Maha Shivaratri 2024: ಮನೆಯಲ್ಲಿ ಶಿವ ಪೂಜೆ ಮಾಡುವುದು ಹೇಗೆ, ಶಿವರಾತ್ರಿಯ ದಿನ ಅನುಸರಿಸಬೇಕಾದ ಕ್ರಮಗಳ ವಿವರ ಇಲ್ಲಿದೆ
2024ರ ಮಹಾಶಿವರಾತ್ರಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ಮನೆಯಲ್ಲೇ ಶಿವನನ್ನು ಪೂಜಿಸುವುದು ಹೇಗೆ, ಶಿವರಾತ್ರಿಯಂದು ಪಾಲಿಸಬೇಕಾದ ಕ್ರಮಗಳೇನು, ಎಂಬುದರ ಮಾಹಿತಿ ತಿಳಿಯಿರಿ.
(1 / 7)
ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ ಜೋರಾಗಿದೆ. ಶಿವರಾತ್ರಿ ಹಬ್ಬದಂದು ಪರಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಫಾಲ್ಗುಣ ಮಾಸದಲ್ಲಿ ಬರುವ ಶಿವರಾತ್ರಿ ಹಿಂದೂಗಳಲ್ಲಿ ಬಹಳ ವಿಶೇಷ. ಈ ಶಿವರಾತ್ರಿಯ ದಿನ ಶಿವನನ್ನು ಹೇಗೆ ಪೂಜಿಸಬೇಕು, ಮನೆಯಲ್ಲೇ ಶಿವನನ್ನು ಪೂಜಿಸಲು ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನ ತಿಳಿಯಿರಿ.
(2 / 7)
ಪುರಾಣಗಳ ಪ್ರಕಾರ, ಮನೆಯಲ್ಲಿ ಶಿವಲಿಂಗ ಅಥವಾ ಶಿವನ ವಿಗ್ರಹವು ಯಾವಾಗಲೂ ಈಶಾನ್ಯ ದಿಕ್ಕಿಗೆ ಎದುರಾಗಿ ಇಡಬೇಕು. ಹೀಗೆ ಮಾಡಿದರೆ ಶಿವನ ಕೃಪೆ ಸಿಗುತ್ತದೆ. ಶಿವಲಿಂಗವನ್ನು ಈಶಾನ್ಯ ಮೂಲೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಯಾವುದೇ ಅಪಘಡಗಳು ಸಂಭವಿಸುವುದಿಲ್ಲ. ಶಿವಲಿಂಗವನ್ನು ಇರಿಸಿರುವ ಬಲಿಪೀಠವನ್ನು ಸ್ವಚ್ಛಗೊಳಿಸಿ, ನಂತರ ಶಿವಲಿಂಗವನ್ನು ಇಡಬೇಕು.
(3 / 7)
ಪುರಾಣಗಳ ಪ್ರಕಾರ, ಮನೆಯಲ್ಲಿ ಶಿವನ ಫೋಟೊ ಅಥವಾ ಮೂರ್ತಿಯನ್ನು ಇಡುವಾಗ ಧ್ಯಾನಸ್ಥ ಸ್ಥಿತಿಯಲ್ಲಿರುವುದನ್ನು ಇಡುವುದು ಮುಖ್ಯವಾಗುತ್ತದೆ. ಅಂತಹ ಫೋಟೊ ಅಥವಾ ವಿಗ್ರಹವನ್ನು ಇಟ್ಟುಕೊಳ್ಳುವುದರಿಂದ ಎಲ್ಲಾ ರೀತಿಯ ಸಂತೋಷ, ನೆಮ್ಮದಿ ಸಿಗುತ್ತದೆ ಎಂಬುದು ನಂಬಿಕೆ.
(4 / 7)
ಶಾಸ್ತ್ರಗಳ ಪ್ರಕಾರ ಕಪ್ಪು ಬಣ್ಣದ ಶಿವಲಿಂಗವನ್ನು ಆಯ್ಕೆ ಮಾಡಬೇಕು. ಬಿಳಿಯ ಶಿವಲಿಂಗವನ್ನು ಪೂಜಿಸಬಾರದು ಎಂದು ಶಾಸ್ತ್ರಗಳು ಸೂಚಿಸುತ್ತವೆ. ಬಿಳಿಯ ಶಿವಲಿಂಗವನ್ನು ಅನೇಕರು ವೈರಾಗ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಮನೆಯಲ್ಲಿ ಕಪ್ಪು ಶಿವಲಿಂಗವು ಇರಿಸುವುದರಿಂದ ಹಲವು ಪ್ರಯೋಜನಗಳಿವೆ.
(5 / 7)
ಶಿವ ಪುರಾಣದ ಪ್ರಕಾರ, ನರ್ಮದಾ ನದಿಯ ದಡದಲ್ಲಿ ಕಲ್ಲಿನಿಂದ ಮಾಡಿದ ಶಿವಲಿಂಗವನ್ನು ಪೂಜಿಸುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಮನೆಯಲ್ಲಿ ಒಂದೇ ಕಡೆ ಒಂದಕ್ಕಿಂತ ಹೆಚ್ಚು ಶಿವಲಿಂಗಗಳನ್ನು ಇಡಬೇಡಿ. ಶಿವಲಿಂಗ ಇರುವ ಪಾತ್ರೆಯಲ್ಲಿ ಚಿನ್ನ, ಬೆಳ್ಳಿ, ತಾಮ್ರ ಇದ್ದರೆ ಒಳ್ಳೆಯದು.
(6 / 7)
ಈ ವರ್ಷ ಮಾರ್ಚ್ 8 ರಂದು ಶಿವರಾತ್ರಿ ಇದೆ. ಮಹಾಶಿವರಾತ್ರಿ ತಿಥಿಯು ಮಾರ್ಚ್ 8 ರಂದು ರಾತ್ರಿ 9:57 ಕ್ಕೆ ಪ್ರಾರಂಭವಾಗುತ್ತದೆ. ಮಾರ್ಚ್ 9 ರಂದು ಸಂಜೆ 6.17 ಕ್ಕೆ ಕೊನೆಗೊಳ್ಳುತ್ತದೆ.
ಇತರ ಗ್ಯಾಲರಿಗಳು