Vastu Tips: ತುಳಸಿ ಗಿಡವನ್ನು ಮನೆಯ ಮುಖ್ಯ ದ್ವಾರದ ಬಳಿ ನೆಡಬಹುದೇ? ತುಳಸಿ ಇರಿಸಲು ವಾಸ್ತು ನಿಯಮಗಳೇನು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vastu Tips: ತುಳಸಿ ಗಿಡವನ್ನು ಮನೆಯ ಮುಖ್ಯ ದ್ವಾರದ ಬಳಿ ನೆಡಬಹುದೇ? ತುಳಸಿ ಇರಿಸಲು ವಾಸ್ತು ನಿಯಮಗಳೇನು

Vastu Tips: ತುಳಸಿ ಗಿಡವನ್ನು ಮನೆಯ ಮುಖ್ಯ ದ್ವಾರದ ಬಳಿ ನೆಡಬಹುದೇ? ತುಳಸಿ ಇರಿಸಲು ವಾಸ್ತು ನಿಯಮಗಳೇನು

  • ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಅದನ್ನು ಲಕ್ಷ್ಮೀದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಡಬಹುದೇ, ತುಳಸಿ ಗಿಡ ನೆಡಲು ಇರುವ ವಾಸ್ತು ನಿಯಮಗಳೇನು ನೋಡಿ. 

ಮನೆಯ ಮುಖ್ಯ ದ್ವಾರದಲ್ಲಿ ತುಳಸಿ ಗಿಡ ನೆಡಬಹುದೇ?ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರವು ಮನೆಗೆ ಸಂತೋಷ, ಸಮೃದ್ಧಿ ತರುವ ಜೊತೆಗೆ ಇದು ದೇವರು ಮತ್ತು ದೇವತೆಗಳು ಬರುವ ಸ್ಥಳವಾಗಿದೆ. ಹಾಗಾಗಿ ಮುಖ್ಯ ದ್ವಾರದಲ್ಲಿ ಸಕಾರಾತ್ಮಕ ಶಕ್ತಿಯನ್ನು ರವಾನಿಸುವ ವಸ್ತುಗಳನ್ನು ಇಡಬೇಕು. ತುಳಸಿ ಗಿಡವು ಹಿಂದೂ ಧರ್ಮದಲ್ಲಿ ಪವಿತ್ರ ಮತ್ತು ಪೂಜ್ಯನೀಯವಾಗಿದೆ. ತುಳಸಿಯನ್ನು ಲಕ್ಷ್ಮೀದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಡುವುದರಿಂದ ಸಂತೋಷ, ಸಮೃದ್ಧಿ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ ಎಂದು ನಂಬಲಾಗಿದೆ. ಮನೆಯ ಮುಖ್ಯ ದ್ವಾರದಲ್ಲಿ ತುಳಸಿ ಗಿಡವನ್ನು ನೆಡಬಹುದೇ ಎಂಬ ಪ್ರಶ್ನೆ ಹಲವು ಬಾರಿ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ನೋಡೋಣ. 
icon

(1 / 8)

ತುಳಸಿಗೆ ಸಂಬಂಧಿಸಿದ ವಾಸ್ತು ಪರಿಹಾರಗಳುಮನೆಯ ಮುಖ್ಯ ದ್ವಾರದಲ್ಲಿ ತುಳಸಿ ಗಿಡವನ್ನು ನೆಡಬಹುದು. ಆದರೆ ಸೂರ್ಯನ ಬೆಳಕು ಹಾಗೂ ಗಾಳಿ ಇಲ್ಲದ ಜಾಗದಲ್ಲಿ ಗಿಡ ಒಣಗಬಹುದು. ಆದ್ದರಿಂದ, ಅಂತಹ ಮನೆಗಳಲ್ಲಿ ತುಳಸಿ ಗಿಡವನ್ನು ಬಾಲ್ಕನಿಯಲ್ಲಿ ನೆಡಬೇಕು. ವಾಸ್ತು ಪ್ರಕಾರ ತುಳಸಿಯನ್ನು ಮನೆಯ ಅಂಗಳದಲ್ಲಿಯೂ ನೆಡಬಹುದು.
icon

(2 / 8)

ಮನೆಯಲ್ಲಿ ತುಳಸಿ ಗಿಡವಿದ್ದರೆ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ತುಳಸಿ ಗಿಡವು ಮನೆಯಲ್ಲಿ ಅದೃಷ್ಟವನ್ನು ಹೆಚ್ಚಿಸುತ್ತದೆ, ಆದ್ದರಿಂದ ಇದನ್ನು ಶ್ರೀ ತುಳಸಿ ಎಂದು ಕರೆಯಲಾಗುತ್ತದೆ. ಮುಖ್ಯ ದ್ವಾರದಲ್ಲಿ ತುಳಸಿ ಗಿಡವಿದ್ದರೆ ಲಕ್ಷ್ಮೀ ದೇವಿಯು ಪ್ರಸನ್ನಳಾಗುತ್ತಾಳೆ.
icon

(3 / 8)

ವಾಸ್ತು ಪ್ರಕಾರ, ತುಳಸಿಯನ್ನು ಬಾಲ್ಕನಿಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡಬೇಕು. ಉತ್ತರ ದಿಕ್ಕನ್ನು ಕುಬೇರನ ಸ್ಥಳವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ತುಳಸಿಯನ್ನು ನೆಟ್ಟರೆ ಲಕ್ಷ್ಮೀ ದೇವಿಯು ಪ್ರಸನ್ನಳಾಗುತ್ತಾಳೆ ಎಂದು ನಂಬಲಾಗಿದೆ.
icon

(4 / 8)

ತುಳಸಿಯನ್ನು ಯಾವ ದಿಕ್ಕಿನಲ್ಲಿ ನೆಡಬಾರದು?ವಾಸ್ತು ಪ್ರಕಾರ, ತುಳಸಿ ಗಿಡವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಈ ದಿಕ್ಕನ್ನು ಪೂರ್ವಜರ ವಾಸಸ್ಥಾನವೆಂದು ನಂಬಲಾಗಿದೆ. ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಲಕ್ಷ್ಮೀದೇವಿಗೆ ಅಸಮಾಧಾನಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. 
icon

(5 / 8)

ತುಳಸಿ ಗಿಡ ನೆಡಲು ಶುಭ ದಿನ ಯಾವುದು?ಗುರುವಾರ ಮತ್ತು ಶುಕ್ರವಾರ ತುಳಸಿ ಗಿಡವನ್ನು ನೆಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಗುರುವಾರ ವಿಷ್ಣುವಿಗೆ ಅರ್ಪಿತವಾಗಿದ್ದು, ಶುಕ್ರವಾರ ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾದ ದಿನವೆಂದು ಪರಿಗಣಿಸಲಾಗಿದೆ.
icon

(6 / 8)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(7 / 8)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.
icon

(8 / 8)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು