ಚಿನ್ನ, ಬಟ್ಟೆ ಸೇರಿದಂತೆ ಸತ್ತವರ ವಸ್ತುಗಳನ್ನು ಬಳಸಬಹುದೇ? ಹಿಂದೂ ಧರ್ಮದಲ್ಲಿ ಈ ವಿಚಾರದ ಬಗ್ಗೆ ಏನು ಹೇಳಲಾಗಿದೆ?-spiritual news why should not we use dead person things such as bangles gold jewellery hindu culture rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿನ್ನ, ಬಟ್ಟೆ ಸೇರಿದಂತೆ ಸತ್ತವರ ವಸ್ತುಗಳನ್ನು ಬಳಸಬಹುದೇ? ಹಿಂದೂ ಧರ್ಮದಲ್ಲಿ ಈ ವಿಚಾರದ ಬಗ್ಗೆ ಏನು ಹೇಳಲಾಗಿದೆ?

ಚಿನ್ನ, ಬಟ್ಟೆ ಸೇರಿದಂತೆ ಸತ್ತವರ ವಸ್ತುಗಳನ್ನು ಬಳಸಬಹುದೇ? ಹಿಂದೂ ಧರ್ಮದಲ್ಲಿ ಈ ವಿಚಾರದ ಬಗ್ಗೆ ಏನು ಹೇಳಲಾಗಿದೆ?

ಕುಟುಂಬದಲ್ಲಿ ಯಾರಾದರೂ ಸತ್ತರೆ, ಅವರು ಬಳಸಿದ ವಸ್ತುಗಳನ್ನು ಮನೆಯವರು, ಅಥವಾ ಬೇರೆಯವರು ಬಳಸಬಹುದೇ? ಹೀಗೆ ಬಳಸುವುದರಿಂದ ಏನಾದರೂ ಸಮಸ್ಯೆ ಉಂಟಾಗಬಹುದೇ? ಇದರ ಬಗ್ಗೆ ಹಿಂದೂ ಧರ್ಮದಲ್ಲಿ ಏನು ಹೇಳಲಾಗಿದೆ ನೋಡೋಣ. 

ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸತ್ತವರಿಗೆ ಸಂಬಂಧಿಸಿದ ಕೆಲವೊಂದು ವಸ್ತುಗಳನ್ನು ಬಳಸಬಾರದು. ದುಬಾರಿ ವಸ್ತುಗಳು ಎಂಬ ಕಾರಣಕ್ಕೋ, ಪ್ರೀತಿ ಪಾತ್ರರು ಎಂಬ ಕಾರಣಕ್ಕೋ ಸತ್ತವರ ವಸ್ತುಗಳನ್ನು ಮನೆಯವರು ಬಳಸುತ್ತಾರೆ. ಆದರೆ ಇದು ಒಳ್ಳೆಯದಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ.
icon

(1 / 6)

ಸತ್ತ ವ್ಯಕ್ತಿಗಳು ಮೊದಲು ಬಳಸುತ್ತಿದ್ದ ಶೂಗಳು, ಕೈಗಡಿಯಾರಗಳು ಅಥವಾ ಇತರ ದೈನಂದಿನ ವಸ್ತುಗಳನ್ನು ಬಳಸಬಾರದು. ಇದರಿಂದ ಬಳಸುವವರಿಗೆ ಸಮಸ್ಯೆ ಉಂಟಾಗುತ್ತದೆ. ಆ ವ್ಯಕ್ತಿ ಸತ್ತಿರುವುದು ದೃಢವಾದರೂ ಆ ವ್ಯಕ್ತಿಯ ಆತ್ಮವು ಒಂದೇ ಸಾರಿ ನಿರ್ಗಮಿಸುವುದಿಲ್ಲ. ಆ ವ್ಯಕ್ತಿಗಳ ಆತ್ಮ ಅವರು ಬಳಸಿದ ವಸ್ತುಗಳ ಬಗ್ಗೆ ವ್ಯಾಮೋಹ ಹೊಂದಿರುತ್ತದೆ ಎಂದು ನಂಬಲಾಗಿದೆ. 
icon

(2 / 6)

ಅದರಲ್ಲೂ ಸತ್ತವರ ಬಟ್ಟೆಯನ್ನು ಬಳಸಲೇಬಾರದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಸತ್ತವರು ಧರಿಸಿದ ಬಟ್ಟೆಗಳನ್ನು ಸುಡಬೇಕು, ಇಲ್ಲದಿದ್ದರೆ ಧರಿಸಿದವರಿಗೆ ತೊಂದರೆಯಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಸತ್ತ ವ್ಯಕ್ತಿಗಳು, ಬದುಕಿದ್ದಾಗ ಇಷ್ಟಪಡುತ್ತಿದ್ದಾಗ ಬಹಳ ಇಷ್ಟಪಡುತ್ತಿದ್ದ ಬಟ್ಟೆಗಳನ್ನು ನಾಶ ಮಾಡದಿದ್ದರೆ, ಆತ್ಮಕ್ಕೆ ಇಲ್ಲಿರಬೇಕೋ, ತೆರಳಬೇಕೋ ಎಂಬ ಗೊಂದಲ ಶುರುವಾಗುತ್ತದೆ.
icon

(3 / 6)

ವ್ಯಕ್ತಿ ಬದುಕಿರುವಾಗ ಬಳಸಿದ ಹೊದಿಕೆಗಳನ್ನು ಕೂಡಾ ಬಳಸಬಾರದು.  ಅಂತಹ ಉತ್ಪನ್ನಗಳನ್ನು ಬಳಸುವುದರಿಂದ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ಯಾರೇ ನಿಧನರಾದರೂ ಅವರಿಗೆ ಸೇರಿದ ವಸ್ತುಗಳು ಭೌತಿಕವಾಗಿ ಉಳಿಯುವುದರಿಂದ ಅದು ವಿವಿಧ ಬಗೆಯ ಶಕ್ತಿಗಳಿಗೆ ವಾಸಸ್ಥಾನವಾಗುತ್ತದೆ. ಆದ್ದರಿಂದ ದೇಹಕ್ಕೆ ಹತ್ತಿರವಾದ ಎಲ್ಲಾ ಬಟ್ಟೆಗಳನ್ನು ಸುಡಬೇಕು. ಅದು ಸಾಧ್ಯವಾಗದಿದ್ದಲ್ಲಿ 11 ದಿನಗಳೊಳಗೆ ಆ ಬಟ್ಟೆಗಳನ್ನು ಶುಭ್ರವಾಗಿ ತೊಳೆದು ಯಾರಿಗಾದರೂ ಹಂಚಬೇಕು. ಒಬ್ಬರಿಗೇ ಎಲ್ಲವನ್ನೂ ಹಂಚದೆ ಅದನ್ನು ವಿಂಗಡಣೆ ಮಾಡಬೇಕು. ಈಗ ಮಾಡಿದರೆ ಆತ್ಮದ ಪ್ರಭಾವ ಅಷ್ಟಾಗಿ ಕಾಡುವುದಿಲ್ಲ. 
icon

(4 / 6)

ಒಂದು ವೇಳೆ ಸತ್ತವರ ಚಿನ್ನಾಭರಣಗಳನ್ನು ಬಳಸಬೇಕಾದರೆ ಮೊದಲು ಅದನ್ನು ಕರಗಿಸಿ ಹೊಸದನ್ನು ತಯಾರಿಸಬೇಕು ಅಂದರೆ ಚಿನ್ನದ ಸರ ಇದ್ದರೆ ಅದನ್ನು ಕರಗಿಸಿ ಬಳೆ ಅಥವಾ ಮತ್ತಾವುದೇ ಆಭರಣಗಳನ್ನು ತಯಾರಿಸಿ ಬಳಸಬಹುದು. ಹೀಗೆ ಮಾಡಿದರೆ ನಕಾರಾತ್ಮಕ ಅಂಶ ಕಡಿಮೆ ಆಗುತ್ತದೆ.
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(6 / 6)

ಇತರ ಗ್ಯಾಲರಿಗಳು