿಯು ಮಹತ್ವದ ಪಾತ್ರ ವಹಿಸುತ್ತದೆ.
(1 / 11)
ಮಹಾಶಿವರಾತ್ರಿ ಹಬ್ಬ ಹತ್ತಿರದಲ್ಲೇ ಇದೆ. ಈ ವರ್ಷ ಮಾರ್ಚ್ 8 ರಂದು ಮಹಾರಾತ್ರಿ ಆಚರಿಸಲಾಗುತ್ತದೆ. ಈ ಹೊತ್ತಿನಲ್ಲಿ ಶಿವನಿಗೆ ಪ್ರಿಯವಾದ ರುದ್ರಾಕ್ಷಿ ಕುರಿತು ನೀವು ತಿಳಿಯಬೇಕಾದ ಒಂದಿಷ್ಟು ವಿಚಾರಗಳು ಇಲ್ಲಿವೆ.
(2 / 11)
ರುದ್ರಾಕ್ಷಿ ಎಂದರೆ ಶಿವನ ಅಕ್ಷಿ ಅಥವಾ ಕಣ್ಣು ಎಂದರ್ಥ. ಹಿಂದೂ ಧರ್ಮದಲ್ಲಿ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹಾಗಾಗಿ ಈ ರುದ್ರಾಕ್ಷಿಗೆ ವಿಶೇಷ ಮಹತ್ವವಿದೆ. ರುದ್ರಾಕ್ಷಿಯಲ್ಲಿ ಏಕಮುಖ ರುದ್ರಾಕ್ಷಿಯಿಂದ ಇಪ್ಪತ್ತೊಂದು ಮುಖದ ರುದ್ರಾಕ್ಷಿವರೆಗೆ ಇದೆ. ರುದ್ರಾಕ್ಷಿಯನ್ನು ಧರಿಸಿದವರು ಯಾವುದೇ ಕೆಟ್ಟ ಕೆಲಸ ಮಾಡಬಾರದು, ಅನ್ಯಾಯದ ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ.
(3 / 11)
ರುದ್ರಾಕ್ಷಿ ಗಿಡವನ್ನು ಹಿಮಾಲಯದ ತಪ್ಪಲಿನಲ್ಲಿ ಕಾಣಬಹುದು. ನೇಪಾಳ, ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಹಾಗೂ ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲಿ ರುದ್ರಾಕ್ಷಿ ಗಿಡ ಇರುತ್ತದೆ.
(4 / 11)
ರುದ್ರಾಕ್ಷವನ್ನು ಧರಿಸುವುದರಿಂದ ಸಿಟ್ಟು ನಿಯಂತ್ರಣವಾಗುತ್ತದೆ ಎಂಬ ನಂಬಿಕೆ ಇದೆ. ಇತ್ತೀಚಿನ ಒತ್ತಡದ ಬದುಕಿನಲ್ಲಿ ಎಲ್ಲರಲ್ಲೂ ಕೋಪ ಹೆಚ್ಚಿರುವುದು ಸಹಜ. ಕೋಪದ ಕಾರಣದಿಂದ ಇನ್ನಿತರ ಸಮಸ್ಯೆಗಳೂ ಎದುರಾಗುತ್ತಿವೆ. ಈ ರೀತಿಯ ಮಾನಸಿಕ ತಲ್ಲಣಗಳನ್ನು ನಿಯಂತ್ರಿಸುವ ರುದ್ರಾಕ್ಷಿ ಮಹತ್ವದ ಪಾತ್ರ ವಹಿಸುತ್ತದೆ.
(5 / 11)
ಭಕ್ತಿಯ ಜೊತೆಗೆ ಕೋಪ ನಿರ್ವಹಣೆಗೂ ನೆರವಾಗುವ ರುದ್ರಾಕ್ಷಿಯನ್ನು ಹಲವರು ಸರದ ರೂಪದಲ್ಲಿ, ಪೆಂಡೆಂಟ್ ರೂಪದಲ್ಲಿ, ಬ್ರಾಸ್ಲೆಟ್ ರೂಪದಲ್ಲಿ ಧರಿಸುತ್ತಾರೆ. ಇದನ್ನು ಧರಿಸುವುದು ನಮ್ಮ ಭಾವನಾತ್ಮಕ ಯೋಗಕ್ಷೇಮಕ್ಕೂ ಬಹಳ ಅವಶ್ಯ.
(6 / 11)
ರುದ್ರಾಕ್ಷಿ ಮಣಿಗಳಿಂದ ಹೊರ ಸೂಸುವ ವಿಶಿಷ್ಟ ಕಂಪನಗಳು ಮನಸ್ಸಿನ ಮೇಲೆ ಹಿತವಾದ ಪರಿಣಾಮವನ್ನು ಉಂಟು ಮಾಡುತ್ತವೆ. ರುದ್ರಾಕ್ಷಿ ಧರಿಸುವುದರಿಂದ ದೈವಿಕ ಶಕ್ತಿ ನಮ್ಮ ಸುತ್ತಲೂ ಹರಡಿರುತ್ತದೆ ಎಂಬ ನಂಬಿಕೆಯೂ ಇದೆ. ಇದು ಮನಸನ್ನು ಶಾಂತವಾಗಿಸಿ, ಕೋಪದ ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
(7 / 11)
ಭಾವನಾತ್ಮಕ ಸ್ಥಿರತೆ: ರುದ್ರಾಕ್ಷಿ ಮಣಿಗಳು ಭಾವನೆಗಳಿಗೆ ಸಂಬಂಧಿಸಿದ ಗ್ರಹಗಳ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಭಾವನಾತ್ಮಕ ಸ್ಥಿರತೆಗೂ ನೆರವಾಗುತ್ತವೆ. ಕೋಪ, ಆತಂಕ, ಒತ್ತಡದಂತಹ ಭಾವನೆಗಳನ್ನು ನಿಗ್ರಹಿಸಲು ರುದ್ರಾಕ್ಷಿ ಧರಿಸುವುದು ಪರಿಹಾರ.
(8 / 11)
ಒತ್ತಡ ನಿಯಂತ್ರಿಸುತ್ತದೆ: ಕೋಪಕ್ಕೂ ಮೊದಲು ಒತ್ತಡ ಉಂಟಾಗುತ್ತದೆ. ಅತಿಯಾದ ಒತ್ತಡವು ಕೋಪವಾಗಿ ಬದಲಾಗಬಹುದು. ರುದ್ರಾಕ್ಷಿಯಲ್ಲಿರುವ ಸೂಕ್ಷ್ಮ ಶಕ್ತಿಯು ಒತ್ತಡವನ್ನು ನಿವಾರಿಸುತ್ತದೆ. ಒತ್ತಡ ನಿಯಂತ್ರಣದಿಂದ ರಕ್ತದೊತ್ತಡ ಏರುವುದು, ಹೃದಯ ಬಡಿತದ ಏರಿಳಿತ, ನಿದ್ದೆಯ ಸಮಸ್ಯೆ ಈ ಎಲ್ಲದ್ದಕ್ಕೂ ಪರಿಹಾರ ಕಂಡುಕೊಳ್ಳಬಹುದು.
(9 / 11)
ಏಕಾಗ್ರತೆ ಹೆಚ್ಚಲು ಸಹಕಾರಿ: ರುದ್ರಾಕ್ಷಿಯನ್ನು ಮಾಲೆ ಅಥವಾ ಯಾವುದೇ ರೂಪದಲ್ಲಿ ಧರಿಸುವುದರಿಂದ ಏಕಾಗ್ರತೆ ಹಾಗೂ ಗಮನ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
(10 / 11)
ಆಧ್ಯಾತ್ಮದ ಹಿನ್ನೆಲೆಯಲ್ಲೂ ರುದ್ರಾಕ್ಷಿ ಮಣಿಯನ್ನು ಬಳಸುವುದರಿಂದ ಹಲವು ರೀತಿಯ ಅನುಕೂಲಗಳಿವೆ. ಇದು ನಮ್ಮಲ್ಲಿ ಸಕಾರಾತ್ಮಕ ಭಾವ ಬೆಳೆಯಲು ಸಹಾಯ ಮಾಡುತ್ತದೆ. ನಮ್ಮಲ್ಲಿ ಹಲವರು ರುದ್ರಾಕ್ಷಿಯನ್ನು ಕೈಯಲ್ಲಿ ಹಿಡಿದು ಜಪ-ತಪ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಲು ಬಯಸುತ್ತಾರೆ.
ಇತರ ಗ್ಯಾಲರಿಗಳು