ಮನೆಯಲ್ಲಿ ತುಳಸಿ ಗಿಡವನ್ನು ಯಾವ ದಿಕ್ಕಿಗೆ ನೆಡಬೇಕು, ಯಾವ ದಿನ ನೆಡುವುದು ಸೂಕ್ತ: ಇಲ್ಲಿದೆ ವಾಸ್ತು ಸಲಹೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮನೆಯಲ್ಲಿ ತುಳಸಿ ಗಿಡವನ್ನು ಯಾವ ದಿಕ್ಕಿಗೆ ನೆಡಬೇಕು, ಯಾವ ದಿನ ನೆಡುವುದು ಸೂಕ್ತ: ಇಲ್ಲಿದೆ ವಾಸ್ತು ಸಲಹೆ

ಮನೆಯಲ್ಲಿ ತುಳಸಿ ಗಿಡವನ್ನು ಯಾವ ದಿಕ್ಕಿಗೆ ನೆಡಬೇಕು, ಯಾವ ದಿನ ನೆಡುವುದು ಸೂಕ್ತ: ಇಲ್ಲಿದೆ ವಾಸ್ತು ಸಲಹೆ

ವಾಸ್ತುಶಾಸ್ತ್ರದಲ್ಲಿ ತುಳಸಿ ಗಿಡ ನೆಡಲು ಸೂಕ್ತ ದಿನ ಆರಿಸಿಕೊಳ್ಳಬೇಕು ಹಾಗೂ ಮನೆಯಲ್ಲಿ ತುಳಸಿ ಗಿಡ ನೆಡುವ ಮೊದಲು ದಿಕ್ಕನ್ನು ಗುರುತಿಸುವುದು ಮುಖ್ಯವಾಗುತ್ತದೆ. ಹಾಗಾದರೆ ಯಾವ ದಿಕ್ಕಿನಲ್ಲಿ, ಯಾವ ದಿನ ತುಳಸಿ ಗಿಡ ನೆಟ್ಟರೆ ಉತ್ತಮ.

ಹಿಂದೂ ಧರ್ಮದಲ್ಲಿ ತುಳಸಿಯನ್ನು ಲಕ್ಷ್ಮೀದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡವನ್ನು ನಿಯಮಿತವಾಗಿ ಪೂಜಿಸುವುದರಿಂದ ಲಕ್ಷ್ಮೀದೇವಿ ಸಂತುಷ್ಟಳಾಗುತ್ತಾಳೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ತುಳಸಿ ನೆಡಲು ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯ. ತುಳಸಿ ಗಿಡವನ್ನು ಯಾವ ದಿನ ತರಬೇಕು ಮತ್ತು ಯಾವ ದಿಕ್ಕಿನಲ್ಲಿ ನೆಡುವುದು ಶುಭ ಎಂಬ ವಿವರ ಇಲ್ಲಿದೆ.
icon

(1 / 6)

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಏಕಾದಶಿ ಮತ್ತು ಭಾನುವಾರದಂದು ತುಳಸಿ ಗಿಡಕ್ಕೆ ನೀರು ಹಾಕಬಾರದು. ಈ ಎರಡು ದಿನಗಳಲ್ಲಿ ತುಳಸಿ ಎಲೆಗಳನ್ನು ಕೀಳಬಾರದು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಗೆ ಕೋಪ ಬರುತ್ತದೆ ಎಂದು ಹೇಳಲಾಗುತ್ತದೆ.
icon

(2 / 6)

(pixabay)

ವಾಸ್ತು ಪ್ರಕಾರ ಗುರುವಾರ ಮತ್ತು ಶುಕ್ರವಾರ ತುಳಸಿ ಗಿಡವನ್ನು ನೆಟ್ಟರೆ ಶುಭ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ತುಳಸಿಯು ವಿಷ್ಣುವಿಗೆ ತುಂಬಾ ಪ್ರಿಯವಾದದ್ದು. ಗುರುವಾರ ವಿಷ್ಣುವಿಗೆ ಅರ್ಪಿತವಾಗಿದೆ. ಶುಕ್ರವಾರ ಲಕ್ಷ್ಮೀದೇವಿಗೆ ಅರ್ಪಿತವಾಗಿದೆ. ಆ ಕಾರಣದಿಂದ ಗುರುವಾರ ಮತ್ತು ಶುಕ್ರವಾರ ತುಳಸಿ ಗಿಡ ನೆಡುವುದು ಶುಭ.
icon

(3 / 6)

ತುಳಸಿ ಗಿಡದ ಮುಂದೆ ನಿಯಮಿತವಾಗಿ ತುಪ್ಪದ ದೀಪವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯು ಸಂತುಷ್ಟಳಾಗುತ್ತಾಳೆ ಎಂದು ನಂಬಲಾಗಿದೆ.
icon

(4 / 6)

ವಾಸ್ತು ಪ್ರಕಾರ ತುಳಸಿಯನ್ನು ಉತ್ತರ ದಿಕ್ಕಿನಲ್ಲಿ ನೆಡುವುದು ಶುಭ. ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಲಕ್ಷ್ಮೀದೇವಿಯನ್ನು ಮೆಚ್ಚಿಸಬಹುದು ಎಂದು ಹೇಳಲಾಗುತ್ತದೆ.
icon

(5 / 6)

ವಾಸ್ತು ಪ್ರಕಾರ, ತುಳಸಿ ಗಿಡವನ್ನು ಪೂರ್ವ ದಿಕ್ಕಿನಲ್ಲಿಯೂ ನೆಡಬಹುದು. ಈ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ಆರ್ಥಿಕ ಬೆಳವಣಿಗೆಯಾಗುತ್ತದೆ ಎಂದು ನಂಬಲಾಗಿದೆ.
icon

(6 / 6)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು