Vastu Tips: ಮನೆಯಲ್ಲಿ ಸದಾ ಸುಖ–ಶಾಂತಿ, ನೆಮ್ಮದಿ ತುಂಬಿರಬೇಕು ಅಂತ ಬಯಸ್ತೀರಾ; ಮುಖ್ಯ ದ್ವಾರದ ಬಳಿ ಈ ಗಿಡಗಳನ್ನು ನೆಟ್ಟು ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vastu Tips: ಮನೆಯಲ್ಲಿ ಸದಾ ಸುಖ–ಶಾಂತಿ, ನೆಮ್ಮದಿ ತುಂಬಿರಬೇಕು ಅಂತ ಬಯಸ್ತೀರಾ; ಮುಖ್ಯ ದ್ವಾರದ ಬಳಿ ಈ ಗಿಡಗಳನ್ನು ನೆಟ್ಟು ನೋಡಿ

Vastu Tips: ಮನೆಯಲ್ಲಿ ಸದಾ ಸುಖ–ಶಾಂತಿ, ನೆಮ್ಮದಿ ತುಂಬಿರಬೇಕು ಅಂತ ಬಯಸ್ತೀರಾ; ಮುಖ್ಯ ದ್ವಾರದ ಬಳಿ ಈ ಗಿಡಗಳನ್ನು ನೆಟ್ಟು ನೋಡಿ

  • Vastu Tips for Happy Home: ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ಕೆಲವು ಗಿಡಗಳನ್ನು ನೆಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಈ ಸಸ್ಯಗಳನ್ನು ನೆಡುವುದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಸಂಪತ್ತು ಮತ್ತು ಸಕಾರಾತ್ಮಕ ಶಕ್ತಿಯ ಒಳಹರಿವು ಮನೆಯ ಬಳಿ ಇರುವ ಮರಗಳು ಮತ್ತು ಸಸ್ಯಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಕೆಲವು ವಿಶೇಷ ಗಿಡಗಳನ್ನು ನೆಡುವುದರಿಂದ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಬರುತ್ತದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಲು ಕಾರಣವಾಗುತ್ತದೆ. ಇಂದು ನಾವು ಮನೆಯ ಮುಖ್ಯ ದ್ವಾರದಲ್ಲಿ ನೆಡಲು ಶುಭವೆಂದು ಪರಿಗಣಿಸಲಾದ ಸಸ್ಯಗಳ ಬಗ್ಗೆ ಹೇಳುತ್ತಿದ್ದೇವೆ. ಈ ಸಸ್ಯಗಳು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತವೆ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ. 
icon

(1 / 8)

ತುಳಸಿ ಗಿಡವಾಸ್ತು ಶಾಸ್ತ್ರದಲ್ಲಿ ತುಳಸಿಯನ್ನು ಸಕಾರಾತ್ಮಕ ಶಕ್ತಿಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಈ ಗಿಡವು ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ತುಳಸಿಯನ್ನು ನೆಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡವಿರುವ ಮನೆಯಲ್ಲಿ ಲಕ್ಷ್ಮೀ ದೇವಿಯು ಶಾಶ್ವತವಾಗಿ ವಾಸಿಸುತ್ತಾಳೆ ಎಂದು ಕೂಡ ಹೇಳಲಾಗುತ್ತದೆ.
icon

(2 / 8)

ಮಲ್ಲಿಗೆ ಗಿಡವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದಲ್ಲಿ ಮಲ್ಲಿಗೆ ಗಿಡ ಇಟ್ಟರೆ ಅದೃಷ್ಟ. ಅದರಿಂದ ಹೊರಹೊಮ್ಮುವ ಸೌಮ್ಯವಾದ ಸುವಾಸನೆಯು ಸಕಾರಾತ್ಮಕ ಭಾವವನ್ನು ಹೆಚ್ಚಿಸುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ಈ ಗಿಡವನ್ನು ನೆಡುವುದರಿಂದ ಹಣದ ಒಳಹರಿವು ಹೆಚ್ಚಾಗುತ್ತದೆ.
icon

(3 / 8)

ಜರಿ ಗಿಡ ವಾಸ್ತುದಲ್ಲಿ ಜರಿ ಗಿಡವನ್ನು ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ಈ ಗಿಡವನ್ನು ನೆಡುವುದರಿಂದ ಸಕಾರಾತ್ಮಕ ಶಕ್ತಿ ಬರುತ್ತದೆ ಮತ್ತು ಅದೃಷ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
icon

(4 / 8)

ತಾಳೆ ಗಿಡಮನೆಯ ಮುಖ್ಯ ದ್ವಾರದಲ್ಲಿ ತಾಳೆ ಗಿಡವನ್ನು ಬೆಳೆಸುವುದು ಶುಭವೆಂದು ಪರಿಗಣಿಸಲಾಗಿದೆ. ಈಗ ಅಲಂಕಾರಿಕ ತಾಳೆ ಗಿಡಗಳು ನರ್ಸರಿಗಳಲ್ಲಿ ಸಿಗುತ್ತವೆ. ಇದನ್ನು ನೆಡುವುದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
icon

(5 / 8)

ಮನಿ ಪ್ಲಾಂಟ್ಮನೆಯ ಮುಖ್ಯ ದ್ವಾರದಲ್ಲಿ ಮನಿ ಪ್ಲಾಂಟ್‌ ನೆಡುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕತೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಈ ಸಸ್ಯವನ್ನು ಮನೆಯೊಳಗೆ ಅಥವಾ ಹೊರಗೆ ನೆಟ್ಟರೂ, ಅದು ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
icon

(6 / 8)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(7 / 8)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.
icon

(8 / 8)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು