Spiritual News: ಸಂತಾನ ದೋಷ ಮಕ್ಕಳ ಆರೋಗ್ಯ ಸಮಸ್ಯೆ ಪರಿಹರಿಸುವ ಅಂಬಲಪಾಡಿಯ ಜನಾರ್ದನ ಶ್ರೀ ಮಹಾಕಾಳಿ ದೇವಾಲಯ; ಒಮ್ಮೆ ಭೇಟಿ ನೀಡಿ
ಮಕ್ಕಳಿರಲವ್ವ ಮನೆ ತುಂಬಾ ಎಂಬ ಮಾತನ್ನು ಎಲ್ಲರೂ ಕೇಳಿರುತ್ತೇವೆ. ಮಕ್ಕಳು ಇರುವ ಮನೆ ಸುಖ ಸಂತೋಷದಿಂದ ಕೂಡಿರುತ್ತದೆ. ಆದರೆ ಎಷ್ಟೋ ಜನರಿಗೆ ಮಕ್ಕಳ ಭಾಗ್ಯ ಇರುವುದಿಲ್ಲ.
(1 / 13)
ಗಂಡೋ, ಹೆಣ್ಣೋ ನನಗೊಂದು ಮಗು ಆದರೆ ಸಾಕು ಎಂದು ಕೆಲವರು ಆಸ್ಪತ್ರೆಗಳನ್ನು ಸುತ್ತಿದರೆ, ಕೆಲವರು ದೇವರ ಮೊರೆ ಹೋಗುತ್ತಾರೆ. (PC: Shri Janardana & Mahakali Temple, Ambalpady Facebook)
(2 / 13)
ಇನ್ನು ಆಗದು ಎಂದು ವೈದ್ಯರೇ ಕೈ ಚೆಲ್ಲಿದಾಗ ಪವಾಡ ಸದೃಶ ಎಂಬಂತೆ, ವೈದ್ಯಲೋಕಕ್ಕೂ ಅಚ್ಚರಿ ಎನ್ನುವಂತೆ ಅನೇಕ ಘಟನೆಗಳು ಜರುಗಿರುವುದನ್ನು ನಾವು ಕೇಳಿದ್ದೇವೆ.
(3 / 13)
ದೈವ ಶಕ್ತಿಗಿಂತ ಮಿಗಿಲಾದದ್ದು ಏನೂ ಇಲ್ಲ. ದೇಹದ ಸಮಸ್ಯೆ ಬೇರೆ, ಜಾತಕದೋಷದಲ್ಲಿನ ಸಮಸ್ಯೆ ಬೇರೆ. ಸಂತಾನದೋಷ ಪರಿಹರಿಸುವ ಕೆಲವು ದೇವಸ್ಥಾನಗಳು ನಮ್ಮ ರಾಜ್ಯದಲ್ಲಿವೆ. ಅವುಗಳಲ್ಲಿ ಉಡುಪಿಯ ಮಹಾಕಾಳಿ ದೇವಾಲಯ ಕೂಡಾ ಒಂದು.
(4 / 13)
ಇದನ್ನು ಅಂಬಲ್‌ಪಾಡಿಯ ಜನಾರ್ದನ ಮಹಾಕಾಳಿ ದೇವಾಲಯ ಎಂದೂ ಕರೆಯಲಾಗುತ್ತದೆ. ಉಡುಪಿ ಮುಖ್ಯ ಬಸ್ ಸ್ಟ್ಯಾಂಡ್‌ನಿಂದ ಈ ದೇವಸ್ಥಾನ 3 ಕಿಲೋ ಮೀಟರ್ ದೂರದಲ್ಲಿದೆ.
(5 / 13)
ಶತ ಶತಮಾನಗಳ ಹಿಂದೆ ಅಂಬಲಪಾಡಿ ಜೈನ ಬಲ್ಲಾಳರ ಅಧೀನದಲ್ಲಿ ಇತ್ತು. ಆ ಕಾಲದಲ್ಲಿ ಇದನ್ನು ನಿಡಂಬೂರು ಎಂದು ಕರೆಯಲಾಗುತ್ತಿತ್ತು. ಇದನ್ನು ಪರಶುರಾಮ ಸೃಷ್ಠಿಸಿದ್ದು ಎಂದು ನಂಬಲಾಗಿದೆ. ಈ ದೇವಸ್ಥಾನದ ಮೂಲ ಹೆಸರು ಅಮ್ಮನ ಪಾಡಿ, ಕ್ರಮೇಣ ಈ ಹೆಸರು ಅಂಬಲಪಾಡಿ ಎಂದು ಬದಲಾಯ್ತು.
(6 / 13)
ಪಾರ್ವತಿಯ ರೂಪವಾದ ಕಾಳಿಯ ಜೊತೆಯಲ್ಲಿ ವಿಷ್ಣುವಿನ ದೇವಾಲಯ ಇರುವುದು ಇಲ್ಲಿನ ವಿಶೇಷ. ಅಂಬಲಪಾಡಿ ಜೈನರ ಸಾಮ್ರಾಜ್ಯವಾಗಿತ್ತು. ತಮ್ಮ ಯಶಸ್ಸಿಗಾಗಿ ರಾಜ ಮಹಾರಾಜರು ಶಕ್ತಿದೇವತೆಯ ಪೂಜೆಯನ್ನು ಮಾಡುವುದು ಇಲ್ಲಿ ವಾಡಿಕೆಯಾಗಿತ್ತು.
(7 / 13)
ಅದರಂತೆ ಬಲ್ಲಾಳನು ಅಂಬಲಪಾಡಿಯಲ್ಲಿ ಮಹಾಕಾಳಿಯನ್ನು ಪ್ರತಿಷ್ಠಾಪಿಸುತ್ತಾನೆ. ಕುಲದೇವತೆಯಂತೆ ಪ್ರತಿ ದಿನ ಪೂಜಿಸಲು ಆರಂಭಿಸುತ್ತಾನೆ.
(8 / 13)
ಸುತ್ತಮುತ್ತ ಅನೇಕ ಶಕ್ತಿಪೀಠಗಳು ಇದ್ದರೂ ಬಲ್ಲಾಳನಿಗೆ ಕಾಳಿಯೇ ಮೆಚ್ಚಿನ ನಂಬುಗೆಯ ದೇವತೆ ಆಗುತ್ತಾಳೆ. ದಿನ ಕಳೆದಂತೆ ಕಂದಾವರದ ಉಡುಪರು ದೇವಾಲಯ ನವೀಕರಣ ಮಾಡಿಸಿ ತಮ್ಮ ಕುಲದೈವವಾದ ಜನಾರ್ದನರ ಪ್ರತಿಷ್ಠೆ ಮಾಡುತ್ತಾರೆ. ತದ ನಂತರ ಈ ದೇವಿಯನ್ನು ಜನರು ಗ್ರಾಮದೇವತೆಯಾಗಿ ಪೂಜಿಸಲು ಆರಂಭಿಸಿದರು.
(9 / 13)
ವಾದಿರಾಜರು ಅಂಬಲಪಾಡಿಗೆ ಆಗಮಿಸಿದಾಗ ಅವರ ನೆಚ್ಚಿನ ದೈವವಾದ ಶ್ರೀ ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪಿಸುತ್ತಾರೆ. ಇದರೊಂದಿಗೆ ಗಣಪತಿಯ ದೇವಾಲವೂ ಆರಂಭವಾಗುತ್ತದೆ. ಒಟ್ಟಾರೆ ಮಹಾಕಾಳಿಯೇ ಇಲ್ಲಿ ಮುಖ್ಯ ದೇವತೆಯಾಗುತ್ತಾಳೆ.
(10 / 13)
ಮಂಗಳವಾರ, ಶುಕ್ರವಾರ, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಇಲ್ಲಿ ಬಂದು ದೇವರ ದರ್ಶನ ಮಾಡಿ ಪೂಜೆ ಮಾಡಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತವೆ. ದೀಪ ನಮಸ್ಕಾರದಿಂದ ಕುಟುಂಬದ ಆದಾಯದಲ್ಲಿ ಹೆಚ್ಚಳ ಉಂಟಾಗುತ್ತದೆ ಎಂದು ನಂಬಲಾಗಿದೆ.
(11 / 13)
ಶುಕ್ರವಾರದಂದು ಕುಂಕುಮಾರ್ಚನೆ ಮಾಡಿಸಿ ಅನ್ನದಾನ ಮಾಡಿಸಿದಲ್ಲಿ ಕುಟುಂಬದಲ್ಲಿ ಸಾಮರಸ್ಯ ಉಂಟಾಗುವುದಲ್ಲದೆ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಶನಿವಾರದಂದು ಶ್ರೀ ಆಂಜನೇಯಸ್ವಾಮಿ ಪೂಜೆ ಮಾಡಿಸಿದಲ್ಲಿ ಮಕ್ಕಳ ವಿಧ್ಯಾಭ್ಯಾಸದಲ್ಲಿ ಉನ್ನತಿ ಕಂಡುಬರುತ್ತದೆ. ಜನ್ಮದಿನದ ತಿಥಿಯಂದು ಮಹಾಕಾಳಿಗೆ ಪೂಜೆಮಾಡಿಸಿದಲ್ಲಿ ಅಪಮೃತ್ಯು ಪರಿಹಾರವಾಗುತ್ತದೆ.
(12 / 13)
ಗುರುವಾರದಂದು ಅಮ್ಮನವರ ಸೇವೆ ಮಾಡಿದಲ್ಲಿ ಸಂತಾನ ಲಾಭ ಉಂಟಾಗುತ್ತದೆ. ಮಂಗಳವಾರದ ಪೂಜೆಯಿಂದ ದಾಂಪತ್ಯದಲ್ಲಿ ಸುಖ ಶಾಂತಿ ಲಭಿಸುತ್ತದೆ. ಈ ಕ್ಷೇತ್ರದಲ್ಲಿ ಕುಳಿತು ದುರ್ಗಾಸಪ್ತಶತಿ ಪಾರಾಯಣ ಮಾಡಿದಲ್ಲಿ ಅಥವಾ ಪಾರಾಯಣ ಮಾಡಿಸಿದಲ್ಲಿ ಮನೆಯಲ್ಲಿ ಋಣಾತ್ಮಕ ಶಕ್ತಿ ಮರೆಯಾಗುತ್ತದೆ. ಪ್ರತಿ ಶುಕ್ರವಾರ ಭಕ್ತಾದಿಗಳು ದೇವರಲ್ಲಿ ತಮ್ಮ ತೊಂದರೆಯನ್ನು ಪ್ರಶ್ನೆಯ ಮುಖಾಂತರ ಕೇಳಬಹುದು.
(13 / 13)
ಈ ದೇವಸ್ಥಾನದಲ್ಲಿ ದೊರೆಯುವ ಉತ್ತರ ಬಹಳ ಕರಾರುವಕ್ಕಾಗಿ ಇರುತ್ತದೆ ಎಂದು ಈ ದೇವಸ್ಥಾನಕ್ಕೆ ಹೋಗಿ ಬಂದ ಭಕ್ತರು ಹೇಳುತ್ತಾರೆ. ಒಂದು ವೇಳೆ ದೇವಾಲಯಕ್ಕೆ ಬರಲು ಸಾಧ್ಯವಾಗದವರು ಪತ್ರದ ಮುಖಾಂತರ ಪ್ರಶ್ನೆಗಳನ್ನು ಕೇಳುತ್ತಾರೆ. ಸಾವಿರಾರು ಪತ್ರಗಳಿಗೆ ದೇವಾಲಯದಿಂದ ಉತ್ತರ ಲಭಿಸುತ್ತದೆ. ಅಮ್ಮನವರ ಮೂರ್ತಿಯು ಕೊಲ್ಕತ್ತಾದಲ್ಲಿ ಇರುವ ಕಾಳಿಕಾಮಾತೆಯನ್ನು ಹೋಲುತ್ತದೆ ಎಂದು ಜನರು ಹೇಳುತ್ತಾರೆ.
ಇತರ ಗ್ಯಾಲರಿಗಳು