ವಸಂತ ಪಂಚಮಿ ದಿನ ಮಕ್ಕಳ ಕೈಯಲ್ಲಿ ಈ ಕೆಲಸ ಮಾಡಿಸಿದ್ರೆ ಜೀವನದಲ್ಲಿ ಉತ್ತಮ ಸಾಧನೆ ಮಾಡ್ತಾರೆ -Vasantha Panchami
Saraswati Puja 2024 Date: ವಸಂತ ಪಂಚಮಿ ದಿನ ಮಕ್ಕಳ ಕೈಯಲ್ಲಿ ಕೆಲ ವಿಶೇಷ ಕೆಲಸ ಮಾಡಿಸಿದರೆ ವ್ಯಾಸಂಗದಲ್ಲಿ ಯಶಸ್ಸು ಪಡೆಯುತ್ತಾರೆ. ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಇನ್ನೂ ಏನೆಲ್ಲಾ ಪ್ರಯೋಜನ ಇದೆ ನೋಡಿ.
(1 / 7)
ವಸಂತ ಪಂಚಮಿ ಹಬ್ಬವನ್ನು 2024ರ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಸರಸ್ವತಿ ದೇವಿಯು ಮಾಸಮಾಸದ ಶುಕ್ಲಪಕ್ಷದ ಐದನೇ ದಿನದಂದು ಜನಿಸಿದಳು. ತಾಯಿ ಸರಸ್ವತಿಯ ಆಶೀರ್ವಾದದಿಂದ ಬುದ್ಧಿವಂತಿಕೆ, ಉತ್ತಮ ಮಾತು ಹಾಗೂ ಕಲೆಯನ್ನು ಪಡೆಯುತ್ತಾರೆ.
(2 / 7)
ಸರಸ್ವತಿ ದೇವಿಯ ಅನುಗ್ರಹದಿಂದ ಕಲೆ, ಸಂಗೀತ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸು ಸಾಧಿಸುತ್ತಾರೆ ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ, ವಸಂತ ಪಂಚಮಿಯಂದು ಕೆಲವು ವಿಶೇಷ ಕೆಲಸಗಳನ್ನು ಮಾಡಬೇಕು. ವಿಶೇಷವಾಗಿ ಮಕ್ಕಳು ಇದನ್ನು ಮಾಡುವುದರಿಂದ ಸರಸ್ವತಿ ದೇವಿಯು ಅವರ ಜೀವನದುದ್ದಕ್ಕೂ ಆಶೀರ್ವದಿಸುತ್ತಾಳೆ. ಜೀವನದ ಪ್ರತಿ ಹಂತದಲ್ಲಿ ಯಶಸ್ಸು ಪಡೆಯುತ್ತಾರೆ.
(3 / 7)
ಓದುವುದರಲ್ಲಿ ಆಸಕ್ತಿಯಿಲ್ಲದೆ ಪದೇ ಪದೆ ವಿಚಲಿತರಾಗುವ ಮಕ್ಕಳೊಂದಿಗೆ ವಸಂತ ಪಂಚಮಿಯಂದು ಸರಸ್ವತಿ ದಜೇವಿಯ ಪೂಜೆಯನ್ನು ಮಾಡಬೇಕು. ವಸಂತ ಪಂಚಮಿಯಂದು ಮಕ್ಕಳ ಕೈಯಿಂದ ಸರಸ್ವತಿಗೆ ಹಳದಿ ಹೂಗಳು, ಹಣ್ಣುಗಳು ಮತ್ತು ಬೆಲ್ಲದ ಅವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಸರಸ್ವತಿ ದೇವಿಯು ಪ್ರಸನ್ನಳಾಗುತ್ತಾಳೆ. ಮಕ್ಕಳ ಬೌದ್ಧಿಕ ಬೆಳವಣಿಗೆ ವೃದ್ಧಿಸುತ್ತದೆ. ಮಕ್ಕಳ ಮೇಲೆ ಸರಸ್ವತಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ಇದು ಅಧ್ಯಯನದಲ್ಲಿ ಉತ್ತಮ ಸಾಧನೆಗೆ ನೆರವಾಗುತ್ತದೆ.
(4 / 7)
ಮಕ್ಕಳು ಆಯ್ಕೆ ಮಾಡಿಕೊಂಡು ಗುರಿಯನ್ನು ಮುಟ್ಟಲು ಕಡಿಮೆ ಆಸಕ್ತಿ ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಮಕ್ಕಳ ಓದುವ ಮೇಜಿನ ಬಳಿ ಸರಸ್ವತಿ ದೇವಿಯ ಫೋಟೊ ಇಟ್ಟರೆ ಅವರ ಗುರಿಗಾಗಿ ಹೋರಾಡಲು ಸ್ಪೂರ್ತಿ ಸಿಗಲಿದೆ. ಅಧ್ಯಯನದಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ.
(5 / 7)
ವಸಂತ ಪಂಚಮಿಯಂದು ಸರಿಯಾಗಿ ಮಾತನಾಡಲು ಅಥವಾ ಬರೆಯಲು ತೊಂದರೆ ಇರುವ ವಿದ್ಯಾವಂತ ಮಕ್ಕಳಿಗೆ ಬೆಳ್ಳಿಯ ಪೆನ್ನನ್ನು ಜೇನುತುಪ್ಪದಲ್ಲಿ ಅದ್ದಿ ಆ ಮಗುವಿನ ನಾಲಿಗೆ ಮೇಲೆ ಓಂ ಎಂದು ಬರೆಯಿರಿ. ಇದು ಮಾತಿನ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ. ಅವರ ಮಾತಿನ ಮುಂದೆ ಯಾರೂ ನಿಲ್ಲಲಾರರು ಅಂತ ಫಲಿತಾಂಶ ಸಿಗಲಿದೆ.(Freepik)
(6 / 7)
ಶಿಕ್ಷಣದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವ ವಿಥ್ಯಾರ್ಥಿಗಳು ವಸಂತ ಪಂಚಮಿಯಂದು ಸರಸ್ವತಿಗೆ ಬಿಳಿ ಚಂದನವನ್ನು ಅರ್ಪಿಸಬೇಕು ಮತ್ತು ಓಂ ಔಂ ಸರಸ್ವತಿ ಔಂ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ.(Freepik)
ಇತರ ಗ್ಯಾಲರಿಗಳು