ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mangalore: ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಅದ್ಧೂರಿ ಮಹಾರಥೋತ್ಸವ; ಫೋಟೊಸ್

Mangalore: ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಅದ್ಧೂರಿ ಮಹಾರಥೋತ್ಸವ; ಫೋಟೊಸ್

  • Polali Rajarajeshwari Devi Rathotsava: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖ ನಡೆದಿದೆ. ರಥೋತ್ಸವ ನಿಮಿತ್ತ ಏನೆಲ್ಲಾ ಕಾರ್ಯಕ್ರಮಗಳಿದ್ದವು ಅನ್ನೋದನ್ನ ತಿಳಿಯಿರಿ.

ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಒಂದು ತಿಂಗಳ ಸುದೀರ್ಘ ವಾರ್ಷಿಕ ಜಾತ್ರೆಯಲ್ಲಿ ಗುರುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿದೆ.
icon

(1 / 7)

ಗುರುವಾರ (ಏಪ್ರಿಲ್ 11) ಸಂಜೆ ಸಹಸ್ರಾರು ಭಕ್ತರ ಸಮ್ಮುಖ ಮಹಾರಥೋತ್ಸವದ ತೇರನ್ನೆಳೆಯುವ ಹೊತ್ತಿನಲ್ಲಿ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಈ ಸಂದರ್ಭ ಸಿಡಿಮದ್ದು ಪ್ರದರ್ಶನವೂ ನಡೆಯಿತು.
icon

(2 / 7)

ಬುಧವಾರ (ಏಪ್ರಿಲ್ 10) ರಾತ್ರಿ ಪುರಲ್ದ ಚೆಂಡು ಖ್ಯಾತಿಯ ಕಡೇ ಚೆಂಡಿನ ಉತ್ಸವ ನಡೆದು, ಬಳಿಕ ಆಳು ಪಲ್ಲಕ್ಕಿ ರಥ ನಡೆಯಿತು. ಗುರುವಾರ ಬೆಳಗ್ಗೆ ಮಹಾಪೂಜೆ ಬಳಿಕ ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಉತ್ತರ ದಿಕ್ಕಿಗೆ ಎಳೆಯಲಾಯಿತು. 
icon

(3 / 7)

ರಥಕ್ಕೆ ವಿಶೇಷ ಪೂಜೆ, ಸಂಜೆ ರಥದಲ್ಲಿ ದೇವರಿಗೆ ಪೂಜೆಯ ಬಳಿಕ ಗುತ್ತಿನವರು ಹಾಗೂ ಭಕ್ತರು ತೆಂಗಿನಕಾಯಿ ಒಡೆದು, ರಥವನ್ನು ದೇವಸ್ಥಾನಕ್ಕೆ ಸುತ್ತು ಎಳೆದು ಗದ್ದೆಯಲ್ಲಿ ನಿಲ್ಲಿಸಲಾಯಿತು.
icon

(4 / 7)

ಸಹಸ್ರಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡು, ಅಲ್ಲೇ ಇದ್ದ ಸಂತೆಮಾರುಕಟ್ಟೆಯಲ್ಲಿ ಖರೀದಿ ವಹಿವಾಟಿನಲ್ಲಿ ತೊಡಗಿದ್ದು ಕಂಡುಬಂತು.
icon

(5 / 7)

ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ಪ್ರಮುಖರಾದ ಡಾ. ಮಂಜಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್‌… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(7 / 7)

IPL_Entry_Point

ಇತರ ಗ್ಯಾಲರಿಗಳು