ನೀವು ಮಾಡುವ ಕೆಲಸದಲ್ಲಿ ಪದೇ ಪದೇ ಅಡೆತಡೆ ಎದುರಾಗ್ತಿದ್ಯಾ, ಪರಿಹಾರಕ್ಕೆ ಈ ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಿ
- ಕೆಲವೊಮ್ಮೆ ನಾವು ಏನೇ ಕೆಲಸ ಮಾಡಿದ್ರೂ ಅದಕ್ಕೆ ಅಡೆತಡೆ ಉಂಟಾಗಿ ಆ ಕೆಲಸ ಪೂರ್ಣಗೊಳ್ಳುವುದಿಲ್ಲ. ಹಲವು ಬಾರಿ ಪ್ರಯತ್ನ ಮಾಡಿದ ನಂತರವೂ ಯಶಸ್ಸು ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಕೆಲವು ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಬೇಕು.
- ಕೆಲವೊಮ್ಮೆ ನಾವು ಏನೇ ಕೆಲಸ ಮಾಡಿದ್ರೂ ಅದಕ್ಕೆ ಅಡೆತಡೆ ಉಂಟಾಗಿ ಆ ಕೆಲಸ ಪೂರ್ಣಗೊಳ್ಳುವುದಿಲ್ಲ. ಹಲವು ಬಾರಿ ಪ್ರಯತ್ನ ಮಾಡಿದ ನಂತರವೂ ಯಶಸ್ಸು ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಕೆಲವು ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಬೇಕು.
(1 / 7)
ತಾನು ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗಬೇಕು ಎಂದು ಪ್ರತಿಯೊಬ್ಬರೂ ಅಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಸಾಕಷ್ಟು ಪ್ರಯತ್ನಗಳ ನಂತರವೂ ಯಶಸ್ಸು ಮರೀಚಿಕೆಯಾಗುತ್ತದೆ. ಕೆಲವೊಂದು ಕೆಲಸದಲ್ಲಿ ಪದೇ ಪದೇ ಅಡೆತಡೆ ಎದುರಾಗುತ್ತದೆ. ಇದಕ್ಕೆ ವಾಸ್ತುದೋಪವೂ ಕಾರಣವಾಗಬಹುದು. ಇದಕ್ಕಾಗಿ ಈ ಕೆಲವು ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಬೇಕು.
(pixabay)(2 / 7)
ವಾಸ್ತು ಪ್ರಕಾರ, ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸಲು ಮನೆಯ ಉತ್ತರ ದಿಕ್ಕಿನಲ್ಲಿ ಈ ರೀತಿಯ ಚಿತ್ರವನ್ನು ಇರಿಸಿ. ಅದರಲ್ಲಿ ಉದ್ದಕ್ಕೆ ಸಾಗುತ್ತಿರುವ ರಸ್ತೆ ಹಾಗೂ 2 ಬದಿಗಳಲ್ಲಿ ಹಸಿರು ತುಂಬಿದ ಗಿಡಗಳು ಇರಬೇಕು. ಹೀಗೆ ಮಾಡುವುದರಿಂದ ನೀವು ಅಂದುಕೊಂಡ ಕೆಲಸದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
(pixabay)(3 / 7)
ವಾಸ್ತು ಪ್ರಕಾರ, ಮನೆಯ ಈಶಾನ್ಯ ದಿಕ್ಕಿನಲ್ಲಿ ಗೋಲ್ಡನ್ ಟೆಂಪಲ್ ಚಿತ್ರವನ್ನು ಇರಿಸಿ, ಅದರಲ್ಲಿ ಸರೋವರವಿರಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
(Pixabay)(4 / 7)
ನೀವು ಮಾಡುವ ಕೆಲಸಗಳಲ್ಲಿ ಪದೇ ಪದೇ ವಿಫಲರಾಗುತ್ತಿದ್ದರೆ ಭೈರವ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು 11 ಭಾನುವಾರಗಳ ಕಾಲ ಭೈರವನ ದರ್ಶನ ಮಾಡಿ. ವಾಸ್ತು ಪ್ರಕಾರ ಈ ರೀತಿ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ.
(istock)(5 / 7)
ವಾಸ್ತು ಪ್ರಕಾರ, ಮನೆಯ ವಾಯುವ್ಯ ದಿಕ್ಕಿನಲ್ಲಿ ಪ್ರತಿದಿನ ಅನುಲೋಮ-ವಿಲೋಮವನ್ನು ಮಾಡಬೇಕು. ಇದು ಮನೆಯ ಗಾಳಿಯ ಅಂಶವನ್ನು ಸಮತೋಲನಗೊಳಿಸುತ್ತದೆ. ಇದು ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
(pixabay)(6 / 7)
ವಾಸ್ತು ಪ್ರಕಾರ, ನೀವು ಯಾವುದೇ ಪ್ರಮುಖ ಕೆಲಸಕ್ಕಾಗಿ ಹೊರಗೆ ಹೊರಡುವ ಮೊದಲು ನಿಮ್ಮ ಕುಟುಂಬ ದೇವತೆ ಮತ್ತು ಪೂರ್ವಜರಿಗೆ ನಮಸ್ಕರಿಸಬೇಕು. ನಿಮ್ಮ ಯಾವುದೇ ಯೋಜನೆಯನ್ನು ಮುಂಚಿತವಾಗಿ ಯಾರಿಗೂ ಹೇಳಬೇಡಿ.
(pixabay)ಇತರ ಗ್ಯಾಲರಿಗಳು