Rama Navami 2024: ಶ್ರೀರಾಮನ ಜನ್ಮದಿನಾಚರಣೆಗೆ ಅಯೋಧ್ಯೆ ಸಜ್ಜು; ಮೊದಲ ರಾಮ ನವಮಿ ಸಂಭ್ರಮದಲ್ಲಿ ಕಂಗೊಳಿಸುತ್ತಿರುವ ಬಾಲರಾಮ; Photos
- ದೇಶದಾದ್ಯಂತ ಹೊಸ ಸಂವತ್ಸರದ ಮೊದಲ ಹಬ್ಬ ಶ್ರೀರಾಮ ನವಮಿ ಆಚರಣೆಯ ಸಂಭ್ರಮ ಕಳೆಗಟ್ಟಿದೆ. ಈ ವರ್ಷ ರಾಮ ನವಮಿ ಬಹಳ ವಿಶೇಷ, ಅದಕ್ಕೆ ಕಾರಣ ಅಯೋಧ್ಯೆಯ ರಾಮಮಂದಿರ. ಅಯೋಧ್ಯೆಯಲ್ಲಿ ಬಾಲ ರಾಮ ಮೊದಲ ರಾಮ ನವಮಿ ಆಚರಣೆಗೆ ಸಜ್ಜಾಗಿದ್ದು, ಅಲ್ಲಿನ ಫೋಟೊಗಳನ್ನು ಕಣ್ತುಂಬಿಕೊಳ್ಳಿ.
- ದೇಶದಾದ್ಯಂತ ಹೊಸ ಸಂವತ್ಸರದ ಮೊದಲ ಹಬ್ಬ ಶ್ರೀರಾಮ ನವಮಿ ಆಚರಣೆಯ ಸಂಭ್ರಮ ಕಳೆಗಟ್ಟಿದೆ. ಈ ವರ್ಷ ರಾಮ ನವಮಿ ಬಹಳ ವಿಶೇಷ, ಅದಕ್ಕೆ ಕಾರಣ ಅಯೋಧ್ಯೆಯ ರಾಮಮಂದಿರ. ಅಯೋಧ್ಯೆಯಲ್ಲಿ ಬಾಲ ರಾಮ ಮೊದಲ ರಾಮ ನವಮಿ ಆಚರಣೆಗೆ ಸಜ್ಜಾಗಿದ್ದು, ಅಲ್ಲಿನ ಫೋಟೊಗಳನ್ನು ಕಣ್ತುಂಬಿಕೊಳ್ಳಿ.
(1 / 7)
ಭಗವಾನ್ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ 2024ರ ರಾಮನವಮಿ ಆಚರಣೆಯ ಸಂಭ್ರಮ ಜೋರಾಗಿದೆ. ಈ ವರ್ಷ ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆಗೊಂಡಿದ್ದು, ಏಪ್ರಿಲ್ 17ರ ಮೊದಲ ರಾಮ ನವಮಿಗೆ ಬಾಲರಾಮ ಎದುರು ನೋಡುತ್ತಿದ್ದಾನೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮ ನವಮಿ ಆಚಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಬಾಲರಾಮನನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಫೋಟೊಗಳನ್ನು ಕಣ್ತುಂಬಿಕೊಳ್ಳಿ.
(2 / 7)
ಈ ಬಾರಿ ರಾಮ ನವಮಿ ಆಚರಣೆಗೆ ಲಕ್ಷಾಂತರ ಮಂದಿ ಅಯೋಧ್ಯೆಯಲ್ಲಿ ಸೇರುವ ನಿರೀಕ್ಷೆ ಇದ್ದು, ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಲಿಸಿದೆ.
(X/@ShriRamTeerth)(3 / 7)
ಏಪ್ರಿಲ್ 9ರಂದು ಅಯೋಧ್ಯಾ ಧಾಮದಲ್ಲಿ ರಾಮ ನವಮಿ ಮೇಳ ಆರಂಭವಾಗಿತ್ತು. ಇದು ಏಪ್ರಿಲ್ 17ರ ರಾಮ ನವಮಿವರೆಗೂ ಮುಂದುವರಿಯುತ್ತದೆ. ಸುಮಾರು 25 ಲಕ್ಷ ಭಕ್ತರನ್ನು ಈ ಮೇಳ ಆಕರ್ಷಿಸಿದೆ.
(HT File Photo)(4 / 7)
ಈ ಮೇಳಕ್ಕೆ ಹಲವು ವಿಶೇಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೇಳದ ಮೈದಾನಗಳನ್ನು 7 ವಲಯಗಳು ಹಾಗೂ 39 ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರೊಂದಿಗೆ ಸಂಚಾರ ನಿರ್ವಹಣೆಯನ್ನು ಎರಡು ವಲಯಗಳು ಮತ್ತು 11 ಕ್ಲಸ್ಟರ್‌ಗಳಾಗಿ ಸಂಯೋಜಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
(ANI)(5 / 7)
ಅಯೋಧ್ಯೆ ನಗರದಲ್ಲಿ ಅದ್ಧೂರಿಯಾಗಿ ಉತ್ಸವವನ್ನು ಆಚರಿಸಲಾಗುತ್ತಿದ್ದು, ರಾಜ್ಯ ಸರ್ಕಾರವು ಇದಕ್ಕಾಗಿ ವಿಸ್ತೃತ ವ್ಯವಸ್ಥೆಗಳನ್ನು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(6 / 7)
ಜನವರಿಯಲ್ಲಿ ರಾಮಮಂದಿರದಲ್ಲಿ ನಡೆದ ಮಹಾಮಸ್ತಕಾಭಿಷೇಕದ ನಂತರ ಅತ್ಯಂತ ಅದ್ಧೂರಿಯಾಗಿ ನಡೆಯುವ ಕಾರ್ಯಕ್ರಮ ಇದಾಗಿದ್ದು, ಅಯೋಧ್ಯೆಗೆ ಅಯೋಧ್ಯೆಯೇ ಸಿಂಗಾರಗೊಂಡು ನಲಿಯುತ್ತಿದೆ. ಬಾಲರಾಮನು ದಿನಕ್ಕೊಂದು ಬಗೆಯ ಸಿಂಗಾರದಲ್ಲಿ ಭಕ್ತರನ್ನು ಸೆಳೆಯುತ್ತಿದ್ದಾನೆ.
ಇತರ ಗ್ಯಾಲರಿಗಳು