Ratha Saptami 2025: ರಥ ಸಪ್ತಮಿ ದಿನ ಸುಂದರ ರಂಗೋಲಿಗಳ ಮೂಲಕ ಮನೆ ಅಲಂಕಾರ ಮಾಡಬೇಕು ಅಂತಿದ್ರೆ ಈ ವಿನ್ಯಾಸಗಳನ್ನು ಗಮನಿಸಿ
- ಪ್ರತಿ ವರ್ಷ ಮಾಘ ಮಾಸ ಶುಕ್ಲಪಕ್ಷದಲ್ಲಿ ಬರುವ ಸಪ್ತಮಿ ದಿನ ಸೂರ್ಯದೇವನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಇದನ್ನು ರಥಸಪ್ತಮಿ ಎಂದು ಕರೆಯಲಾಗುತ್ತದೆ. ಈ ಬಾರಿ ಫೆಬ್ರುವರಿ 4 ಅಂದರೆ ನಾಳೆ ರಥಸಪ್ತಮಿ ಇದೆ. ರಥಸಪ್ತಮಿ ದಿನ ನೀವು ರಂಗೋಲಿ ವಿನ್ಯಾಸಗಳ ಮೂಲಕ ಮನೆ ಅಲಂಕರಿಸಲು ಯೋಚಿಸುತ್ತಿದ್ದರೆ ಈ ವಿನ್ಯಾಸಗಳನ್ನು ಗಮನಿಸಿ.
- ಪ್ರತಿ ವರ್ಷ ಮಾಘ ಮಾಸ ಶುಕ್ಲಪಕ್ಷದಲ್ಲಿ ಬರುವ ಸಪ್ತಮಿ ದಿನ ಸೂರ್ಯದೇವನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಇದನ್ನು ರಥಸಪ್ತಮಿ ಎಂದು ಕರೆಯಲಾಗುತ್ತದೆ. ಈ ಬಾರಿ ಫೆಬ್ರುವರಿ 4 ಅಂದರೆ ನಾಳೆ ರಥಸಪ್ತಮಿ ಇದೆ. ರಥಸಪ್ತಮಿ ದಿನ ನೀವು ರಂಗೋಲಿ ವಿನ್ಯಾಸಗಳ ಮೂಲಕ ಮನೆ ಅಲಂಕರಿಸಲು ಯೋಚಿಸುತ್ತಿದ್ದರೆ ಈ ವಿನ್ಯಾಸಗಳನ್ನು ಗಮನಿಸಿ.
(1 / 8)
ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ರಥಸ್ತಮಿ ಇರುತ್ತದೆ. ಈ ಬಾರಿ ಫೆಬ್ರವರಿ 4ರ ಬೆಳಗ್ಗೆ 7:56 ಗಂಟೆಯಿಂದ ಆರಂಭವಾಗಿ ಮರುದಿನ, ಫೆಬ್ರವರಿ 5ರ ಬೆಳಗ್ಗೆ 5:29ವರೆಗೆ ಸಪ್ತಮಿ ಇರಲಿದೆ. ದಕ್ಷಿಣ ಭಾರತದಲ್ಲಿ ಹಲವು ಕಡೆ ರಥಸಪ್ತಮಿ ಆಚರಣೆ ಇದೆ. ನಿಮ್ಮಲ್ಲೂ ರಥಸಪ್ತಮಿ ಆಚರಣೆ ಇದ್ದು ಈ ದಿನ ವಿಶೇಷ ರಂಗೋಲಿ ವಿನ್ಯಾಸಗಳ ಮೂಲಕ ಮನೆ ಅಲಂಕರಿಸುವ ಯೋಚನೆ ಮಾಡುತ್ತಿದ್ದರೆ ಈ ವಿನ್ಯಾಸಗಳನ್ನು ಗಮನಿಸಿ. ರಥಸಪ್ತಮಿ ದಿನಕ್ಕೆಂದೇ ವಿಶೇಷವಾಗಿ ಬಿಡಿಸಬಹುದಾದ ರಂಗೋಲಿ ಡಿಸೈನ್‌ಗಳಿವು.
(All Image Credit: Pinterest )(2 / 8)
ರಥಸಪ್ತಮಿಯಂದು ಸರಳವಾಗಿದ್ದು, ಬಹಳ ವಿಶಿಷ್ಟವಾಗಿ ಕಾಣಿಸುವ ರಂಗೋಲಿ ಬಿಡಿಸಬೇಕು ಅಂತಿದ್ದರೆ ನೀವು ಈ ರಂಗೋಲಿ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು. ಹಂಸ ರಥದಲ್ಲಿ ಸೂರ್ಯ ಸಾಗುತ್ತಿರುವಂತಹ ಈ ದೃಶ್ಯವು ರಥಸಪ್ತಮಿಗೆ ಹೇಳಿ ಮಾಡಿಸಿದಂತಿದೆ.
(3 / 8)
ಸುಂದರ ರಥವನ್ನೇರಿ ಸೂರ್ಯ ಸಾಗುತ್ತಿರುವಂತೆ ಚಿತ್ರಿಸಿರುವ ಈ ರಂಗೋಲಿ ರಥಸ್ತಮಿಯ ಸಂಭ್ರಮವನ್ನು ದುಪ್ಪಟ್ಟು ಮಾಡುವುದರಲ್ಲಿ ಸಂಶಯವಿಲ್ಲ. ಈ ರಂಗೋಲಿಗೆ ಸುಂದರವಾದ ಬಣ್ಣಗಳಿಂದ ಕೂಡ ಅಲಂಕರಿಸಿದ್ದು, ವಿಭಿನ್ನವಾಗಿ ಕಾಣಿಸುತ್ತಿದೆ. ನೀವು ನಿಮ್ಮ ಮನೆ ಮುಂದೆ ಅಥವಾ ದೇವರ ಮನೆ ಮುಂದೆ ಈ ರಂಗೋಲಿಯನ್ನು ಬಿಡಿಸಬಹುದು ನೋಡಿ.
(4 / 8)
ವೀಣೆ, ಹೂಗಳ ಬಳ್ಳಿಯಂತಿರು ರಂಗೋಲಿ ವಿನ್ಯಾಸದ ನಡುವೆ ಸೂರ್ಯ ರಥದಲ್ಲಿ ಸಾಗುತ್ತಿರುವಂತಹ ದೃಶ್ಯವನ್ನು ಮೂಡಿಸಿರುವ ಈ ರಂಗೋಲಿ ಚಿತ್ತಾರವೂ ಕೂಡ ಬಹಳ ವಿಭಿನ್ನವಾಗಿದೆ. ಈ ರಂಗೋಲಿ ವಿನ್ಯಾಸ ಬಿಡಿಸಲು ಕೂಡ ಸರಳವಾಗಿದ್ದು, ಬಹಳ ಅದ್ಭುತವಾಗಿ ಕಾಣಿಸುತ್ತದೆ.
(5 / 8)
ರಥ ಸಪ್ತಮಿ ಎಂದರೆ ಸೂರ್ಯನ ರಥಯಾತ್ರೆ ಆರಂಭವಾಗುವುದನ್ನು ಸೂಚಿಸುತ್ತದೆ. ಏಳು ಕುದುರೆಗಳ ರಥವನ್ನು ಏರಿ ಸೂರ್ಯನು ಸಂಚಾರ ಆರಂಭಿಸುವುದೇ ರಥ ಸಪ್ತಮಿ ಎಂಬ ನಂಬಿಕೆ ಇದೆ. ಈ ದಿನಕ್ಕೆ ಬಿಡಿಸಲು ಈ ರಂಗೋಲಿ ಹೇಳಿ ಮಾಡಿಸಿದಂತಿದೆ.
(6 / 8)
ರಥಸಪ್ತಮಿಯನ್ನು ಸಂಕೇತಿಸುವ ಸರಳ ಸುಂದರ ರಂಗೋಲಿಯನ್ನು ಬಿಡಿಸಬೇಕು ಅಂತಿದ್ದರೆ ಈ ರಂಗೋಲಿ ವಿನ್ಯಾಸವನ್ನು ಗಮನಿಸಿ. ಇದು ಬಳಸಿದ್ದು, ಕೇವಲ ಮೂರು ಬಣ್ಣ. ಆದರೂ ಈ ರಂಗೋಲಿ ಬಹಳ ಸುಂದರವಾಗಿ, ವಿಶಿಷ್ಟವಾಗಿ ಕಾಣಿಸುತ್ತಿದೆ.
(7 / 8)
ಇದು ಕೇವಲ ಎರಡು ಬಣ್ಣಗಳನ್ನು ಬಳಸಿ ರಥ ಹಾಗೂ ಸೂರ್ಯ ಚಿತ್ತಾರವನ್ನು ಮೂಡಿಸಿದ ಸರಳ ರಂಗೋಲಿ. ಈ ವರ್ಷ ರಥ ಸಪ್ತಮಿಗೆ ನೀವು ಈ ವಿನ್ಯಾಸವನ್ನೂ ಆಯ್ಕೆ ಮಾಡಿಕೊಳ್ಳಬಹುದು.
ಇತರ ಗ್ಯಾಲರಿಗಳು