Vastu Tips: ಬದುಕಿನಲ್ಲಿ ಪದೇ ಪದೇ ತೊಂದರೆಗಳು ಕಾಡ್ತಿದ್ರೆ ಈ ವಿಗ್ರಹಗಳನ್ನು ಮನೆಯಲ್ಲಿ ಇರಿಸಿ, ಸಕಲ ಸಮಸ್ಯೆಗಳಿಗೂ ಇದೇ ಪರಿಹಾರ
- Vastu Tips: ಮನೆಯಲ್ಲಿ ಹಣಕಾಸಿನ ಸಮಸ್ಯೆ, ಸಾಂಸಾರಿಕ ತೊಂದರೆ, ಆರೋಗ್ಯ ಸಮಸ್ಯೆ ಹೀಗೆ ಯಾವುದೇ ತೊಂದರೆಗಳು ಕಾಡುತ್ತಿದ್ದರೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸಬೇಕು. ವಾಸ್ತುಪ್ರಕಾರ ಈ ವಿಗ್ರಹಗಳನ್ನು ಮನೆಯಲ್ಲಿ ಇರಿಸುವುದರಿಂದ ಸಕಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.
- Vastu Tips: ಮನೆಯಲ್ಲಿ ಹಣಕಾಸಿನ ಸಮಸ್ಯೆ, ಸಾಂಸಾರಿಕ ತೊಂದರೆ, ಆರೋಗ್ಯ ಸಮಸ್ಯೆ ಹೀಗೆ ಯಾವುದೇ ತೊಂದರೆಗಳು ಕಾಡುತ್ತಿದ್ದರೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸಬೇಕು. ವಾಸ್ತುಪ್ರಕಾರ ಈ ವಿಗ್ರಹಗಳನ್ನು ಮನೆಯಲ್ಲಿ ಇರಿಸುವುದರಿಂದ ಸಕಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.
(1 / 9)
ಹಲವರು ವಿವಿಧ ಕಾರಣಗಳಿಂದಾಗಿ ತಮ್ಮ ತಮ್ಮ ಮನೆಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇದರಿಂದಾಗಿ ಸಂತೋಷ, ನೆಮ್ಮದಿ ಇಲ್ಲದಂತಾಗುತ್ತದೆ. ನಿಮ್ಮ ಮನೆಯಲ್ಲಿಯೂ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗುತ್ತಿದ್ದರೆ ವಾಸ್ತು ಪ್ರಕಾರ ಮನೆಯಲ್ಲಿ ಈ ವಿಗ್ರಹಗಳನ್ನು ಇರಿಸಿ. ಇದರಿಂದ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಹಾಗಾದರೆ ಯಾವ ಯಾವ ವಿಗ್ರಹಗಳನ್ನು ಇಡುವುದರಿಂದ ಏನೆಲ್ಲಾ ಪ್ರಯೋಜನ ಸಿಗಲಿದೆ ನೋಡಿ.
(2 / 9)
ಕುದುರೆ ವಿಗ್ರಹ: ಮನೆಯಲ್ಲಿ ಕುದುರೆ ವಿಗ್ರಹವನ್ನು ಇರಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಇದರಿಂದ ಖರ್ಚು ಕಡಿಮೆಯಾಗಿ ಹಣ ಉಳಿಸಲು ಸಾಧ್ಯವಾಗುತ್ತದೆ.
(3 / 9)
ತಾಯಿ ಹಸು ಮತ್ತು ಕರುವಿನ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಕೂಡ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಸಂಪತ್ತು ಮತ್ತು ಶಾಂತಿಯನ್ನು ನೀಡುತ್ತದೆ.
(4 / 9)
ಆನೆ ವಿಗ್ರಹವು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ಆರ್ಥಿಕ ಸಮಸ್ಯೆ ಇರುವವರು ಮನೆಯಲ್ಲಿ ಆನೆಯ ವಿಗ್ರಹವನ್ನು ಇರಿಸಬಹುದು.
(5 / 9)
ಗಣೇಶನು ಅಡೆತಡೆಗಳನ್ನು ನಿವಾರಿಸುವವನು. ಅವರ ವಿಗ್ರಹವನ್ನು ಮನೆಯಲ್ಲಿ ಇಡುವುದು ವಾಸ್ತು ಪ್ರಕಾರ ತುಂಬಾ ಮಂಗಳಕರ.
(6 / 9)
ಆಮೆಯ ವಿಗ್ರಹ: ಈ ಪ್ರಾಣಿಯ ವಿಗ್ರಹವನ್ನು ಲಕ್ಷ್ಮೀದೇವಿಗೆ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಉತ್ತರ ದಿಕ್ಕಿಗೆ ಇಡುವುದರಿಂದ ತೊಂದರೆ ಕಡಿಮೆಯಾಗುತ್ತದೆ.
(7 / 9)
ಗಿಣಿ ಪ್ರತಿಮೆ: ಮಕ್ಕಳು ಓದಿನ ಸಮಸ್ಯೆ ಎದುರಿಸುತ್ತಿದ್ದರೆ, ಅದರ ನಿವಾರಣೆಗೆ ನೀವು ಗಿಳಿ ವಿಗ್ರಹವನ್ನು ಇರಿಸಬಹುದು.
(8 / 9)
ಮೀನಿನ ವಿಗ್ರಹಗಳು: ಮನೆಯಲ್ಲಿ ಮೀನಿನ ವಿಗ್ರಹಗಳನ್ನು ಇಡುವುದು ಕೂಡ ತುಂಬಾ ಮಂಗಳಕರ. ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಂಡರೆ ಸಂಪತ್ತು ವೃದ್ಧಿಯಾಗುತ್ತದೆ. ಲಕ್ಷ್ಮೀದೇವಿಯ ಕೃಪೆ ಸದಾ ನಿಮ್ಮ ಮನೆಯ ಮೇಲಿರುತ್ತದೆ.
ಇತರ ಗ್ಯಾಲರಿಗಳು