Mars Transit: ಕುಂಭ ರಾಶಿಯಲ್ಲಿ ಮಂಗಳ-ಶನಿಯ ಸಂಯೋಗ, 3 ರಾಶಿಯವರಿಗೆ ಶುಭಯೋಗ; ಯಶಸ್ಸು ಹುಡುಕಿ ಬರುವ ಕಾಲ
- Mars Transit: ಮಾರ್ಚ್ 15ರಂದು ಮಂಗಳ ಗ್ರಹವು ಕುಂಭರಾಶಿಯನ್ನು ಪ್ರವೇಶಿಸಿದೆ. ಶನಿಯು ಈಗಾಗಲೇ ತನ್ನ ಜನ್ಮಸ್ಥಳವಾದ ಕುಂಭ ರಾಶಿಯಲ್ಲಿದೆ. ಮಂಗಳ ಹಾಗೂ ಶನಿಯ ಸಂಯೋಗದಿಂದ ಕೆಲವು ರಾಶಿಯವರಿಗೆ ಒಳಿತಾಗಲಿದೆ. ಹಾಗಾದರೆ ಆ ಅದೃಷ್ಟವಂತ ರಾಶಿಯವರು ಯಾರು ನೋಡಿ.
- Mars Transit: ಮಾರ್ಚ್ 15ರಂದು ಮಂಗಳ ಗ್ರಹವು ಕುಂಭರಾಶಿಯನ್ನು ಪ್ರವೇಶಿಸಿದೆ. ಶನಿಯು ಈಗಾಗಲೇ ತನ್ನ ಜನ್ಮಸ್ಥಳವಾದ ಕುಂಭ ರಾಶಿಯಲ್ಲಿದೆ. ಮಂಗಳ ಹಾಗೂ ಶನಿಯ ಸಂಯೋಗದಿಂದ ಕೆಲವು ರಾಶಿಯವರಿಗೆ ಒಳಿತಾಗಲಿದೆ. ಹಾಗಾದರೆ ಆ ಅದೃಷ್ಟವಂತ ರಾಶಿಯವರು ಯಾರು ನೋಡಿ.
(1 / 8)
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳ ಗ್ರಹವು 45 ದಿನಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಿಸುತ್ತದೆ. ಮಂಗಳನ ಸ್ಥಾನಪಲ್ಲಟವು ಎಲ್ಲಾ ರಾಶಿಗಳ ಮೇಲೂ ಭಾರಿ ಪರಿಣಾಮ ಉಂಟು ಮಾಡುತ್ತದೆ. ಈ ಗ್ರಹವು ಆತ್ಮವಿಶ್ವಾಸ, ಶಕ್ತಿ, ಧೈರ್ಯ ಮತ್ತು ಶೌರ್ಯದ ಸಂಕೇತವಾಗಿದೆ.
(2 / 8)
ನವಗ್ರಹಗಳು ಕಾಲಕಾಲಕ್ಕೆ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಕೆಲವು ಗ್ರಹಗಳು ತಿಂಗಳಿಗೊಮ್ಮೆ, ಕೆಲವು ಗ್ರಹಗಳು ವರ್ಷಕ್ಕೊಮ್ಮೆ ಸ್ಥಾನಪಲ್ಲಟ ಮಾಡುತ್ತವೆ. ಇದೀಗ ಮಂಗಳನು ಕುಂಭರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಶನಿ ಈಗಾಗಲೇ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಶನಿ ಹಾಗೂ ಮಂಗಳನ ಸಂಯೋಗದಿಂದ ಕೆಲವು ರಾಶಿಯವರಿಗೆ ಲಾಭವಾಗಲಿದೆ.
(3 / 8)
ಇದೀಗ ಮಂಗಳ ಗ್ರಹ ಶನಿಗ್ರಹದೊಂದಿಗೆ ಜೊತೆಯಾಗಿದೆ. ಮಂಗಳನು ಮಾರ್ಚ್ 15 ರಂದು ಕುಂಭರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿಯಲಿದೆ.
(4 / 8)
ವೃಷಭ: ಮಂಗಳ ಸಂಕ್ರಮಣ ವೃಷಭ ರಾಶಿಯವರಿಗೆ ಅನುಕೂಲವಾಗಿದೆ. ಕೆಲಸದ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಇರುತ್ತದೆ. ನೀವು ಕೈಗೊಂಡ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತವೆ. ಕೆಲಸ ಮಾಡುವ ಸ್ಥಳದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳ ಸಾಧ್ಯತೆ ಇದೆ.
(5 / 8)
ವೃಶ್ಚಿಕ: ಮಂಗಳನು ವೃಶ್ಚಿಕ ರಾಶಿಯವರಿಗೆ ಯೋಗಾಯೋಗವನ್ನು ನೀಡಲಿದ್ದಾನೆ. ಮಂಗಳ ನಿಮ್ಮ ರಾಶಿಯ ಅಧಿಪತಿ. ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಮಂಗಳನ ಸಂಚಾರವು ಆಸ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಸ ಮನೆ ಮತ್ತು ವಾಹನ ಖರೀದಿಸುವ ಸಾಧ್ಯತೆ ಇದೆ.
(6 / 8)
ಧನು ರಾಶಿ: ಮಂಗಳ ಸಂಕ್ರಮಣವು ಧನುರಾಶಿಯವರಿಗೆ ರಾಜಯೋಗವನ್ನು ನೀಡುತ್ತದೆ. ಈ ರಾಶಿಯ ಮೂರನೇ ಮನೆಯಲ್ಲಿ ಮಂಗಳ ಗ್ರಹ ಸಾಗುತ್ತಿದೆ. ಇದರಿಂದ ನಿಮ್ಮಲ್ಲಿ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಲಿದೆ. ಹಣ ಉಳಿತಾಯದಲ್ಲಿ ಪ್ರಗತಿ ಇದೆ. ಒಡಹುಟ್ಟಿದವರು ನಿಮ್ಮನ್ನು ಬೆಂಬಲಿಸುತ್ತಾರೆ. ಮಕ್ಕಳು ನಿಮಗೆ ಸಂತೋಷದ ಸುದ್ದಿಯನ್ನು ನೀಡಲಿದ್ದಾರೆ.
(7 / 8)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇತರ ಗ್ಯಾಲರಿಗಳು