ಸದ್ಯದಲ್ಲೇ ವೃಷಭ ರಾಶಿಗೆ ಶುಕ್ರನ ಸಂಚಾರ, ಈ 3 ರಾಶಿಯವರಿಗೆ ಭಾರಿ ಅದೃಷ್ಟ, ವ್ಯವಹಾರದಲ್ಲಿ ಯಶಸ್ಸು, ಹಣದ ಸುರಿಮಳೆ
ಗ್ರಹಗಳ ಚಲನೆಯು ಮಾನವರ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಜೂನ್ 29ರಂದು ಮಧ್ಯಾಹ್ನ 2:17ಕ್ಕೆ ಶುಕ್ರ ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಆದ್ದರಿಂದ, ಈ ಮೂರು ರಾಶಿಚಕ್ರ ಚಿಹ್ನೆಗಳ ಅದೃಷ್ಟ ಬೆಳಗಲಿದೆ. ಈ 3 ರಾಶಿಯವರು ಯಾರು ನೋಡಿ.
(1 / 6)
ಜೂನ್ ಅಂತ್ಯದಲ್ಲಿ ಶುಕ್ರನು ತನ್ನದೇ ಆದ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನು ಒಂದು ರಾಶಿಯಲ್ಲಿ ಒಂದು ತಿಂಗಳು ಇದ್ದು, 12-13 ತಿಂಗಳ ನಂತರ ಮತ್ತೆ ಅದೇ ರಾಶಿಗೆ ಮರಳುತ್ತಾನೆ. ಈ ಸಂದರ್ಭದಲ್ಲಿ, ಶುಕ್ರ ತನ್ನದೇ ವೃಷಭ ರಾಶಿಗೆ ಪ್ರವೇಶ ಮಾಡವುದು ಬಹಳ ಮಹತ್ವದ್ದೆಂದು ಪರಿಗಣಿಸಲಾಗಿದೆ.
(2 / 6)
ಜೂನ್ 29ರಂದು ಮಧ್ಯಾಹ್ನ 2:17ಕ್ಕೆ ಶುಕ್ರ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಮೂರು ರಾಶಿಚಕ್ರ ಚಿಹ್ನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆ 3 ರಾಶಿಯವರ ಅದೃಷ್ಟ ಬದಲಾಗಲಿದೆ. ಅಂತಹ ರಾಶಿಯವರು ಯಾರು ಎಂಬುದನ್ನು ನೋಡೋಣ.
(3 / 6)
ಕನ್ಯಾ: ಶುಕ್ರ ಸಂಚಾರದಿಂದ ನೀವು ಉತ್ತಮ ಲಾಭ ಗಳಿಸಲಿದ್ದೀರಿ. ನಿಮ್ಮ ಕೆಲಸದಲ್ಲಿ ನೀವು ಅಪಾರ ಯಶಸ್ಸನ್ನು ಸಾಧಿಸುವಿರಿ. ಜೀವನದಲ್ಲಿ ಸಂತೋಷ ಮತ್ತು ಶಾಂತಿಯ ಹಾದಿ ಸುಗಮವಾಗುತ್ತದೆ. ಆಡಳಿತದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಈ ಅವಧಿಯಲ್ಲಿ ಆಧ್ಯಾತ್ಮಿಕ ಕಾಳಜಿಗಳು ಹೆಚ್ಚಾಗುತ್ತವೆ. ಕೌಟುಂಬಿಕ ವಿಷಯಗಳು ಸುಲಭವಾಗಿ ಬಗೆಹರಿಯುತ್ತವೆ. ನೀವು ಮನೆಯಲ್ಲಿ ಶುಭ ಕಾರ್ಯಕ್ರಮವನ್ನು ಆಯೋಜಿಸಬಹುದು.
(Pixabay)(4 / 6)
ವೃಷಭ ರಾಶಿಯವರಿಗೆ ಸಂಪತ್ತು ಮತ್ತು ಸಮೃದ್ಧಿ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಉದ್ಯಮದಲ್ಲಿ ಕೆಲಸ ಮಾಡುವವರು ಯಶಸ್ಸನ್ನು ಸಾಧಿಸುತ್ತಾರೆ. ಅವಿವಾಹಿತರು ತಮ್ಮ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ. ಮದುವೆಯ ಭಾಗ್ಯ ಕೂಡಿ ಬರಲಿದೆ. ಕೆಲಸದಲ್ಲಿ ಬಡ್ತಿ ಮತ್ತು ವ್ಯವಹಾರದಲ್ಲಿ ದೊಡ್ಡ ಲಾಭದ ಸಾಧ್ಯತೆ ಇದೆ.
(Pixabay)(5 / 6)
ಮಕರ ರಾಶಿಯವರಿಗೆ ಶುಕ್ರನ ಸಂಚಾರದಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಸಂಪತ್ತಿನ ಹೆಚ್ಚಳದೊಂದಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕಳೆದುಹೋದ ಪ್ರೀತಿ ಮರಳುತ್ತದೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಉನ್ನತ ಶಿಕ್ಷಣದ ಹಾದಿ ಸುಗಮವಾಗುತ್ತದೆ. ಅಪೂರ್ಣಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ.
ಇತರ ಗ್ಯಾಲರಿಗಳು