Mercury Transit: ಕುಂಭ ರಾಶಿಗೆ ಬುಧನ ಪ್ರವೇಶದಿಂದ ಈ ರಾಶಿಯವರಿಗೆ ಆಪತ್ತು; 15 ದಿನಗಳ ಕಾಲ ಸಾಕಷ್ಟು ಎಚ್ಚರ ಅವಶ್ಯ
- Mercury Transit : ಗ್ರಹಗಳ ಸಂಚಾರದಿಂದ ಒಳಿತಾಗುವುದು ಮಾತ್ರವಲ್ಲ, ಕೆಡುಕೂ ಆಗುತ್ತದೆ. ಫೆಬ್ರುವರಿಯಲ್ಲಿ ಬುಧ ಗ್ರಹವು ರಾಶಿಚಕ್ರವನ್ನು ಎರಡು ಬಾರಿ ಸಂಕ್ರಮಿಸುತ್ತದೆ. ಇದು 3 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಆ 3 ರಾಶಿಯವರು ಯಾರು, ಅವರ ಮೇಲಾಗುವ ಪರಿಣಾಮವೇನು ಎಂಬುದನ್ನು ತಿಳಿದುಕೊಳ್ಳೋಣ.
- Mercury Transit : ಗ್ರಹಗಳ ಸಂಚಾರದಿಂದ ಒಳಿತಾಗುವುದು ಮಾತ್ರವಲ್ಲ, ಕೆಡುಕೂ ಆಗುತ್ತದೆ. ಫೆಬ್ರುವರಿಯಲ್ಲಿ ಬುಧ ಗ್ರಹವು ರಾಶಿಚಕ್ರವನ್ನು ಎರಡು ಬಾರಿ ಸಂಕ್ರಮಿಸುತ್ತದೆ. ಇದು 3 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಆ 3 ರಾಶಿಯವರು ಯಾರು, ಅವರ ಮೇಲಾಗುವ ಪರಿಣಾಮವೇನು ಎಂಬುದನ್ನು ತಿಳಿದುಕೊಳ್ಳೋಣ.
(1 / 7)
ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನಿಗೆ ವಿಶೇಷ ಮಹತ್ವವಿದೆ. ಬುಧನ ಸಾಗಣೆಯು ಎಲ್ಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಫೆಬ್ರುವರಿ ತಿಂಗಳಲ್ಲಿ ಬುಧನು ಎರಡು ಬಾರಿ ಸಂಕ್ರಮಿಸಲಿದ್ದಾನೆ.
(2 / 7)
ಬುಧ ಮತ್ತು ಶನಿಯು ಕುಂಭ ರಾಶಿಯಲ್ಲಿ ಸುಮಾರು 15 ದಿನಗಳ ಕಾಲ ಇರುತ್ತಾರೆ. ಈ ಅವಧಿಯಲ್ಲಿ ಕೆಲವು ರಾಶಿಯವರು ಜಾಗರೂಕರಾಗಿರಬೇಕು. ಫೆಬ್ರವರಿ 12 ರಿಂದ 27 ರವರೆಗೆ ಬುಧ ಸಂಕ್ರಮಣ ನಡೆಯಲಿದೆ. ಈ ಸಮಯದಲ್ಲಿ 3 ರಾಶಿಯವರು ಸಾಕಷ್ಟು ಜಾಗೃತೆ ವಹಿಸಬೇಕಾಗುತ್ತದೆ
(3 / 7)
ಮಿಥುನ ರಾಶಿಯವರಿಗೆ ಬುಧ ಸಂಚಾರ ಪ್ರಯೋಜನಕಾರಿಯಲ್ಲ. ನೀವು ಈ ಸಮಯದಲ್ಲಿ ಯಾವುದೇ ಹೊಸ ವಿಷಯಗಳನ್ನು ಪ್ರಾರಂಭಿಸದಿರಿ. ವಿವಾದಗಳಿಂದ ದೂರವಿದ್ದಷ್ಟು ಒಳ್ಳೆಯದು. ಕಷ್ಟದ ಸಮಯದಲ್ಲಿ ಯಶಸ್ಸು ಪ್ರಾರಂಭವಾಗುತ್ತದೆ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಹೊರತಾಗಿಯೂ ನೀವು ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸುವುದಿಲ್ಲ. ಆರೋಗ್ಯಕ್ಕೆ ವಿಶೇಷ ಗಮನ ಕೊಡಿ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ.
(4 / 7)
ಧನು ರಾಶಿಯವರಿಗೆ ಬುಧ ಸಂಕ್ರಮಣ ಸ್ವಲ್ಪ ಕಷ್ಟವನ್ನು ತಂದೊಡ್ಡುತ್ತದೆ. ಈ ಸಮಯದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸಿ. ಯಾವುದೇ ಕಾರಣಕ್ಕೂ ಜಗಳಕ್ಕೆ ಇಳಿಯಬೇಡಿ. ಅತಿಯಾಗಿ ಯೋಚಿಸುತ್ತಾ ಸಮಯ ವ್ಯರ್ಥ ಮಾಡಬೇಡಿ. ಯಾರಿಗೂ ಸಾಲ ಕೊಡಬೇಡಿ. ಹೂಡಿಕೆಯ ಬಗ್ಗೆಯೂ ಯೋಚಿಸಬೇಡಿ. ಆರ್ಥಿಕ ನಷ್ಟವಾಗುವ ಸಂಭವವಿದೆ. ಖರ್ಚುಗಳು ಹೆಚ್ಚಾಗಬಹುದು.
(5 / 7)
ಮೀನ ರಾಶಿಯವರು ಕಠಿಣ ಸಮಯವನ್ನು ಹೊಂದಿರುತ್ತಾರೆ. ಆಗೊಮ್ಮೆ ಈಗೊಮ್ಮೆ ಯಾರಾದರೂ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಅತಿಯಾಗಿ ಯೋಚಿಸುವುದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು. ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಅನಗತ್ಯ ಒತ್ತಡ ಮತ್ತು ತಲೆನೋವು ಇರುತ್ತದೆ.
(6 / 7)
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
ಇತರ ಗ್ಯಾಲರಿಗಳು