Thursday Remedies: ಗುರುವಾರದಂದು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ, ಹಣಕಾಸಿನ ಸಮಸ್ಯೆ ಕಾಡಬಹುದು
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರುವಾರದ ದಿನ ಈ ಕೆಲವು ಕೆಲಸಗಳನ್ನು ತಪ್ಪಿಯೂ ಮಾಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿ ಮುನಿಯುವ ಜೊತೆಗೆ ಮನೆಯಲ್ಲಿ ದಾರಿದ್ರ್ಯ ಕಾಡಬಹುದು. ಜೊತೆಗೆ ಹಣಕಾಸಿನ ಸಮಸ್ಯೆಯೂ ಎದುರಾಗುತ್ತದೆ. ಅಂತಹ ಕೆಲಸಗಳು ಯಾವುವು ನೋಡಿ.
(1 / 8)
ಗುರುವಾರವು ಗುರುದೇವನಿಗೆ ಮೀಸಲಾದ ದಿನ. ಈ ದಿನದಂದು ವಿಷ್ಣುದೇವನನ್ನು ಪೂಜಿಸುವ ವಾಡಿಕೆಯೂ ಇದೆ. ಈ ದೇವರುಗಳನ್ನು ಪೂಜಿಸುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ತುಂಬಿರುತ್ತದೆ ಎಂದು ನಂಬಲಾಗಿದೆ. ಈ ದಿನ ಉಪವಾಸವಿದ್ದು ಬಾಳೆಗಿಡವನ್ನು ಪೂಜಿಸಿ, ವಿಷ್ಣುಸಹಸ್ತ್ರನಾಮವನ್ನು ಪಠಿಸುವುದರಿಂದ ಮನೆಗೆ ಸಂಪತ್ತು ಬರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.
(2 / 8)
ದೇವರ ಪೂಜೆಯಿಂದ ಒಳಿತಾಗುವುದು ನಿಜ, ಆದರೆ ಗುರುವಾರದಂದು ಈ ಕೆಲವು ಕೆಲಸಗಳನ್ನು ಮಾಡುವುದರಿಂದ ಮನೆಗೆ ನಾವೇ ದರಿದ್ರವನ್ನು ಆಹ್ವಾನಿಸಿದಂತಾಗುವುದು ಖಂಡಿತ. ಹಾಗಾಗಿ ಈ ಕೆಲವು ಕೆಲಸಗಳನ್ನು ತಪ್ಪಿಯೂ ಮಾಡಬಾರದು. ಇದರಿಂದ ಹಣಕಾಸಿನ ಕೊರತೆಯೂ ಉಂಟಾಗಬಹುದು.
(3 / 8)
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರುವಾರದಂದು ಬಟ್ಟೆ ಒಗೆಯಬಾರದು. ಈ ದಿನ ಸಾಬೂನು ಬಳಸುವುದು ಒಳ್ಳೆಯದಲ್ಲ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗುರುವಾರದಂದು ಸೋಪ್ ಅನ್ನು ಬಳಸುವುದರಿಂದ ಜಾತಕದಲ್ಲಿ ಗುರುವಿನ ಸ್ಥಾನವನ್ನು ದುರ್ಬಲಗೊಳ್ಳುತ್ತದೆ. ಇದರಿಂದ ಸಂತೋಷ ಮತ್ತು ಸಂಪತ್ತು ದೂರಾಗುತ್ತದೆ.
( Instagram)(4 / 8)
ಗುರುವಾರದಂದು ಯಾವುದೇ ರೀತಿಯ ಹಣಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವುದು ಮಂಗಳಕರವಲ್ಲ. ಸಾಲವನ್ನು ನೀಡುವುದು ಅಥವಾ ತೆಗೆದುಕೊಳ್ಳುವುದು ತಪ್ಪು. ಗುರುವಾರ ಯಾರಿಂದಲಾದಲೂ ಸಾಲ ತೆಗೆದುಕೊಂಡರೆ ಸಾಲ ಹೆಚ್ಚುತ್ತದೆ. ಹಣಕಾಸಿನ ತೊಂದರೆಗಳು ಎದುರಾಗುತ್ತದೆ. ಆ ಕಾರಣಕ್ಕೆ ಹಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಮುಂದೂಡುವುದು ಉತ್ತಮ.
(5 / 8)
ಪುರುಷರು ಗುರುವಾರದಂದು ತಮ್ಮ ಕೂದಲು ಮತ್ತು ಗಡ್ಡವನ್ನು ಕತ್ತರಿಸಬಾರದು. ಇದರಿಂದ ಆಯುಷ್ಯ ಹಾಗೂ ಸಂಪತ್ತು ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಪೂಜಾ ಸಾಮಗ್ರಿಗಳು, ಚಾಕುಗಳು ಮತ್ತು ಕತ್ತರಿಗಳಂತಹ ಹರಿತವಾದ ವಸ್ತುಗಳನ್ನು ಖರೀದಿಸುವುದು ಸಹ ದುರದೃಷ್ಟಕರವೆಂದು ಪರಿಗಣಿಸಲಾಗಿದೆ.
(6 / 8)
ಗುರುವಾರ ಉಗುರು ಕತ್ತರಿಸುವುದು ಒಳ್ಳೆಯದಲ್ಲ. ನಂಬಿಕೆಯ ಪ್ರಕಾರ ಹೀಗೆ ಮಾಡುವುದರಿಂದ ಧನಹಾನಿ ಉಂಟಾಗುತ್ತದೆ ಮತ್ತು ಕುಟುಂಬದ ಸದಸ್ಯರ ಪ್ರಗತಿ ಕುಂಠಿತವಾಗುತ್ತದೆ. ಇಂದು ತಲೆಸ್ನಾನ ಮಾಡುವುದು ಕೂಡ ಕುಂಡಲಿಯಲ್ಲಿ ಗುರು ಭಗವಾನ್ ದುರ್ಬಲನಾಗಲು ಕಾರಣವಾಗುತ್ತದೆ.
(7 / 8)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇತರ ಗ್ಯಾಲರಿಗಳು